23.5 C
ಪುತ್ತೂರು, ಬೆಳ್ತಂಗಡಿ
April 4, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಮಾಚಾರು ಶ್ರೀ ಲಕ್ಷ್ಮಿ ಜನಾರ್ದನ ದೇವಸ್ಥಾನದ  ವರ್ಷಾವಧಿ ಜಾತ್ರಾ ಮಹೋತ್ಸವ ಆಮಂತ್ರಣ ಬಿಡುಗಡೆ   

ಉಜಿರೆ: ಉಜಿರೆ ಗ್ರಾಮದ ಮಾಚಾರು ಶ್ರೀ ಲಕ್ಷ್ಮಿ ಜನಾರ್ದನ ದೇವಸ್ಥಾನದ ವರ್ಷಾವಧಿ ಜಾತ್ರಾ ಮಹೋತ್ಸವದ ಆಮಂತ್ರಣ ಪತ್ರಿಕೆಯನ್ನು   ಎ 1  ರಂದು ಶ್ರೀ ದೇವರ ಸನ್ನಿಧಿಯಲ್ಲಿ  ಅನಾವರಣಗೊಳಿಸಲಾಯಿತು. 

ಈ ಸಂದರ್ಭದಲ್ಲಿ  ಅನುವಂಶಿಕ ಆಡಳಿತ ಮೊಕ್ತೇಸರ ಕೃಷ್ಣ  ಬೊಲ್ಮಿಣ್ಣಾಯ ,  ಗಿರಿರಾಜ ಬಾರಿತ್ತಾಯ,ಪ್ರಕಾಶ್ ಬಾರಿತ್ತಾಯ, ಶಶಿಧರ ,ಶ್ರೀ ಲಕ್ಷ್ಮಿ ಜನಾರ್ದನ ಭಜನಾ ಮಂಡಳಿ ಸದಸ್ಯರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.                               

 ಎ 15 ರಂದು  ಮಾಚಾರು ಶ್ರೀ ಲಕ್ಷ್ಮೀಜನಾರ್ದನ ದೇವರ ವಾರ್ಷಿಕ ಜಾತ್ರಾ ಮಹೋತ್ಸವವು  ಬ್ರಹ್ಮಶ್ರೀ ಕೊಯ್ಯುರು ನಂದಕುಮಾರ ತಂತ್ರಿಗಳ  ನೇತೃತ್ವದಲ್ಲಿ   ನಡೆಯಲಿದೆ.   ಬೆಳಿಗ್ಗೆ ದೇವತಾ ಪ್ರಾರ್ಥನೆ,ತೋರಣ ಪ್ರತಿಷ್ಠೆ,ಉಗ್ರಾಣ ಮುಹೂರ್ತ,ಗಣಪತಿ ಹೋಮ, ಪಂಚವಿಂಶತಿ  ಕಲಶಾರಾಧನೆ ,ಪ್ರಧಾನ ಹೋಮ, ಕಲಶಾಭಿಷೇಕ,ಮಹಾಪೂಜೆ ಹಾಗೂ  ಅನ್ನಸಂತರ್ಪಣೆ ನಡೆಯಲಿದೆ.  ಸಂಜೆ ಉಜಿರೆಯ ಶ್ರೀ ಜ ನಾರ್ದನ ಸ್ವಾಮಿ ಭಗಿನಿ ಭಜನಾ ಮಂಡಳಿ ಹಾಗು ಮಾಚಾರು ಶ್ರೀ ಲಕ್ಷ್ಮೀಜನಾರ್ದನ ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮ, ರಾತ್ರಿ ರಂಗಪೂಜೆ,ದೇವರ ಉತ್ಸವ, ರಕ್ತೇಶ್ವರಿ ಧರ್ಮದೈವ ನೇಮೋತ್ಸವ   ನಡೆಯಲಿದೆ. ಎ 16 ರಂದು  ಬೆಳಿಗ್ಗೆ ಸಂಪ್ರೋಕ್ಷಣೆ , ಪವಮಾನ  ಅಭಿಷೇಕ ಮತ್ತು ಮಹಾಪೂಜೆ ರಾತ್ರಿ ರಂಗಪೂಜೆ ಮತ್ತು ಮಂತ್ರಾಕ್ಷತೆ ನಡೆಯಲಿದೆ . ಭಕ್ತಾದಿಗಳು ಉತ್ಸವದಲ್ಲಿ ಭಾಗವಹಿಸುವಂತೆ  ದೇವಸ್ಥಾನದ  ಪ್ರಕಟಣೆ ತಿಳಿಸಿದೆ. 

Related posts

ಉಜಿರೆ: ಶ್ರೀ.ಧ.ಮಂ. ಆಂ.ಮಾ. ಶಾಲೆಯ ಸ್ಕೌಟ್ಸ್ ಗೈಡ್ಸ್ ವತಿಯಿಂದ “ರಾಷ್ಟ್ರಪತಿ ಪದಕ” ಪುರಸ್ಕೃತ ವೀರಯೋಧ ಕ್ಯಾಪ್ಟನ್ ಎಂ.ವಿ. ಪ್ರಾಂಜಲ್ ರವರಿಗೆ ಶ್ರದ್ಧಾಂಜಲಿ

Suddi Udaya

ಬೆಳ್ತಂಗಡಿ ಮಂಜುಶ್ರೀ ಸೀನಿಯರ್ ಛೇoಬರಿಗೆ “ರಾಷ್ಟ್ರೀಯ ಅಧ್ಯಕ್ಷರ ಭೇಟಿ

Suddi Udaya

ಇಂದಿನಿಂದ ಧರ್ಮಸ್ಥಳ- ಪಾಂಗಳ ಕೆ.ಎಸ್.ಆರ್.ಟಿ.ಸಿ ಬಸ್ ಪ್ರಾರಂಭ

Suddi Udaya

ನಾಳದಲ್ಲಿ ಅಯ್ಯಪ್ಪ ಪೂಜೆ- ಇರುಮುಡಿ ಕಟ್ಟುವ ಕಾರ್ಯಕ್ರಮ

Suddi Udaya

ಲಾಯಿಲ: ಕರ್ನೊಡಿ ಜಯ ಶೆಟ್ಟಿ ನಿಧನ

Suddi Udaya

ಬಳಂಜ: ಶಾರದೋತ್ಸವ ಅಂಗವಾಗಿ ಕ್ರಿಕೆಟ್ ಪಂದ್ಯಾವಳಿ, ಬಿಸಿಲು-ಮಳೆ ಲೆಕ್ಕಿಸದೆ ಆಟವಾಡಿದ ಯುವಕರು

Suddi Udaya
error: Content is protected !!