March 7, 2026
ಅಪರಾಧ ಸುದ್ದಿಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ಪೂಜಾ ಕಾರ್ಯಕ್ರಮದ ಊಟದ ವೇಳೆ ಕುಟುಂಬಸ್ಥರಿಂದ ಹಲ್ಲೆ, ಜೀವಬೆದರಿಕೆ ಆರೋಪ; ಧರ್ಮಸ್ಥಳ ಠಾಣೆಗೆ ದೂರು

ಕಳೆಂಜ: ಪೂಜಾ ಕಾರ್ಯಕ್ರಮದ ನಿಮಿತ್ತ ಊಟದ ವ್ಯವಸ್ಥೆ ಏರ್ಪಡಿಸಿರುವ ಸಮಯ ಐದು ಮಂದಿ ಕುಟುಂಬಸ್ಥರು ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿರುವುದಾಗಿ ಕಳೆಂಜ ಗ್ರಾಮದ ಸೇಸಮ್ಮ ಎಂಬವರು ಧರ್ಮಸ್ಥಳ ಪೊಲೀಸ್‌ರಿಗೆ ದೂರು ನೀಡಿದ್ದಾರೆ.


ಸೇಸಮ್ಮ ಅವರು ಠಾಣೆಗೆ ನೀಡಿರುವ ದೂರಿನಲ್ಲಿ ತಾನು ತನ್ನ ಕಿರಿಯ ಮಗ ಹರೀಶನೊಂದಿಗೆ ವಾಸವಾಗಿದ್ದು, ಎ.30 ರಂದು ರಾತ್ರಿ, ಪೂಜಾ ಕಾರ್ಯಕ್ರಮದ ನಿಮಿತ್ತ, ಕುಟುಂಬಸ್ಥರಿಗೆ ಊಟದ ವ್ಯವಸ್ಥೆ ಏರ್ಪಡಿಸಿದ್ದೇವು. ಈ ವೇಳೆ ಕುಟುಂಬಸ್ಥರಾದ ಯೋಗೀಶ್, ಆನಂದ ಬೀಜದಡಿ, ಶೇಖರ್, ಆನಂದ ಕುಲಾಡಿ, ಅಣ್ಣುಗೌಡ, ಹರೀಶ್ ಮತ್ತು ಪುಷ್ಪ ಎಂಬವರುಗಳು, ನಾನು ವಾಸಿಸುವ ಕೊಠಡಿಯ ಬಳಿಗೆ ಬಂದು ಹರೀಶನಿಗೆ ಅವಾಚ್ಯ ಶಬ್ದಗಳಿಂದ ಬೈದಿರುತ್ತಾರೆ. ಸ್ವಲ್ಪ ಸಮಯದ ಬಳಿಕ ಯೋಗೀಶ ಎಂಬಾತ ಬಂದು, ಹರೀಶನಿಗೆ ಹಾಗೂ ಆತನ ಭಾವ ದೀಕ್ಷಿತ್ ಎಂಬಾತನಿಗೆ ಹಲ್ಲೆ ನಡೆಸಿದ್ದು, ತಡೆಯಲು ಬಂದ ನನ್ನನ್ನು ಆರೋಪಿತರೆಲ್ಲರೂ ಸೇರಿ ದೂಡಿ ಹಾಕಿ ಗಾಯಗೊಳಿಸಿ, ಜೀವ ಬೆದರಿಕೆ ಹಾಕಿರುದಾಗಿ ಆರೋಪಿಸಿದ್ದಾರೆ.

ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ,ಅ ಕ್ರ ೨೮/೨೦೨೪, ಕಲಂ: ೪೪೮,೫೦೪, ೩೨೩,೫೦೬ ಜೊತೆಗೆ ೩೪ ಐ ಪಿ ಸಿ ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

Related posts

ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ನಿಖಿಲ್ ಕುಮಾರಸ್ವಾಮಿ ಭೇಟಿ

Suddi Udaya

ತಣ್ಣೀರುಪಂಥ ವಲಯದ ಪುತ್ತಿಲ ಕಾರ್ಯಕ್ಷೇತ್ರದ ಒಕ್ಕೂಟದ ಸದಸ್ಯರಿಂದ ಶ್ರೀ ಮಹಾ ವಿಷ್ಣು ದೇವಸ್ಥಾನದಲ್ಲಿ ಸ್ವಚ್ಛತಾ ಕಾರ್ಯಕ್ರಮ

Suddi Udaya

ಬೆಳಾಲು: ನೇತ್ರಾವತಿ ನದಿಯಲ್ಲಿ ಮುಳುಗಿ ನಾಪತ್ತೆಯಾಗಿದ್ದ ಪ್ರಸಾದ್ ಮೃತದೇಹ ಪತ್ತೆ

Suddi Udaya

ಕೆ.ಎಸ್ಎಂಸಿ ಎ ವತಿಯಿಂದ ವಿಜಯರತ್ನ ಪ್ರಶಸ್ತಿ ಪುರಸ್ಕೃತ ಸುಮಂತ್ ಕುಮಾರ್ ಜೈನ್ ರವರಿಗೆ ಅಭಿನಂದನೆ

Suddi Udaya

ಎಸ್.ಎಸ್.ಎಲ್.ಸಿ ಫಲಿತಾಂಶ: ವಿದ್ಯೋದಯ ಆಂಗ್ಲ ಮಾಧ್ಯಮ ಶಾಲೆಗೆ ಶೇ.100 ಫಲಿತಾಂಶ

Suddi Udaya

ಶಿಲಾ೯ಲಿನಲ್ಲಿ ತಂದೆಯ ಮೇಲೆ ಪುತ್ರ, ಸೊಸೆಯಿಂದ ಹಲ್ಲೆ ಆರೋಪ: ವೇಣೂರು ಪೊಲೀಸ್ ಠಾಣೆಗೆ ದೂರು

Suddi Udaya
error: Content is protected !!