ಓಡಿಲ್ನಾಳ: ಗುಂಪಲಾಜೆ-ಪಣೆಜಾಲು ನಾಗ-ರಕ್ತೇಶ್ವರಿ, ಪಿಲಿಚಾಮುಂಡಿ, ಕಲ್ಕುಡ, ಕಲ್ಲುರ್ಟಿ, ಕಾಳಮ್ಮ, ಮಹಮ್ಮಾಯಿ-ಬೈರವ ಶಕ್ತಿಗಳ ಪ್ರತಿಷ್ಠಾ ಮಹೋತ್ಸವ ಮತ್ತು ನೇಮೋತ್ಸವವು ಅಳದಂಗಡಿ ಪ್ರಕಾಶ್ ಭಟ್ ರವರ ಮಾರ್ಗದರ್ಶನದಲ್ಲಿ, ಕಿರಣ್ ಭಟ್ ರವರ ನೇತೃತ್ವದಲ್ಲಿ ಎ.23ರಿಂದ ಎ.24ರ ವರೆಗೆ ವಿವಿಧ ವೈದಿಕ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಗುರುವಾಯನಕೆರೆ ಹವ್ಯಕ ಭವನ ಮಂದಿರದಿಂದ ನಾಗಚಾವಡಿ ಸಾನ್ನಿಧ್ಯ ಕ್ಷೇತ್ರದವರೆಗೆ ವಿವಿಧ ಕುಣಿತ ಭಜನಾ ತಂಡಗಳಿಂದ “ಕುಣಿತ ಭಜನೆಯೊಂದಿಗೆ ಹಸಿರುವಾಣಿ ಹೊರೆಕಾಣಿಕೆಯ ಭವ್ಯ ಮೆರವಣಿಗೆ ನಡೆಯಿತು.
ಆನಂದ ಶೆಟ್ಟಿ ವಾತ್ಸಲ್ಯ ಪಾಡ್ಯಾರು ಹೊರೆಕಾಣಿಕೆಗೆ ಚಾಲನೆ ನೀಡಿದರು. ಭಕ್ತರಿಂದ ಹಸಿರುವಾಣಿ ಹೊರೆಕಾಣಿಕೆ ಸಮರ್ಪಣೆಯಾಯಿತು.
ಈ ಸಂದರ್ಭದಲ್ಲಿ ಪ್ರಸಿದ್ಧ ಬರೋಡ ಉದ್ಯಮಿ ಶಶಿಧರ ಶೆಟ್ಟಿ ನವಶಕ್ತಿ, ನಾಗ-ರಕ್ತೇಶ್ವರೀ ಸೇವಾ ಟ್ರಸ್ಟ್ ಅಧ್ಯಕ್ಷ ಶಶಿರಾಜ್ ಶೆಟ್ಟಿ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಆನಂದ ಶೆಟ್ಟಿ ಐಸಿರಿ, ಪ್ರ.ಕಾರ್ಯದರ್ಶಿ ಚಿದಾನಂದ ಇಡ್ಯ, ನಾಗ-ರಕ್ತೇಶ್ವರಿ ಸೇವಾ ಟ್ರಸ್ಟ್ ಕಾರ್ಯಾಧ್ಯಕ್ಷ ರಾಮ್ ಪ್ರಸಾದ್ ಎನ್.ಎಸ್. ಆಚಾರ್ಯ, ಪ್ರ.ಕಾರ್ಯದರ್ಶಿ ಪ್ರೇಮನಾಥ ಶೆಟ್ಟಿ, ಕೋಶಾಧಿಕಾರಿ ಸತೀಶ್ ಕುಲಾಲ್, ಪ್ರಮುಖರಾದ ಬೆಳ್ತಂಗಡಿ ಲಯನ್ಸ್ ಕ್ಲಬ್ ಅಧ್ಯಕ್ಷ ಉಮೇಶ್ ಶೆಟ್ಟಿ, ಶಶಿಧರ ಹೆಗ್ಡೆ, ಶಂಕರ್ ಗಾಣಿಗ, ಶೇಖರ್ ಶೆಟ್ಟಿ, ರಿಜೇಶ್ ಕುಮಾರ್, ಸುರೇಶ್ ಗಾಣಿಗ, ಗಣೇಶ್ ಕುಲಾಲ್, ಪ್ರದೀಪ್ ಶೆಟ್ಟಿ ಜಿ.ಕೆರೆ, ರವೀಂದ್ರ ಶೆಟ್ಟಿ, ಚಂದ್ರಶೇಖರ್ ಕುಲಾಲ್, ಕಿರಣ್ ಭಟ್,ನಾಗೇಶ್ ಪೂಜಾರಿ ಆದೇಲು, ರಂಜಿತ್ ಸಫಲ್ಯ, ಗಣೇಶ್ ಆಚಾರ್ಯ, ಶ್ರೀರಾಜ್ ಶೆಟ್ಟಿ ಸಾಯಿರಾಮ್, ಪ್ರಶಾಂತ್ ಶೆಟ್ಟಿ ಕರಂಬಾರು, ಸಚಿನ್ ಶೆಟ್ಟಿ ಕುರೆಲ್ಯ, ಹರೀಶ್ ವೈ. ಚಂದ್ರಮ, ಪ್ರಮೋದ್ ಪೂಜಾರಿ ಸೂಳಬೆಟ್ಟು, ಪ್ರದೀಪ್ ಶೆಟ್ಟಿ ಗುರುವಾಯನಕೆರೆ ಹಾಗೂ ಸಮಿತಿ ಪ್ರಮುಖರು ಉಪಸ್ಥಿತರಿದ್ದರು.
ಕ್ಷೇತ್ರದಲ್ಲಿ ಪ್ರಾರ್ಥನೆ ಸಲ್ಲಿಸಿ ಗೋಪೂಜೆಯನ್ನು ನೆರವೇರಿಸಲಾಯಿತು. ರಾತ್ರಿ ಶ್ರೀ ನಾಳ ದುರ್ಗಾಪರಮೇಶ್ವರಿ ಕೃಪಾಪೋಷಿತಾ ದಶಾವತಾರ ಯಕ್ಷಗಾನ ಮಂಡಳಿ ಇವರಿಂದ ಮಾಯಕೊದ ಸತ್ಯ ಕಲ್ಲುರ್ಟಿ ಯಕ್ಷಗಾನ ಬಯಲಾಟ ನಡೆಯಲಿದೆ.
ನಾಳೆ ನಾಗದೇವರ ಪ್ರತಿಷ್ಠೆ, ನೇಮೋತ್ಸವ
ಬೆಳಿಗ್ಗೆ ವೈದಿಕ ಕಾರ್ಯಕ್ರಮ, ಪವಮಾನ ಹೋಮ, ಕೂಷ್ಮಾಂಡ ಹೋಮ, ಕಲಶ ಪೂಜೆ, ಪ್ರಧಾನ ಹೋಮ, ಆಶ್ಲೇಷ ಬಲಿ, ವೃಷಭ ಲಗ್ನದಲ್ಲಿ ನಾಗದೇವರ ಪ್ರತಿಷ್ಠೆ, ದೈವಗಳ ಪ್ರತಿಷ್ಠೆ, ಕಲಶಾಭಿಷೇಕ, ಪಂಚಾಮೃತ ಅಭಿಷೇಕ, ಆಶ್ಲೇಷ ಬಲಿ, ಸತ್ಯನಾರಾಯಣ ಪೂಜೆ, ಮಹಾಪೂಜೆ, ಪಲ್ಲ ಪೂಜೆ, ಅನ್ನಸಂತರ್ಪಣೆ, ಸಂಜೆ ಸಂದೇಶ್ ಅನಿಲ ಮದ್ದಡ್ಕ ಮತ್ತು ಬಳಗ ಇವರಿಂದ ಭಜನಾ ಸಂಕೀರ್ತನೆ, ಮರಾಠಿ ನಾಯ್ಕ್ ಬಳಗ, ಬೆಳ್ತಂಗಡಿ ಇವರಿಂದ ಗುಮ್ಮಟೆ ಕುಣಿತ, ಸಂಜೆ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದೆ. ರಾತ್ರಿ ಪಿಲಿಚಾಮುಂಡಿ, ಕಲ್ಕುಡ, ಕಲ್ಲುರ್ಟಿ, ಕಾಳಮ್ಮ ದೈವಗಳಿಗೆ ನೇಮೋತ್ಸವ ನಡೆಯಲಿದೆ.