32.6 C
ಪುತ್ತೂರು, ಬೆಳ್ತಂಗಡಿ
November 24, 2024
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ರಾಷ್ಟ್ರ ಮಟ್ಟದಲ್ಲಿ ಹೆಸರು ಗಳಿಸಿರುವ ಬಳಂಜ ಬ್ರಹ್ಮಶ್ರೀ ಕುಣಿತಾ ಭಜನಾ ಮಂಡಳಿ ಸದಸ್ಯರು ಎಸ್.ಎಸ್.ಎಲ್.ಸಿ ಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆ, ಸಾಧಕರಿಗೆ ಸನ್ಮಾನ

ಬಳಂಜ: ಈ ಬಾರಿಯ ಎಸ್.ಎಸ್.ಎಲ್‌.ಸಿ ಪರೀಕ್ಷೆಯಲ್ಲಿ ಬ್ರಹ್ಮ ಶ್ರೀ ಕುಣಿತ ಭಜನೆ ಮಂಡಳಿಯ ಸದಸ್ಯರು ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.

ಭಜನೆಯಲ್ಲಿ ರಾಷ್ಟ್ರ ಮಟ್ಟದಲ್ಲಿ ಹೆಸರು ಗಳಿಸಿರುವ ಮಂಡಳಿಯ ಎಲ್ಲಾ ಕಾರ್ಯಕ್ರಮಗಳೊಂದಿಗೆ ಸ್ಪಂದಿಸಿ ಇದೀಗ ಉತ್ತಮ ಅಂಕದೊಂದಿಗೆ ತೇರ್ಗಡೆಗೊಂಡು ಭಜನಾ ಮಂಡಳಿಗೆ ಹಾಗೂ ಊರಿಗೆ ಒಳ್ಳೆಯ ಹೆಸರನ್ನು ತಂದಿರುತ್ತಾರೆ.

ಬಳಂಜ ಸರಕಾರಿ ಶಾಲೆಯಲ್ಲಿ ಕಲಿಯುತ್ತಿರುವ 602 ಅಂಕ ಗಳಿಸಿದ ಮಂಡಳಿಯ ಮನ್ವಿತಾರವರು ಪೂಂಜಬೆಟ್ಟು ಸದಾನಂದ ಪೂಜಾರಿ- ಭವಾನಿ ದಂಪತಿಗಳ ಪುತ್ರಿ, ವಿಮರ್ಶಾರವರು ಪದ್ಮನಾಭ ಶೆಟ್ಟಿ ಹಾಗೂ ವಿನೋದ ದಂಪತಿಗಳ ಪುತ್ರಿ, ಪ್ರಿಯದರ್ಶಿನಿಯವರು ಸತೀಶ್-ಪ್ರಮೀಳಾ ದಂಪತಿಗಳ ಪುತ್ರಿ ಇವರನ್ನು ಬ್ರಹ್ಮಶ್ರೀ ಕುಣಿತ ಭಜನೆ ಮಂಡಳಿಯ ಸಂಚಾಲಕರಾದ ಹರೀಶ್ ವೈ ಚಂದ್ರಮ ಮತ್ತು ಅಧ್ಯಕ್ಷರು ಹಾಗೂ ಸರ್ವ ಸದಸ್ಯರ ವಿದ್ಯಾರ್ಥಿಗಳ ಮನೆಗೆ ತೆರಳಿ ಗೌರವಿಸಿದರು.ಹಾಗೆಯೇ ಮುಂದಿನ ಪಿಯುಸಿ ವಿದ್ಯಾಭ್ಯಾಸವನ್ನು ಸಂಪೂರ್ಣ ಬ್ರಹ್ಮಶ್ರೀ ಕುಣಿತ ಭಜನೆ ಮಂಡಳಿಯಿಂದ ಭರಿಸಲಾಗುವುದು ಎಂದು ತಿಳಿಸಿದರು.

Related posts

ಮುಗೇರಡ್ಕ ದೈವಸ್ಥಾನಕ್ಕೆ ಶಾಸಕ ಹರೀಶ್ ಪೂಂಜ ಭೇಟಿ

Suddi Udaya

ನಾಲ್ಕೂರು: ನಿಟ್ಟಡ್ಕದಲ್ಲಿ ಪಂಚಶ್ರೀ ಮಕ್ಕಳ ಕುಣಿತಾ ಭಜನಾ ತಂಡ ರಚನೆ

Suddi Udaya

ಪುದುವೆಟ್ಟು ಮಡ್ಯದಲ್ಲಿ ರಸ್ತೆ ಒತ್ತುವರಿ ತೆರವು ಬಳಿಕ ವಲಯ ಅರಣ್ಯಾಧಿಕಾರಿ ತ್ಯಾಗರಾಜ್ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಧನಂಜಯ ಭೇಟಿ ನೀಡಿ ಪರಿಶೀಲನೆ

Suddi Udaya

ಜೆ ಇ ಇ ಮೈನ್ಸ್ ಫಲಿತಾಂಶ ಪ್ರಕಟ ಗುರುವಾಯನಕೆರೆ ಎಕ್ಸೆಲ್ ಕಾಲೇಜಿನ ವಿದ್ಯಾರ್ಥಿಗಳ ಅಮೋಘ ಸಾಧನೆ

Suddi Udaya

ಗುರುವಾಯನಕೆರೆ ಶಕ್ತಿನಗರ ನಿವಾಸಿ ಧನಂಜಯ ಇಂದ್ರ ನಿಧನ

Suddi Udaya

ರಾಜ್ಯಮಟ್ಟದ ಅಂತರ್ ಕಾಲೇಜು ಸ್ಪರ್ಧೆ ‘ವೆಂಚುರಾ- 2023’ ಸಮಾರೋಪ ಸಮಾರಂಭ

Suddi Udaya
error: Content is protected !!