ಅರಿಕೆಗುಡ್ಡೆ ವನದುರ್ಗಾ ದೇವಸ್ಥಾನದಲ್ಲಿ ಶ್ರೀ ದೇವಿಗೆ ಧೃಡಕಲಶ: ಅಭಿನಂದನಾ ಸಭೆ

Suddi Udaya

ಹತ್ಯಡ್ಕ: ಅರಿಕೆಗುಡ್ಡೆ ವನದುರ್ಗಾ ದೇವಸ್ಥಾನದಲ್ಲಿ ಶ್ರೀ ದೇವಿಗೆ ಧೃಡಕಲಶ, ವನದುರ್ಗಾ‌ಹೋಮ, ಹಾಗೂ ಅಭಿನಂದನಾ ಸಭೆ, ಭಜನೋತ್ಸವ, ಕಾರ್ಯಕ್ರಮವು ಎ.18 ರಂದು ಜರುಗಿತು.

ನಂತರ ಅಭಿನಂದನಾ ಸಭಾ ಉತ್ತಮ ಪ್ರಾಮಾಣಿಕ ಭಕ್ತಿಯಿಂದ ಸಮಾಜದಲ್ಲಿ ಪುಣ್ಯ ಕಾರ್ಯಗಳು ನೆರೆವೇರುತ್ತದೆ. ಅದಕ್ಕೆ ಮಾದರಿ ನಮ್ಮ ಅರಿಕೆಗುಡ್ದೆ ಪುಣ್ಯಕ್ಷೇತ್ರ. ಸಾವಿರಾರು ಮಂದಿ ಕಾರ್ಯಕರ್ತರ ಅವಿರತ ಶ್ರಮಕ್ಕೆ ಅಭಿನಂದನೆ. ಈ ದೇವಾಲಯದಲ್ಲಿ ಮುಂದೆಯೂ ಸಮಾಜ ಮುಖಿ ಕಾರ್ಯವನ್ನು ಮುಂದುವರಿಸುತ್ತೇವೆ. ಅಲ್ಲದೆ ಅನ್ನದಾನ ಕಾರ್ಯ ಪ್ರಾರಂಭಿಸುತ್ತೇವೆ. ಸಂಪ್ರದಾಯದಂತೆ ಎಲ್ಲಾ ಪುಣ್ಯ ಕಾರ್ಯವನ್ನು ಇಲ್ಲಿ ನಡೆಸುತ್ತೇವೆ ಎಂದು ಹತ್ಯಡ್ಕ ಗ್ರಾಮದ ಅರಿಕೆಗುಡ್ಡೆ ಪುಣ್ಯಕ್ಷೇತ್ರದ ದೇವಾಲಯದ ಅಧ್ಯಕ್ಷ ಪಿಲಿಕಬೆ ಪ್ರಕಾಶ್ ಅವರು ಕಾರ್ಯಕರ್ತರಿಗೆ ಅಭಿನಂದನಾ ಮಾತನಾಡಿದರು.

ಕಾರ್ಯಕ್ರಮದಲ್ಲಿ ಬ್ರಹ್ಮ‌ಕಲಶ ಅಧ್ಯಕ್ಷ ಶ್ರೀರಂಗ ದಾಮಲೆ, ಶ್ರೀಕರ ರಾವ್, ಸಂಚಾಲಕರಾದ ಜಯರಾಮ ನೆಲ್ಲಿತ್ತಾಯ, ಚಂದ್ರ ಶೇಖರ ಸಾಲ್ಯಾನ್, ದೇವಾಲಯದ ಅರ್ಚಕರು ಮುಂತಾದವರು ಭಾಗವಹಿಸಿ, ಅಭಿನಂದನಾ ಭಾಷಣ ಮಾಡಿದರು.


ನಂತರ ಶ್ರೀ ಕಡಬ ಸುಂದರ ಅವರ ತಂಡದವರಿಂದ ಸಾಮೂಹಿಕ ಭಜನಾ ಕಾರ್ಯಕ್ರಮ ನಡೆಯಿತು. ತಾಲೂಕಿನ ವಿವಿಧ ತಂಡಗಳು ಭಾಗವಹಿಸಿದ್ದವು.
ಮುರಳೀಧರ ಸ್ವಾಗತಿಸಿ, ಶ್ರೀಮತಿ ರೇಣುಕಾ ಸುಧೀರ್ ಕಾರ್ಯಕ್ರಮ ನಿರ್ವಹಿಸಿದ್ದರು.

Leave a Comment

error: Content is protected !!