24.8 C
ಪುತ್ತೂರು, ಬೆಳ್ತಂಗಡಿ
April 10, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಬೆಳಾಲು ಪ್ರೌಢಶಾಲೆಯಲ್ಲಿ ಬೇಸಿಗೆ ಶಿಬಿರ

ಬೆಳಾಲು: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರೌಢಶಾಲೆಯಲ್ಲಿ ಶಿಕ್ಷಕ ರಕ್ಷಕ ಸಂಘ ಮತ್ತು ಹಳೆ ವಿದ್ಯಾರ್ಥಿ ಸಂಘದ ವತಿಯಿಂದ ಕ್ರೀಡೆ ಮತ್ತು ಮನೋಲ್ಲಾಸ ಶಿಬಿರ ಆರಂಭವಾಯಿತು. ಶಿಬಿರದ ಉದ್ಘಾಟನೆಯನ್ನು ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾದ ಶೇಖರ ಗೌಡ ಕೊಲ್ಲಿಮಾರ್ ರವರು ನೆರವೇರಿಸಿ ಮಾತನಾಡುತ್ತಾ, ಬೆಳಾಲು ಪ್ರೌಢಶಾಲೆಯಲ್ಲಿ ನಿರಂತರವಾಗಿ ಬೇಸಿಗೆ ಶಿಬಿರವು ಆಯೋಜನೆಗೊಳ್ಳುತ್ತಿದೆ. ಶಿಬಿರದ ಮೂಲಕ ವಿದ್ಯಾರ್ಥಿಗಳು ವಿಶೇಷ ತರಬೇತಿ ಮತ್ತು ಜ್ಞಾನವನ್ನು ಪಡೆದು, ಬದುಕಿನ ಸವಾಲುಗಳನ್ನು ಎದುರಿಸುವ ಆತ್ಮವಿಶ್ವಾಸ ಪಡೆಯಲು ಸಾಧ್ಯ ಎಂದು ಅಭಿಪ್ರಾಯಪಟ್ಚರು. ಅತಿಥಿಗಳಾಗಿ ಆಗಮಿಸಿದ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಗಣೇಶ ಕನಿಕ್ಕಿಲರವರು ಶುಭಕೋರಿದರು.


ಒಂದು ವಾರದ ಶಿಬಿರದಲ್ಲಿ ರಂಗಕಲೆ, ಗಾಯನ, ಕರಕುಶಲ, ಉಜಿರೆ ಶ್ರೀ ಧ ಮ ಕಾಲೇಜು ಭೇಟಿ, ಆರೋಗ್ಯ ಮಾಹಿತಿ, ಕತೆಗಳಲ್ಲಿ ಜೀವನ ಮೌಲ್ಯ, ಬರವಣಿಗೆ ಕಲೆ ಮೊದಲಾದ ವಿಷಯಗಳಲ್ಲಿ ತರಬೇತಿ ನಡೆಯಲಿದೆ. ವಿವಿಧ ಸಂಪನ್ಮೂಲ ವ್ಯಕ್ತಿಗಳು ಆಗಮಿಸಲಿದ್ದಾರೆ.

ಮೊದಲ ದಿನದ ಶಿಬಿರದಲ್ಲಿ ಕರಕುಶಲ ತಯಾರಿಯ ಬಗ್ಗೆ ಚಿತ್ರಕಲಾ ಶಿಕ್ಷಕರಾದ ಉಜಿರೆಯ ಶ್ರೀರಾಮ್ ಮತ್ತು ಶ್ರೀಮತಿ ಕಾದಂಬರಿ ಧರ್ಮಸ್ಥಳ ಇವರು ಸಂಪನ್ಮೂಲ ವ್ಯಕ್ತಿಗಳಾಗಿ ತರಬೇತಿಯನ್ನು ನೀಡಿದರು.

ಉದ್ಘಾಟನಾ ಸಮಾರಂಭದಲ್ಲಿ ಶಿಬಿರದ ಸಂಯೋಜಕರಾದ ಕೃಷ್ಣಾನಂದ, ಸುಮನ್ ಯು ಎಸ್ , ಶ್ರೀಮತಿ ಕೋಕಿಲ, ಶ್ರೀಮತಿ ಚಿತ್ರಾರವರು ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಾದ ಕು. ರಕ್ಷಾ (ಎಂಟನೇ ತರಗತಿ) ಸ್ವಾಗತಿಸಿ, ಕು. ಚಿನ್ಮಯಿ(9ನೇ ತರಗತಿ) ವಂದಿಸಿದರು, ಕು. ಇಂದುಮತಿ(9ನೇ ತರಗತಿ) ಕಾರ್ಯಕ್ರಮ ನಿರೂಪಿಸಿದರು.

Related posts

ಮಡಂತ್ಯಾರು: ಎಲೆಕ್ಟ್ರಿಕಲ್ ಉದಯ ಹೃದಯಾಘಾತದಿಂದ ನಿಧನ

Suddi Udaya

ಲೋಕಸಭಾ ಚುನಾವಣೆ-2024 ರ ಹಿನ್ನೆಲೆಯಲ್ಲಿ ಯುವ ಮತದಾರರೊಂದಿಗೆ ಸಂವಾದ

Suddi Udaya

ಕಕ್ಕೆನೇಜಿ ವಾಸುದೇವ ರಾವ್ ಅವರ ಅಂಗಡಿಯಲ್ಲಿ ಎಲ್ಲರ ಗಮನ ಸೆಳೆದ ತೆಂಗಿನ ಕಾಯಿ

Suddi Udaya

ಧರ್ಮಸ್ಥಳ ಮಂಜುಷಾ ವಸ್ತು ಸಂಗ್ರಹಾಲಯದಲ್ಲಿ ಶತಮಾನದ ಅದ್ಭುತ ದಂತದ ಶಿಲ್ಪಕಲೆ ಮತ್ತು ಕಲಾಕೃತಿಗಳ ಗ್ಯಾಲರಿಯ ಉದ್ಘಾಟನೆ

Suddi Udaya

ತೆಕ್ಕಾರು ಸರಳಿಕಟ್ಟೆ ಎಸ್.ವೈ.ಎಸ್. ನೂತನ ಪದಾಧಿಕಾರಿಗಳ ಆಯ್ಕೆ

Suddi Udaya

ಪಿಲ್ಯ: ಧರೆಗುರುಳಿದ ಬೃಹತ್ ಗಾತ್ರದ ಮರ, ರಸ್ತೆ ಸಂಚಾರ ಅಸ್ತವ್ಯಸ್ತ: ಸ್ಥಳೀಯ ಯುವಕರಿಂದ ತೆರವು ಕಾರ್ಯ, ಸಾರ್ವಜನಿಕರಿಂದ ಪ್ರಶಂಸೆ

Suddi Udaya
error: Content is protected !!