24 C
ಪುತ್ತೂರು, ಬೆಳ್ತಂಗಡಿ
April 3, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಲಾಯಿಲ: ರಬ್ಬರ್ ತೋಟಕ್ಕೆ ಬೆಂಕಿ: 75 ರಷ್ಟು ಮರಕ್ಕೆ ಹಾನಿ

ಬೆಳ್ತಂಗಡಿ: ಲಾಯಿಲ ಗ್ರಾಮದ ಸ್ಥಾನಿಕ ಬ್ರಾಹ್ಮಣ ಸಂಘದ ಸಭಾವನದ ಪಕ್ಕದ ರಾಜೇಶ್ ಪ್ರಭು ಎಂಬವರ ರಬ್ಬರ್ ತೋಟದಲ್ಲಿ ಮೇ.9 ರಂದು ಮಧ್ಯಾಹ್ನ ಆಕಸ್ಮಿಕ ಅಗ್ನಿ ಅವಘಡ ಸಂಭವಿಸಿ 75 ರಷ್ಟು ಮರಕ್ಕೆ ಹಾನಿ ಉಂಟಾಗಿದೆ.

ರಸ್ತೆಯ ಪಾರ್ಶ್ವದಲ್ಲಿರುವ ವಿದ್ಯುತ್ ಪರಿವರ್ತಕದಿಂದ ಬೆಂಕಿ ಉಗುಳಲ್ಪಟ್ಟು ತರಗೆಲೆಗೆ ಹತ್ತಿಕೊಂಡು ಬೆಂಕಿ ರಬ್ಬರ್ ತೋಟಕ್ಕೆ ಆವರಿಸಿದೆ. ಗ್ರಾ.ಪಂ ಪಿಡಿಒ‌ ಅವರು ತಕ್ಷಣ ಬೆಳ್ತಂಗಡಿ ಅಗ್ನಿಶಾಮಕ ಇಲಾಖೆಗೆ ಮಾಹಿತಿ ನೀಡಿದಂತೆ ಧಾವಿಸಿ ಬಂದು ಬೆಂಕಿ ವ್ಯಾಪಿಸುವುದನ್ನು ತಡೆದಿದ್ದಾರೆ. ಅಗ್ನಿಶಾಮಕ ಠಾಣಾಧಿಕಾರಿ ವೆಂಕಟೇಶ್, ಸಹಾಯಕ ಅಗ್ನಿಶಾಮಕ ಠಾಣಾಧಿಕಾರಿ ನೀಲಯ್ಯ ಗೌಡ, ಸಿಬ್ಬಂದಿಗಳಾದ ರತನ್, ಶ್ರವಣ್, ಮುಹಮ್ಮದ್ ಸಾಬ್, ಆದಿಲ್ ಮತ್ತು ವೆಂಕಣ್ಣ ಇವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ಗ್ರಾ.ಪಂ ಪಿಡಿಒ, ಕಾರ್ಯದರ್ಶಿ ಹಾಗೂ ಸದಸ್ಯರುಗಳು ಸೇರಿದಂತೆ ಸ್ಥಳೀಯರು ಸ್ಥಳದಲ್ಲಿ ಉಪಸ್ಥಿತರಿದ್ದರು.

Related posts

ಕೊಕ್ಕಡ ಸಿಪಿಐಎಂ ಶಾಖಾ ಕಾರ್ಯದರ್ಶಿ ಅಣ್ಣು ಮೊಗೇರ ನಿಧನ

Suddi Udaya

ಪೆರ್ಲ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಮಾಧವ ಗೌಡ ಖಂಡಿಗ ರವರಿಂದ ಹಣ್ಣು ಹಂಪಲು ಗಿಡ ವಿತರಣೆ

Suddi Udaya

ನಾರಾವಿ ಸಂತ ಅಂತೋಣಿ ಪ.ಪೂ ಕಾಲೇಜು ಶೇ.98 ಫಲಿತಾಂಶ

Suddi Udaya

ರೀಜೆಂಟ್ ಮಳಿಗೆ ಅಳದಂಗಡಿಯಿಂದ- ಗರ್ಡಾಡಿ ಹೊನ್ನಕಟ್ಟೆಗೆ ಸ್ಥಳಾಂತರಗೊಂಡು ಶುಭಾರಂಭ

Suddi Udaya

ನಾಲ್ಕೂರು: ರಸ್ತೆ ಬದಿಯಲ್ಲಿದ್ದ ಅಪಾಯಕಾರಿ ಮರ ತೆರವು

Suddi Udaya

ಉಜಿರೆ ಎಸ್.ಡಿ.ಎಂ. (ಜನಾರ್ದನ ) ಹಿ.ಪ್ರಾ. ಶಾಲೆಯ ಶತಮಾನೋತ್ಸವ ಸಂಭ್ರಮಕ್ಕೆ ಚಾಲನೆ 

Suddi Udaya
error: Content is protected !!