ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಮಂಗಳೂರು ಬಿಜೈನಲ್ಲಿ ಸ್ನೇಹ ಲಂಚ್ ಹೋಮ್ ಶುಭಾರಂಭ

ಬೆಳ್ತಂಗಡಿ:ಮಂಗಳೂರಿನ ಬಿಜೈ ಕೆ.ಎಸ್.ಆರ್.ಟಿ.ಸಿ. ಬಸ್ ತಂಗುದಾಣದ ಸಮೀಪದ ಆದಿತ್ಯ ಕಮರ್ಷಿಯಲ್ ಕಾಂಪ್ಲೆಕ್ಸ್‌ನ 1 ನೇ ಮಹಡಿಯಲ್ಲಿ ಶರತ್ ಶೆಟ್ಟಿ‌ ಮತ್ತು ಶೇಷಗಿರಿ ಪೂಜಾರಿ ಪಾಲುದಾರಿಕೆಯ ಸ್ನೇಹ ಲಂಚ್ ಹೋಮ್ ಹೋಟೆಲ್ ನ್ನು ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಆರ್ ಪೂಜಾರಿಯವರು ಉದ್ಘಾಟಿಸಿ ಶುಭ ಕೋರಿದರು.

ಈ ಸಂದರ್ಭದಲ್ಲಿ ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್, ವಿಧಾನ ಪರಿಷತ್ ಶಾಸಕ ಕೆ. ಹರೀಶ್ ಕುಮಾರ್, ಮಂಗಳೂರು ಕಂಬಳ ಸಮಿತಿ ಅಧ್ಯಕ್ಷರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಭೂಮಿ ರೆಸಿಡೆನ್ಸಿ ಮಾಲಕರಾದ ವಿಶ್ವನಾಥ, ಉದ್ಯಮಿ ಚಂದ್ರಹಾಸ ಪಕಳ, ಯುವ ವಾಹಿನಿ ಕೇಂದ್ರ ಸಮಿತಿ ಅಧ್ಯಕ್ಷರಾದ ಹರೀಶ್ ಪೂಜಾರಿ ಬಳಂಜ, ಮುದ್ರಾ ಪ್ರಿಂಟರ್ಸ್ ಮಾಲಕ ಕೇಶವ ಪೂಜಾರಿ, ಬೆಳ್ತಂಗಡಿಯ ಅಪರ ಸರ್ಕಾರಿ ವಕೀಲರಾದ ಮನೋಹರ ಕುಮಾರ್,ವೇಣುಗೋಪಾಲ್ ರೈ ನೂಜಿ, ಮುಂಬೈ ಉದ್ಯಮಿಗಳಾದ ತುಕಾರಾಮ್ ರೈ ಮತ್ತು ಸಂತೋಷ್ ರೈ, ಮಾಜಿ ಜಿ ಪಂ ಸದಸ್ಯ ಕೆ ಕೆ ಶಾಹುಲ್ ಹಮೀದ್, ಮುಂತಾದವರು ಭೇಟಿ ನೀಡಿ ಶುಭ ಹಾರೈಸಿದರು.

Related posts

ಭಾರತೀಯ ಸೇನೆಗೆ ನೇಮಕಗೊಂಡಿರುವ ಬಳಂಜದ ಯುವಕ ಮನೋಹರ್ ಪೂಜಾರಿಯವರಿಗೆ ಬೆಳ್ತಂಗಡಿ ಶ್ರೀ ಗುರು ನಾರಾಯಣ ಸ್ವಾಮಿ ಸೇವಾ ಸಂಘದ ವತಿಯಿಂದ ಗೌರವಾರ್ಪಣೆ

Suddi Udaya

ಮಡಂತ್ಯಾರು ಸಿಎ ಬ್ಯಾಂಕ್ ನೇತೃತ್ವದಲ್ಲಿ ದ.ಕ. ಜಿಲ್ಲಾ ಮಟ್ಟದ 72ನೇ ಸಹಕಾರ ಸಪ್ತಾಹಕ್ಕೆ ಚಾಲನೆ: ಮಡಂತ್ಯಾರು ನಗರದಲ್ಲಿ ಆದ್ದೂರಿಯ ಮೆರವಣಿಗೆ, ಸಾಧಕ 72 ಮಂದಿಗೆ ಕೃಷಿ ಸಿಂಧೂರ ಪ್ರಶಸ್ತಿ ಹಾಗೂ 86ಮಂದಿ ಸಾಧಕರಿಗೆ ಕ್ಷೀರ ರತ್ನ ಪ್ರಶಸ್ತಿ ಪ್ರದಾನ

Suddi Udaya

ಉಪ್ಪಾರಪಳಿಕೆ ಸರಕಾರಿ ಉ. ಹಿ.ಪ್ರಾ. ಶಾಲೆಯಲ್ಲಿ 400 ಅಡಿಕೆ ಗಿಡ ನೆಡುವ ಕಾರ್ಯಕ್ರಮ

Suddi Udaya

ಡಿಪ್ಲೋಮ – CET ಪರೀಕ್ಷೆ : ಉಜಿರೆಯ ಎಸ್ ಡಿ ಎಂ ಪಾಲಿಟೆಕ್ನಿಕ್ ಕಾಲೇಜಿಗೆ ಅತ್ಯುತ್ತಮ ರ‍್ಯಾಂಕ್

Suddi Udaya

ಮೊಗ್ರು: ಮುಗೇರಡ್ಕ ವ್ಯಾಪ್ತಿಯಲ್ಲಿ ಅಡಿಕೆ ತೋಟಗಳು ಜಲಾವೃತ

Suddi Udaya

ಯುವ ವೈಭವ: ರಾಜ್ಯಮಟ್ಟದ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಯುವವಾಹಿನಿ ಬೆಳ್ತಂಗಡಿ ಘಟಕಕ್ಕೆ ಸಮಗ್ರ ಪ್ರಶಸ್ತಿ

Suddi Udaya
error: Content is protected !!