September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಬಳಂಜ ಎಲ್ಯೋಟ್ಟು ರಾಜು ಪೂಜಾರಿ-ಶ್ರೀಮತಿ ಕಮಲ ಹಾಗೂ ಬಾಬು ಪೂಜಾರಿ-ಶ್ರೀಮತಿ ಪ್ರೇಮಾ ದಂಪತಿಗಳ 50ನೇ ವರ್ಷದ ವೈವಾಹಿಕ ದಾಂಪತ್ಯ ಜೀವನದ ಸುವರ್ಣ ಸಂಭ್ರಮಾಚರಣೆ

ಬಳಂಜ: ಧಾರ್ಮಿಕವಾಗಿ, ಸಾಮಾಜಿಕವಾಗಿ ಸಮಾಜದಲ್ಲಿ ಗುರುತಿಸಿಕೊಂಡಿರುವ ಎಲ್ಯೋಟ್ಟು ಮನೆತನದ ರಾಜು ಪೂಜಾರಿ-ಶ್ರೀಮತಿ ಕಮಲ ಹಾಗೂ ಬಾಬು ಪೂಜಾರಿ-ಶ್ರೀಮತಿ ಪ್ರೇಮಾ ದಂಪತಿಗಳ 50 ನೇ ವರ್ಷದ ವೈವಾಹಿಕ ದಾಂಪತ್ಯ ಜೀವನದ ಸುವರ್ಣ ಸಂಭ್ರಮಾಚರಣೆಯು ಬಳಂಜ ಬ್ರಹ್ಮಶ್ರೀ ನಾರಾಯಣ ಗುರು ಸಮುದಾಯ ಭವನದಲ್ಲಿ ಎ.21 ರಂದು ನಡೆಯಿತು.

ಎಲ್ಯೋಟ್ಟು ರಾಜು ಪೂಜಾರಿ- ಕಮಲ ಮತ್ತು ಬಾಬು ಪೂಜಾರಿ-ಪ್ರೇಮಾ ದಂಪತಿ 21/04/1975 ರಲ್ಲಿ ಮದುವೆಯಾಗಿ 50 ವರ್ಷದ ಸಾರ್ಥಕ್ಯ ಜೀವನವನ್ನು ಸಾಗಿಸಿದ ಮಾದರಿಯಾಗಿದ್ದಾರೆ. ಆ ಸಮಯದಲ್ಲಿ ಮದುವೆ ದಿಬ್ಬಣ ಲಾರಿಯಲ್ಲಿ ಬಂದಿರುವಂತದ್ದು, ವಾಹನದ ವ್ಯವಸ್ಥೆ ಇಲ್ಲದೆ ನಡೆದುಕೊಂಡೆ ಕುಟುಂಬಸ್ಥರು ಭಾಗವಹಿಸಿರುವುದು ಹಾಗೂ ಅಂದಿನ‌ ಮದುವೆಯ ಖುಷಿಯ ಸಿಹಿಯನ್ನು ಸಮಾರಂಭದಲ್ಲಿ ಹಂಚಿಕೊಂಡರು.

ಬಳಂಜ‌ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿ ಗೌರವಾಧ್ಯಕ್ಷ ಹೆಚ್.ಧರ್ಣಪ್ಪ ಪೂಜಾರಿಯವರು ಎಲ್ಯೋಟ್ಟು ಮನೆತನ ಹಾಗೂ ಕೂಡು ಕುಟುಂಬದ ಬಗ್ಗೆ ಸಭೆಗೆ ತಿಳಿಸಿದರು. ಸಂಘದ ಅಧ್ಯಕ್ಷ ಸಂತೋಷ್ ಪಿ ಕೋಟ್ಯಾನ್ ಸಾಮಾಜಿಕವಾಗಿ ಸಮಾಜದಲ್ಲಿ ಎಲ್ಯೋಟ್ಟು ಕುಟುಂಬದ ಪಾತ್ರದ ಬಗ್ಗೆ ಮೆಚ್ಚುಗೆಯ ಮಾತನ್ನಾಡಿದರು. ಸಂಘದ ಮಾಜಿ ಕಾರ್ಯದರ್ಶಿ ಸದಾನಂದ ಸಾಲಿಯಾನ್ ಎಲ್ಯೋಟ್ಟು ಕುಟುಂಬದ ಪರಿಚಯವನ್ನು ಮಾಡಿದರು.

ಈ ಸಂದರ್ಭದಲ್ಲಿ ವೈವಾಹಿಕ ಸುವರ್ಣ ಸಂಭ್ರಮದ ಸವಿ ನೆನಪಿಗಾಗಿ ಬಳಂಜ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿಗೆ ಎಂ.ಸಿ ಸ್ಟ್ಯಾಂಡನ್ನು ಕುಟುಂಬಸ್ಥರು ಕೊಡುಗೆಯಾಗಿ ನೀಡಿದರು.

ಹರೀಶ್ ವೈ ಚಂದ್ರಮ, ಜಗದೀಶ್ ಪೂಜಾರಿ-ವಿಶಾಲ ಬಳ್ಳಿದಡ್ಡ. ಪ್ರಶಾಂತ್-ಅರ್ಚನಾ ಎಲ್ಯೋಟ್ಟು, ನೋಣಯ್ಯ ಪೂಜಾರಿ-ಶಶಿಕಲಾ, ಯುವರಾಜ್ ವೈ-ವಿಜಯ, ಭುವನೇಂದ್ರ ವೈ-ಜಯಂತಿ, ಸೇಸಪ್ಪ ವೈ-ಜಯಂತಿ, ಸಂಜೀವ ವೈ-ವಸಂತಿ, ಸೋಮನಾಥ ವೈ-ವಿಜಯ, ವೇದಾವತಿ ವೈ-ಲಕ್ಷ್ಮಣ ಪೂಜಾರಿ, ಸುಹಾಸಿನಿ ಬಾಬ ಶಂಕರ್ ಚಿಕ್ಕಮಗಳೂರು, ಹರಿಣಿ-ಕರುಣಾಕರ ಸುವರ್ಣ ಮರೋಡಿ, ಜಯಂತಿ, ಜಯಶೀಲಾ, ವಿನೋದ ಬಳ್ಳಿದಡ್ಡ, ರೂಪನಾಥ ವೈ.ಎಲ್, ಯತೀಶ್ ವೈ.ಎಲ್, ಹಾಗೂ ಎಲ್ಯೋಟ್ಟು ಕುಟುಂಬದ ಸದಸ್ಯರು ಸಮಾರಂಭದಲ್ಲಿ ಭಾಗವಹಿಸಿ ವೈವಾಹಿಕ ಸುವರ್ಣ ಸಂಭ್ರದಲ್ಲಿ ಸಂಭ್ರಮಿಸಿದರು. ಸಾವಿರಾರು ಸಂಖ್ಯೆಯಲ್ಲಿ ಬಂಧು- ಬಳಗ ಹಾಗೂ ಊರವರು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಗಣ್ಯರು, ಹಿತೈಷಿಗಳು ಆಗಮಿಸಿ ದಂಪತಿಗಳಿಗೆ ಶುಭಾಶಯ ಕೋರಿದರು.

ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಬ್ರಹ್ಮಶ್ರೀ ಕುಣಿತಾ ಭಜನಾ ಮಂಡಳಿಯ ಮಕ್ಕಳಿಂದ ವಿವಿಧ ಮನೋರಂಜನಾ ಕಾರ್ಯಕ್ರಮ ನಡೆಯಿತು. ದೀಕ್ಷಿತ್ ಅಂಡಿಂಜೆ ಕಾರ್ಯಕ್ರಮ ನಿರೂಪಿಸಿದರು.

Related posts

ಅ.15-ಡಿ.31: ಶ್ರೀ ದುರ್ಗಾ ಟೆಕ್ಸ್‌ಟೈಲ್ಸ್‌ನಲ್ಲಿ ಫೆಸ್ಟಿವಲ್ ಮೆಗಾ ಡಿಸ್ಕೌಂಟ್ ಆಫರ್

Suddi Udaya

ವೇಣೂರು: ಉಳ್ತೂರಿನ ಮುಹಿಯುದ್ದೀನ್ ಜುಮಾ ಮಸೀದಿಯಲ್ಲಿ ನೂರುಲ್ ಹುದಾ ದರ್ಸ್ ಪ್ರಾರಂಭೋತ್ಸವ

Suddi Udaya

ಮದ್ದಡ್ಕ ಎಸ್ ಡಿ ಪಿ ಐ ಸಂಸ್ಥಾಪನ ದಿನಾಚರಣೆ

Suddi Udaya

ಚಾರ್ಮಾಡಿ : ಬಂಟ್ವಾಳ ಗ್ರಾಮದ ಯುವಕನ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆ

Suddi Udaya

ಅನಘ ಮನೆಯ ಕಳ್ಳತನ ಪ್ರಕರಣ ಶೀಘ್ರವಾಗಿ ಭೇದಿಸುವಂತೆ ವೇಣೂರು ಪೊಲೀಸ್ ಠಾಣೆಗೆ ಕುತ್ಲೂರು ಗ್ರಾಮದ ಮಹಿಳೆಯರಿಂದ ಮನವಿ

Suddi Udaya

ಸಂತ ತೆರೇಸಾ ಪದವಿ ಪೂರ್ವ ಕಾಲೇಜಿನಲ್ಲಿ ಆರೋಗ್ಯ ಮತ್ತು ಸ್ವಚ್ಛತೆ ಕುರಿತು ಮಾಹಿತಿ ಕಾರ್ಯಾಗಾರ

Suddi Udaya
error: Content is protected !!