ಧರ್ಮಸ್ಥಳ : ನಾಡಿನ ಪುಣ್ಯ ಕ್ಷೇತ್ರ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಮೇ 1 ರಂದು ಸಂಜೆ 6.45ರ ಗೋಧೂಳಿ ಲಗ್ನ ಸುಮೂರ್ಹದಲ್ಲಿ ಧರ್ಮಸ್ಥಳದ ಅಮೃತವರ್ಷಿಣಿ ಸಭಾಂಗಣದಲ್ಲಿ ವೇದ ಘೋಷ ಮಂತ್ರ ಪಠಣದೊಂದಿಗೆ ನಡೆದ 52ನೇ ವರ್ಷದ ಸಾಮೂಹಿಕ ವಿವಾಹ ಸಮಾರಂಭದಲ್ಲಿ 123ಜೋಡಿ ಸತಿ-ಪತಿಗಳಾಗಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದರು.
ಒಟ್ಟು 52 ವಷ೯ಗಳಲ್ಲಿ 12,900 ಮಂದಿ ಧಮ೯ಸ್ಥಳದ ಸಾಮೂಹಿಕ ವಿವಾಹ ದಲ್ಲಿ ವಿವಾಹವಾಗಿವಾಗಿದ್ದಾರೆ. ಶ್ರೀ ಕ್ಷೇತ್ರ ಧರ್ಮಸ್ಥಳದ ಬೀಡಿನಲ್ಲಿ ಬೆಳಿಗ್ಗೆ ಡಾ. ಹೆಗ್ಗಡೆಯವರು ವರನಿಗೆ ಧೋತಿ, ಶಾಲು ಹಾಗೂ ವಧುವಿಗೆ ಸೀರೆ, ರವಿಕೆ ಕಣ ವಿತರಿಸಿದರು. ಸಂಜೆ ವಧು-ವರರು ದೇವಸ್ಥಾನಕ್ಕೆ ಪ್ರದಕ್ಷಿಣೆ ಬಂದು ಅಮೃತವರ್ಷಿಣಿ ಸಭಾ ಭವನಕ್ಕೆ ಮೆರವಣಿಗೆಯಲ್ಲಿ ಆಗಮಿಸಿದರು. ಅಲ್ಲಿ ಡಾ. ಹೆಗ್ಗಡೆ ದಂಪತಿಗಳು, ಖ್ಯಾತ ಕನ್ನಡ ಚಲನ ಚಿತ್ರ ನಟ ದೊಡ್ಡಣ್ಣ, ಹೇಮಾವತಿ ಹೆಗ್ಗಡೆ, ಡಿ. ಹರ್ಷೇಂದ್ರ ಕುಮಾರ್, ಡಿ. ಸುರೇಂದ್ರ ಕುಮಾರ್ , ಸುಪ್ರಿಯಾ ಹಷೇ೯ಂದ್ರ ಕುಮಾರ್ , ಶ್ರೀಮತಿ ಶಾಂತಾ ದೊಡ್ಡಣ್ಣ ಮತ್ತು ಅತಿಥಿಗಣ್ಯರು ವಧುವಿಗೆ ಮಂಗಳ ಸೂತ್ರ ವಿತರಿಸಿ, ಆಯಾ ಜಾತಿ-ಸಂಪ್ರದಾಯದ ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ವಧು-ವರರು ಗೃಹಸ್ಥಾಶ್ರಮಕ್ಕೆ ಪ್ರವೇಶಿಸಿದರು.
12,900ನೇ ವಿಶೇಷ ಜೋಡಿ : ವಿಕಲಾಂಗ ಪ್ರವೀಣ್ ಖನ್ನೂರು ಮತ್ತು ಕವಿತಾ ಗಿಡ್ಡ ಕೆಂಚಣ್ಣನವರ್ ಅವರು ಸಾಮೂಹಿಕ ವಿವಾಹದಲ್ಲಿ ಮದುವೆಯಾದ 12,900ನೇ ಜೋಡಿಯಾಗಿ ವಿಶೇಷವಾಗಿ ಗಮನಸೆಳೆದರು. ಈ ವಧು-ವರರಿಗೆ ವಿಶೇಷ ವೇದಿಕೆಯನ್ನು ಕಲ್ಪಿಸಲಾಗಿತ್ತು.
55 ಮಂದಿ ಖಾಸಗಿ ಉದ್ಯೋಗಿಗಳು;ಮದುವೆ ಆದವರಲ್ಲಿ 55 ಮಂದಿ ಖಾಸಗಿ ಉದ್ಯೋಗಿಗಳು, 26 ಮಂದಿ ಕೂಲಿ, 17 ಮಂದಿ ಬೇಸಾಯ, 8 ಮಂದಿ ವ್ಯಾಪಾರ, 10 ಮಂದಿ ಚಾಲಕ, 3 ಮಂದಿ ಖಾಸಗಿ ಉದ್ಯೋಗಿಗಳು, 3 ಮಂದಿ ಮರದ ಕೆಲಸ, ಒಬ್ಬರು ಮೀನುಗಾರಿಕೆ ವಿವಧ ವೃತ್ತಿಯವರು ಸೇರಿದ್ದಾರೆ.ಬೆಳ್ತಂಗಡಿ ತಾಲೂಕಿನ 5 ಮಂದಿ: ಬೆಳ್ತಂಗಡಿ ತಾಲೂಕಿನ 5, ಮಂಗಳೂರು 3, ಸುಳ್ಯ 1, ಉಡುಪಿ 7, ಚಿಕ್ಕಮಗಳೂರು 6, ಶಿವಮೊಗ್ಗ 13, ಹಾಸನ 7, ಬೆಂಗಳೂರು 12, ಮೈಸೂರು 10, ಹಾವೇರಿ 6, ದಾವಣಗೆರೆ 9, ಧಾರವಾಡ 6, ಉತ್ತರ ಕನ್ನಡ 9, ಚಿತ್ರದುರ್ಗ 3, ಮಂಡ್ಯ ಮತ್ತು ರಾಮನಗರ, ಬಳ್ಳಾರಿ ತಲಾ 4 , ಚಾಮರಾಜನಗರ 2, ತುಮಕೂರು 3, ಬೆಳಗಾವಿ, ಗದಗ ತಲಾ 2, ವಿಜಯನಗರ, ವಿಜಯಪುರ, ಕೋಲಾರ, ಬಾಗಲಕೋಟೆ ತಲಾ 1, ತಮಿಳುನಾಡು 1 ಮದುವೆ ಆದವರಲ್ಲಿ ಒಳಗೊಂಡಿದ್ದಾರೆ.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಚಲನಚಿತ್ರ ನಟ ದೊಡ್ಡಣ್ಣ ಮಾತನಾಡಿ ನೂತನ ವಧು ವರದಿಗೆ ಶುಭ ಹಾರೈಸಿದರು.
ಪರಸ್ಪರ ಪ್ರೀತಿ-ವಿಶ್ವಾಸ ನಂಬಿಕೆ ಮುಖ್ಯ : ಡಾ. ಹೆಗ್ಗಡೆ
ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ವಿವಾಹ ಯಾವುದೇ ಒತ್ತಡ ಇಲ್ಲದೆ ಸಂತೋಷ, ಪ್ರೀತಿಯಿಂದ ಎಲ್ಲರೂ ಒಟ್ಟು ಸೇರಿ ಮಾಡುವ ಕಾರ್ಯಕ್ರಮ. ಇದು ಎರಡು ಪವಿತ್ರ ಆತ್ಮಗಳ ಸಮ್ಮೀಳನ, ಇಂದು ಜಾತಿ, ಮತ, ಸಂಪ್ರಾದಾಯದ ಎಲ್ಲೆಯನ್ನು ಮೀರಿ ಇಲ್ಲಿ ವಿವಾಹ ನಡೆದಿದೆ. ಪರಸ್ಪರ ಪ್ರೀತಿ, ವಿಶ್ವಾಸ ನಂಬಿಕೆಯಿಂದ ಸತಿ-ಪತಿ ನೆಮ್ಮದಿಯ ಜೀವನ ನಡೆಸಬೇಕು ಎಂದು ಸಲಹೆಯಿತ್ತರು.
ಕು. ಸುಪ್ರಿಯಾ ಕೋನಾ೯ಯ ಇವರ ಪ್ರಾಥ೯ನೆ ಬಳಿಕ ಡಿ. ಹಷ೯ಂದ್ರ ಕುಮಾರ್ ಸ್ವಾಗತಿಸಿದರು. ಶ್ರೀನಿವಾಸ್ ರಾವ್ ಕಾಯ೯ಕ್ರಮ ನಿರೂಪಿಸಿದರು. ರತ್ನವರ್ಮ ಜೈನ್ ಧನ್ಯವಾದವಿತ್ತರು.