ಮಿತ್ತಬಾಗಿಲು: ಕೊಲ್ಲಿ ಶ್ರೀ ದುರ್ಗಾಪರಮೇಶ್ವರಿ ದುರ್ಗಾದೇವಿ ದೇವಸ್ಥಾನ ಇದರ ಬ್ರಹ್ಮ ಕಲಶೋತ್ಸವದ ಏಳನೇ ದಿನದವಾದ ಇಂದು ವಿವಿಧ ವೈದಿಕ, ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನೆರವೇರಿತು
ಧಾರ್ಮಿಕ ಉಪನ್ಯಾಸ ಆರ್ ಎಸ್ ಎಸ್ ನ ಕುಟುಂಬ ಪ್ರಬೋಧನ ಪ್ರಮುಖ ಕಜಂಪಾಡಿ ಸುಬ್ರಹ್ಮಣ್ಯ ಭಟ್ ನೀಡಿದರು..
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರಿಯ ಮುತ್ಸದ್ದಿ ಭುಜಬಲಿ ಧರ್ಮಸ್ಥಳ ವಹಿಸಿದರು.
ಮುಖ್ಯ ಅತಿಥಿಗಳಾಗಿ ಶೃಂಗೇರಿ ಮಠ ಉಡುಪಿ ಪ್ರಾಂತ್ಯದ ಧರ್ಮಾಧಿಕಾರಿ ವೇದಮೂರ್ತಿ ಪಾವಂಜೆ ವಾಗೀಶ ಶಾಸ್ತ್ರಿ ,
ಸ್ವದೇಶಿ ಜಾಗರಣ ಮಂಚ್ ಇದರ ಕ್ಷೇತ್ರ ಸಂಘಟಕ ಕೆ.,ಜಗದೀಶ್, ಜಿಲ್ಲಾ ಸ್ಥಾನಿಕ ಬ್ರಾಹ್ಮಣ ಮಹಾಮಂಡಲದ ಅಧ್ಯಕ್ಷ ಮಂಜುನಾಥ ಹೆಬ್ಬಾರ್, ಗುರುವಾಯನಕೆರೆ ಎಕ್ಸೆಲ್ ಕಾಲೇಜಿನ ಅಧ್ಯಕ್ಷ ಸುಮಂತ್ ಕುಮಾರ್ ಜೈನ್, ಕಡಿರುದ್ಯಾವರ ಶ್ರೀ ಲಕ್ಷ್ಮಿ ವೆಂಕಟೇಶ್ವರ ದೇವಸ್ಥಾನ ಮಠ ಇದರ ಆಡಳಿತ ಮೊಕ್ತೇಸರ ಕಿಶೋರ್ ಕುಮಾರ್ ವಳಂಬ್ರ, ಬೆಳ್ತಂಗಡಿ ವಕೀಲರ ಸಂಘದ ಕಾರ್ಯದರ್ಶಿ ನವೀನ್ ಬಿ.ಕೆ., ಎಸ್ ಕೆ ಡಿ ಆರ್ ಡಿ ಪಿಯ ಸೋಮಪ್ಪ ಪೂಜಾರಿ, ಉಜಿರೆ ಎಸ್ ಡಿ ಎಂ ಪಿಯು ಕಾಲೇಜಿನ ಉಪನ್ಯಾಸಕ ರಾಜೇಶ್ ಕಲ್ಬೆಟ್ಟು, ಬೈಲುವಾರು ಸಮಿತಿಯ ಪ್ರಮುಖರಾದ ನೋಣಯ್ಯ ಗೌಡ, ಕೂಸಪ್ಪ ಎಂ.ಕೆ., ವಸಂತ ನಾಯ್ಕ ಮರಿಪಾದೆ, ಆನಂದ ಗೌಡ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಮಿತ್ತಬಾಗಿಲು , ಕೊಲ್ಲಿ ಇದರ ಅಧ್ಯಕ್ಷರುಗಳಿಗೆ ಹಾಗೂ ಪ್ರಮುಖರಿಗೆ ಮತ್ತು ವರಮಹಾಲಕ್ಷ್ಮೀ ವ್ರತ ಮಹಿಳಾ ಸಮಿತಿ ಕೊಲ್ಲಿ ಇದರ ಅಧ್ಯಕ್ಷರುಗಳಿಗೆ ಮತ್ತು ಪ್ರಮುಖರಿಗೆ ಹಾಗೂ ಶ್ರೀರಾಮದಾಸ ಅಲೆವೂರಾಯ ಮುಂಡೂರು ದೇವಸ್ಥಾನದಲ್ಲಿ ತಂತ್ರಿಗಳಾಗಿ ಸೇವೆ ಸಲ್ಲಿಸದವರು ಹಾಗೂ ಜಾತ್ರೋತ್ಸವದಲ್ಲಿ ದೇವರ ಉತ್ಸವ ಮೂರ್ತಿಯನ್ನು ಹೊಒತ್ತು ಸೇವೆ ಸಲ್ಲಿಸಿದವರಿಗೆ ಗೌರವಿಸಲಾಯಿತು.
ಉಮೇಶ್ ರಾವ್ ಕೊಲ್ಲಿಪಾಲು ಸ್ವಾಗತಿಸಿದರು. ಡಾ. ಪ್ರಶಾಂತ ದಿಡುಪೆ ಕಾರ್ಯಕ್ರಮ ನಿರೂಪಿಸಿದರು. ಉಮೇಶ್ವರಿ ಬೆಡಿಗುತ್ತು ವಂದಿಸಿದರು.
ವೈದಿಕ ಕಾರ್ಯಕ್ರಮಗಳ ಅಂಗವಾಗಿ ಗಣ ಹೋಮ, ಪ್ರಾಯಶ್ಚಿತ್ತ ಹೋಮ,ಶಾಂತಿ ಹೋಮ, ತತ್ವ ಹೋಮ, ಕ್ಷೇತ್ರಪಾಲ ಪ್ರತಿಷ್ಠೆ,ಮಹಾಬಲಿ ಪೀಠ ಗರ್ಭನ್ಯಾಸ, ಮಹಾಪೂಜೆ, ದುರ್ಗಾದೇವಿ ಸನ್ನಿಧಿಯಲ್ಲಿ ಶ್ರೀಭೂತ ಬಲಿ ಉತ್ಸವ ಜರಗಿತು.