25.3 C
ಪುತ್ತೂರು, ಬೆಳ್ತಂಗಡಿ
April 4, 2025
ಶಿಕ್ಷಣ ಸಂಸ್ಥೆ

ವಿದ್ವತ್ ಪಿಯು ಕಾಲೇಜಿನ ಪ್ರೇರಣಾ ಫೌಂಡೇಶನ್ ಕೋರ್ಸ್ ವಿಧ್ಯುಕ್ತವಾಗಿ ಉದ್ಘಾಟನೆ

ಬೆಳ್ತಂಗಡಿ: ವಿದ್ವತ್ ಶಿಕ್ಷಣ ಪ್ರತಿಷ್ಠಾನದ ಮಹತ್ವಾಕಾಂಕ್ಷಿ ಸಂಸ್ಥೆಯಾದ ವಿದ್ವತ್ ಪಿಯು ಕಾಲೇಜಿನ ಪ್ರೇರಣಾ ಫೌಂಡೇಶನ್ ಕೋರ್ಸ್ ಅನ್ನು ವಿಧ್ಯುಕ್ತವಾಗಿ ಎ.2ರಂದು ಉದ್ಘಾಟಿಸಲಾಯಿತು.
ಸಂಸ್ಥೆಯ ಹಿರಿಯ ಮಾರ್ಗದರ್ಶಕರಾದ ಶ್ರೀಮತಿ ಮತ್ತು ರಾಧಾಕೃಷ್ಣ ರೈ ದಂಪತಿಗಳು ತೆಂಗಿನ ಹಿಂಗಾರದ ದಳಗಳನ್ನ ಅರಳಿಸಿ ಅನಾವರಣಗೊಳಿಸುವುದರ ಮೂಲಕ ಪ್ರೇರಣಾ ಪೌಂಡೇಶನ್ ಕೋರ್ಸ್ ಗೆ ವಿದ್ಯುಕ್ತವಾಗಿ ಚಾಲನೆ ನೀಡಿದರು.
ವಿದ್ವತ್ ಆಡಳಿತ ಮಂಡಳಿಯ ಸರ್ವ ಸದಸ್ಯರು ಜ್ಯೋತಿ ಬೆಳಗಿಸಿ, ಜ್ಞಾನದ ಜ್ಯೋತಿ ಸದಾ ಬೆಳಗುವ ವಿಶೇಷ ವಿದ್ಯಾಕೇಂದ್ರವಾಗಿ ವಿದ್ವತ್ ಬೆಳೆಯಲಿ ಎಂದು ಹಾರೈಸಿದರು.
ವಿದ್ವತ್ ಶಿಕ್ಷಣ ಪ್ರತಿಷ್ಠಾನದ ಸಂಸ್ಥಾಪಕಾಧ್ಯಕ್ಷರಾದ ಸುಭಾಶ್ಚಂದ್ರ ಶೆಟ್ಟಿಯವರು ಪ್ರಾಸ್ತಾವಿಕ ಭಾಷಣ ಮಾತನಾಡುತ್ತಾ, ಸಾಮಾನ್ಯ ವಿದ್ಯಾರ್ಥಿಗಳನ್ನು ಸ್ಪರ್ಧಾಕಾಂಕ್ಷಿಗಳನ್ನಾಗಿ ಪರಿವರ್ತಿಸುವ ಸಾಧಕರ ಮಾದರಿಯ ಪರಿಚಯಿಸಿ, ವಿದ್ವತ್ ಶಿಕ್ಷಣ ಪ್ರತಿಷ್ಠಾನದ ನುರಿತ ಹಾಗೂ ಪರಿಣತ ಉಪನ್ಯಾಸಕರ ಆಯ್ಕೆಯಿಂದ ಹಿಡಿದು ವಿದ್ಯಾರ್ಥಿಗಳಿಗೆ ಸಿಗಬೇಕಾದ ವ್ಯವಸ್ಥೆಯವರೆಗೂ ಪ್ರತಿಯೊಂದನ್ನೂ ಶಿಸ್ತುಬದ್ಧವಾಗಿ ಏ‌ರ್ಪಾಟು ಮಾಡಲಾಗಿದೆ ಎಂದು ನೆರೆದಿದ್ದ ಪೋಷಕ ಸಮುದಾಯಕ್ಕೆ ವಿವರಿಸಿದರು.
ಸಂಸ್ಥೆಯ ಶೈಕ್ಷಣಿಕ ನಿರ್ದೇಶಕರಾದ ಗಂಗಾಧರ ಇ ಮಂಡಗಳಲೆ ಪಿಯು ಹಂತದ ಸ್ಪರ್ಧಾತ್ಮಕ ಪರೀಕ್ಷೆಗಳ ಮಹತ್ವ ತಿಳಿಸಿ, ವಿದ್ವತ್ ಪಿಯು ಕಾಲೇಜಿನ ಸಮಗ್ರ ತರಬೇತಿ ಮಾದರಿಯ ಸವಿಸ್ತಾರ ಮಾಹಿತಿ ಹಂಚಿಕೊಂಡರು.

ಪೋಷಕರು ತಮ್ಮ‌ಮಕ್ಕಳ ಆಕಾಂಕ್ಷೆಗೆ ತಕ್ಕ ಪಿಯು ಶಿಕ್ಷಣ ಸಂಸ್ಥೆಯೊಂದು ಉದಯಿಸಿದ್ದು, ತಾವು ಅದರ ಪ್ರಕಾಶದ ದಿನಗಳನ್ನ ನೋಡಲು ಉತ್ಸುಕರಾಗಿರುವುದಾಗಿ ತಮ್ಮ ಮನದಾಳದ ಮಾತನ್ನು ಹಂಚಿಕೊಂಡರು. ನೀಟ್, ಜೆಇಇ ಯಂತಹಾ ಪರೀಕ್ಷೆಗಳನ್ನ ಎದುರಿಸುವಾಗ ವಿದ್ಯಾರ್ಥಿಗಳು ಒಳಗಾಗುವ ಅಸಾಮಾನ್ಯ ಒತ್ತಡ ನಿವಾರಣೆಗೆ ವಿದ್ವತ್ ಕೌನ್ಸಲಿಂಗ್(,Counselling) , ಸ್ವ ನಿಗದಿತ ಗುರಿ(Self-Target) ಹಾಗೂ ಪ್ರತಿದಿನದ ಗುರಿ ( Daily Target) ನಿಜವಾಗಿಯೂ ರಾಮಬಾಣವಾಗಿವೆ(sure-shot-success) ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ನಂತರ ಉಪನ್ಯಾಸಕರೊಂದಿಗೆ ವಿಶೇಷ ಸಂವಾದ ನಡೆಸಿದ ಮಾರ್ಗದರ್ಶಕ ಹಿತೈಷಿಗಳಾಗಿ ‌ಆಗಮಿಸಿದ್ದ ಬೆಂಗಳೂರಿನ ಪ್ರಸಿದ್ಧ ಸೆಂಟರ್ ಫಾರ್ ಎಕ್ಸಲೆನ್ಸ್ ನ ಆಡಳಿತ ನಿರ್ದೇಶಕ ರಾಮನಾಥ ಆಗರ ವಿದ್ವತ್ ಪಿಯು ಕಾಲೇಜಿನ ಶೈಕ್ಷಣಿಕ ತರಬೇತಿ ಮಾದರಿಯ ಬಗ್ಗೆ ಬಹಳ ಮೆಚ್ವುಗೆ ವ್ಯಕ್ತಪಡಿಸಿ, ಇಂತಹ ಮಾದರಿ ಕರ್ನಾಟಕದ ಯಾವ ಪಿಯು ಕಾಲೇಜಿನಲ್ಲಿಯೂ ಸಮಗ್ರವಾಗಿ ಅಳವಡಿಸಿಕೊಂಡಿಲ್ಲ ಎಂದು ಹೇಳಿ, ವಿದ್ವತ್ ತರಬೇತಿ ಮಾದರಿ ಮುಂಬರುವ ದಿನಗಳಲ್ಲಿ ಕರ್ನಾಟಕದ ಮಾದರಿಯಾದರೂ ಸಂಶಯವಿಲ್ಲ ಎಂದು ಪ್ರಶಂಶಿಸಿದರು.

ಅದಕ್ಕೂ ಮೊದಲು ಸಂಸ್ಥೆಯ ಆಡಳಿತಾಧಿಕಾರಿಗಳಾದ ಚಂದ್ರಶೇಖರ ಗೌಡ ಕಜೆ ಯವರು ವಿದ್ವತ್ ಪಿಯು ಕಾಲೇಜಿನ ವಿಷಯ ಪರಿಣತ ಉಪನ್ಯಾಸಕರ ಪರಿಚಯ ಮಾಡಿಕೊಟ್ಟರು. ಸಂಸ್ಥೆಯ ಪ್ರಾಂಶುಪಾಲರಾದ ಪ್ರಜ್ವಲ್. ಜೆ ರವರು ಪ್ರಾರ್ಥಿಸಿದರು. ಉಪನ್ಯಾಸಕಿ ಕು: ಅನುಶ್ರೀ ಕಾರ್ಯಕ್ರಮ ನಿರೂಪಿಸಿದರು.

ವಿದ್ವತ್ ಪ್ರೇರಣಾ ಪೌಂಡೇಷನ್ ಕೋರ್ಸ್ ನ CBSE/ICSE ಬ್ಯಾಚ್ -4 ನ‌ ರೆಗ್ಯುಲರ್ ತರ‌ಬೇತಿ ಎ.2 ರಿಂದ ನಡೆಯುತ್ತಿದೆ.ಸ್ಟೇಟ್ ಬೋರ್ಡ್ ವಿದ್ಯಾರ್ಥಿಗಳ ಪೌಂಡೇಷನ್ ತರಗತಿಗಳು ಏಪ್ರಿಲ್ 15 ರಿಂದ ಪ್ರಾರಂಭವಾಗುತ್ತವೆ.

ವರದಿ: ವಿದ್ವತ್ ನೆಟ್ವರ್ಕ್, ಗುರುವಾಯನಕೆರೆ.

Related posts

ಕಲ್ಮಂಜ ಸ.ಹಿ.ಪ್ರಾ. ಶಾಲೆಯ ಶತಮಾನೋತ್ಸವ ವರ್ಷದ ಕಾರ್ಯಕ್ರಮಗಳ ಉದ್ಘಾಟನೆ ಹಾಗೂ ಮನವಿ ಪತ್ರಗಳ ಬಿಡುಗಡೆ

Suddi Udaya

ಉಜಿರೆ: ಎಸ್.ಡಿ.ಎಂ ಕಾಲೇಜಿನಲ್ಲಿ ಸಿಗ್ಮಾ ಅಸೋಸಿಯೇಷನ್ ಉದ್ಘಾಟನೆ

Suddi Udaya

ಎಸ್ ಡಿ ಎಮ್ ವಸತಿ ಪಿ ಯು ಕಾಲೇಜಿನ ವಿದ್ಯಾರ್ಥಿಗಳಿಂದ ಡ್ರಾಗನ್ ತೋಟಕ್ಕೆ ಶಿಕ್ಷಣ ಪ್ರವಾಸ

Suddi Udaya

ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದಲ್ಲಿ ವಿಶ್ವ ಸ್ಕಿಜೋಫ್ರೇನಿಯಾ ದಿನಾಚರಣೆ

Suddi Udaya

ಮಕ್ಕಳ ಧ್ವನಿ ಕಾರ್ಯಕ್ರಮದ ಕವನ ಮತ್ತು ಕಥಾಗೋಷ್ಠಿಯಲ್ಲಿ ಭಾಗವಹಿಸಿದ ಬೆಳಾಲು ಶ್ರೀ ಧ. ಮಂ. ಪ್ರೌಢ ಶಾಲಾ ವಿದ್ಯಾರ್ಥಿಗಳು

Suddi Udaya

ವೇಣೂರು ಎಸ್.ಡಿ.ಎಂ ಐಟಿಐ ಯಲ್ಲಿ ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತಿಗೊಂಡ ಉಮೇಶ್ ಕೆ. ರವರಿಗೆ ಬೀಳ್ಕೊಡುಗೆ

Suddi Udaya
error: Content is protected !!