24.8 C
ಪುತ್ತೂರು, ಬೆಳ್ತಂಗಡಿ
April 1, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪುತ್ತೂರುಪ್ರಮುಖ ಸುದ್ದಿ

ಟುನಿಷಿಯ ಅಂತರಾಷ್ಟ್ರೀಯ ವಿಜ್ಞಾನ ಮೇಳ: ಆಪ್ತಚಂದ್ರಮತಿ ಮುಳಿಯರವರಿಗೆ ಗ್ಯಾಂಡ್ ಗೋಲ್ಡ್ ಮೆಡಲ್

ಪುತ್ತೂರು: ವಿವೇಕಾನಂದ ಸೆಂಟ್ರಲ್ ಸ್ಕೂಲ್‌ನ 8ನೇ ತರಗತಿಯ ವಿದ್ಯಾರ್ಥಿನಿ ಆಪ್ತ ಚಂದ್ರಮತಿ ಮುಳಿಯ ಇವರು ಆಫ್ರಿಕಾದ ಟುನಿಷಿಯದ ಟುನಿಷಿಯ ಅಸೋಸಿಯೇಷನ್‌ ಫಾರ್ ದಿ ಪ್ಯೂಚರ್ ಆಫ್ ಸೈನ್ಸ್ ಟೆಕ್ನಾಲಜಿ ((ATAST – Tunisia Association for the fu- ture of Science & Technology)) I-FEST TOP 10 WINNER ವತಿಯಿಂದ ನಡೆಸಲಾದ I-FEST ಅಂತರಾಷ್ಟ್ರೀಯ ವಿಜ್ಞಾನ ಮೇಳದಲ್ಲಿ ಟಾಪ್‌ಟೆನ್‌ ಪ್ರೆಸೆಂಟೇಷನ್‌ಗೆ ಅವಕಾಶ ಪಡೆದು ಇದೀಗ ಗ್ರಾಂಡ್ ಗೋಲ್ಡ್ ಮೆಡಲ್ ಬಹುಮಾನಕ್ಕೆ ಭಾಜನರಾಗಿದ್ದಾರೆ. ಟುನಿಷಿಯದಲ್ಲಿ ನಡೆದ ಸಮಾರಂಭದಲ್ಲಿ, ಅಸೋಸಿಯೇಷನ್ ಫಾರ್ ಟೆಕ್ನಾಲಜಿ ಆ್ಯಂಡ್ ಸೈನ್ಸ್ ಟುನಿಷಿಯದ ಸ್ಥಾಪಕ ಮತ್ತು ರಾಷ್ಟ್ರೀಯ ಅಧ್ಯಕ್ಷ ಹೇತಮ್ ಸ್ಲಿಮೇನ್ ಅವರು ಗೋಲ್ಡ್ ಮೆಡಲ್ ಪ್ರದಾನ ಮಾಡಿ ಅಭಿನಂದಿಸಿದರು.

ಆಪ್ತ ಚ೦ದ್ರ ಮತಿ ಇವರು ‘ಕಿಡ್ಡಿ ಸೇಫ್ ಕನೆಕ್ಟ್ (Kiddi Safe Connect)ಎಂಬ ಯೋಜನೆಯನ್ನು, ಮಾ.22ರಿಂದ 28ರವರೆಗೆ ಆಫ್ರಿಕಾದ ಟುನಿಷಿಯದಲ್ಲಿ ನಡೆದ ಸ್ಪರ್ಧೆಯಲ್ಲಿ ಮಂಡಿಸಿದ್ದರು. ವಿವೇಕಾನಂದ ತಾಂತ್ರಿಕ ಶಿಕ್ಷಣ ಮಹಾವಿದ್ಯಾಲಯ ಪ್ರಯೋಗಾಲಯದ ಬೋಧಕರಾದ ವೆಂಕಟೇಶ್ ಮತ್ತು ಮಂಗಳೂರಿನ ಟೆಕ್ಕೋಮಸ್ ಸಂಸ್ಥೆಯ ಸ್ಥಾಪಕರಾದ ಅಶ್ವಿನ್ ಕಲ್ಲಾಜೆ ಹಾಗೂ ಶಾಲಾ ವಿಜ್ಞಾನ ಶಿಕ್ಷಕಿ ರಂಜಿತ ಇವರ ಮಾರ್ಗದರ್ಶನದಲ್ಲಿ ಇವರು ಈ ಯೋಜನೆಯನ್ನು ಸಿದ್ಧಪಡಿಸಿದ್ದರು.

ಆಪ್ತಚಂದ್ರಮತಿ ಮುಳಿಯ ಅವರು ಪ್ರತಿಷ್ಠಿತ ಮುಳಿಯ ಜ್ಯುವೆಲ್ಸ್‌ನ ಸಿಎಂಡಿ ಕೇಶವಪ್ರಸಾದ್‌ ಮುಳಿಯ ಹಾಗೂ ಕೃಷ್ಣವೇಣಿ ಪ್ರಸಾದ್‌ ಮುಳಿಯ ದಂಪತಿಯ ಪುತ್ರಿ

Related posts

ಎಸ್‌ಡಿಟಿಯು ಬೆಳ್ತಂಗಡಿ ತಾಲೂಕು ಸಮಿತಿ ವತಿಯಿಂದ ಮಾಸಿಕ ಸಭೆ.

Suddi Udaya

ಬೆಳ್ತಂಗಡಿ ರೋಟರಿ ಕ್ಲಬ್ ನಿಂದ ಗೋಕರ್ಣ ಶ್ರೀ ಭಾರತಿ ಪತ್ರಧಾಮ, ವಿಷ್ಣುಗುಪ್ತ ವಿಶ್ವ ವಿದ್ಯಾಪೀಠಕ್ಕೆ ಸ್ಕ್ಯಾನರ್ ಕೊಡುಗೆ

Suddi Udaya

ಮೊಗ್ರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ದತ್ತು ಸ್ವೀಕಾರ

Suddi Udaya

ಉಜಿರೆ ಶ್ರೀ ಧಂ.ಮಂ. ಪ.ಪೂ ಕಾಲೇಜು : ಎನ್ನೆಸ್ಸೆಸ್ ವತಿಯಿಂದ ಸ್ವಚ್ಛತಾ ಹೀ ಸೇವಾ ಅಭಿಯಾನ

Suddi Udaya

ರಾಷ್ಟ್ರಮಟ್ಟದ ಹಿರಿಯರ ಟೆನ್ನಿಸ್ ವಾಲಿಬಾಲ್ ಪಂದ್ಯಾಟ: ಶ್ರೀ ಧ.ಮಂ. ಕ್ರೀಡಾ ಸಂಘದ ವಿದ್ಯಾರ್ಥಿಗಳು ತೃತೀಯ ಸ್ಥಾನ

Suddi Udaya

ಬೆಂಗಳೂರು ಸೆಮಿಕಂಡಕ್ಟರ್ ವಿನ್ಯಾಸ ಸಂಸ್ಥೆ: 280 ಕೋಟಿ ರೂ. ಗೆ ಇನ್ಫೋಸಿಸ್ ಸ್ವಾಧೀನ

Suddi Udaya
error: Content is protected !!
ಸುದ್ದಿ ಉದಯ ವಾಟ್ಸಪ್‌ ಗ್ರೂಪ್‌ಗೆ ಸೇರಿ