ಬಳಂಜ: ತಾಲೂಕು ಕಂಡ ಅಪರೂಪದ ಶ್ರೇಷ್ಠ ರಾಜಕಾರಣಿ ವಸಂತ ಬಂಗೇರರವರು. ಅವರ ನೇರ ನಡೆ ನುಡಿ,ಬಡವರ ಪಾಲಿನ ಆಶಾಕಿರಣವಾಗಿದ್ದ ವಸಂತ ಬಂಗೇರರ ಅಗಲಿಕೆ ಸಮಸ್ತ ಸಮಾಜಕ್ಕೆ ತುಂಬಲಾರದ ನಷ್ಟವೆಂದು ಬಳಂಜ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿ ಗೌರವಾಧ್ಯಕ್ಷ ಹೆಚ್.ಧರ್ಣಪ್ಪ ಪೂಜಾರಿ ಹೇಳಿದರು.
ಅವರು ಮೇ.12 ರಂದು ಬಳಂಜ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿ,ಯುವ ಬಿಲ್ಲವ ವೇದಿಕೆ,ಮಹಿಳಾ ಬಿಲ್ಲವ ವೇದಿಕೆಯಿಂದ ನಡೆದ ಕೆ.ವಸಂತ ಬಂಗೇರರ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ನುಡಿ ನಮನ ಸಲ್ಲಿಸಿದರು.ಬೆಳ್ತಂಗಡಿ ತಾಲೂಕಿನಲ್ಲಿ ಐದು ಬಾರಿ ಶಾಸಕರಾಗಿ ತಾಲೂಕಿನ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮ ಪಟ್ಟವರು ವಸಂತ ಬಂಗೇರರು.
1982 ರಲ್ಲಿ ಬಳಂಜ ಬಿಲ್ಲವ ಸಂಘದ ಶಂಕು ಸ್ಥಾಪನೆಯನ್ನು ನೇರವೇರಿಸಿ ಬಿಲ್ಲವ ಸಮಾಜದ ಪ್ರಗತಿಗೆ ಸಹಕಾರ ನೀಡಿದ್ದಾರೆ.ಅವರೊಬ್ಬ ಪಕ್ಷಾತೀತ ನಾಯಕ. ಎಲ್ಲರೊಂದಿಗೂ ಉತ್ತಮ ಸಂಭಂದ ಹೊಂದಿದ್ದರು ಎಂದರು.ಬಳಂಜ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿ ಅಧ್ಯಕ್ಷ ಸಂತೋಷ್ ಪಿ ಕೋಟ್ಯಾನ್ ಮಾತನಾಡಿ ವಸಂತ ಬಂಗೇರರ ಸರಳ ಸಜ್ಜನಿಕೆಯ ವ್ಯಕ್ತಿತ್ವ, ನೇರ ನಡೆ ನುಡಿ ಪ್ರೇರಣೆದಾಯಕವಾದುದು. ಐದು ಬಾರಿ ತಾಲೂಕಿನ ಶಾಸಕರಾಗಿ ತಾಲೂಕಿನ ಅಭಿವೃದ್ಧಿಗೆ ಕೊಡುಗೆ ನೀಡಿದ್ದಾರೆ. ಬಳಂಜ ಬಿಲ್ಲವ ಸಂಘದ ಅಭಿವೃದ್ಧಿ ಕೆಲಸ ಕಾರ್ಯಗಳಲ್ಲಿ ಜೊತೆಯಾಗಿ ಕೆಲಸ ಮಾಡಿದ್ದಾರೆ. ಅವರ ನಿಧನದಿಂದ ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ. ಅವರ ಆತ್ಮಕ್ಕೆ ಮೋಕ್ಷ ಪ್ರಾಪ್ತಿಯಾಗಲಿ ಎಂದು ಶ್ರದ್ಧಾಂಜಲಿ ಅರ್ಪಿಸಿದರು.ಸಂಘದ ಮಾಜಿ ಅಧ್ಯಕ್ಷ ಪ್ರವೀಣ್ ಕುಮಾರ್ ಹೆಚ್.ಎಸ್ ಮಾತನಾಡಿ ಬಂಗೇರರವರು ಅಪರೂಪದ ರಾಜಕಾರಣಿ. ಸುಮಾರು 40 ವರ್ಷದ ರಾಜಕೀಯ ಜೀವನದಲ್ಲಿ ಶುದ್ದ ಹಸ್ತದ ರಾಜಕಾರಣಿಯಾಗಿ ಬಂಗೇರರವರು ಹೆಸರು ಸಂಪಾದಿಸಿದ್ದಾರೆ ಎನ್ನುತ್ತ ನುಡಿ ನಮನ ಅರ್ಪಿಸಿದರು.ಬೆಳ್ತಂಗಡಿ ಯುವ ಬಿಲ್ಲವ ವೇದಿಕೆ ಮಾಜಿ ಅಧ್ಯಕ್ಷ ರಂಜಿತ್ ಹೆಚ್.ಡಿ ಮಾತನಾಡಿ ಮೂರು ಪಕ್ಷಗಳಲ್ಲಿ ಶಾಸಕರಾದವರಲ್ಲಿ ಬಂಗೇರರು ಮೊದಲಿಗರು. ಅವರ ಆದರ್ಶ ವ್ಯಕ್ತಿತ್ವ ನಮಗೆಲ್ಲ ಮಾದರಿ ಎಂದರು.
ಈ ಸಂದರ್ಭದಲ್ಲಿ ಸಂಘದ ಮಾಜಿ ಅಧ್ಯಕ್ಷ ಹೆಚ್.ದೇಜಪ್ಪ ಪೂಜಾರಿ, ಸಂಘದ ಪ್ರಧಾನ ಕಾರ್ಯದರ್ಶಿ ಜಗದೀಶ್ ಪೂಜಾರಿ ಬಳ್ಳಿದಡ್ಡ, ನಿರ್ದೆಶಕರಾದ ದಿನೇಶ್ ಪೂಜಾರಿ ಅಂತರ,ರಂಜಿತ್ ಪೂಜಾರಿ, ಪ್ರವಿಣ್ ಪೂಜಾರಿ ಲಾಂತ್ಯಾರು,ಯುವ ಬಿಲ್ಲವ ವೇದಿಕೆ ಅಧ್ಯಕ್ಷ ಶರತ್ ಅಂಚನ್,ಸದಸ್ಯ ಸಂಪತ್ ಪಿ ಕೋಟ್ಯಾನ್, ಆದರ್ಶ್ ಪೂಜಾರಿ,ದೀಪಕ್ ಹೆಚ್.ಡಿ, ಹಿರಿಯರಾದ ಲಕ್ಷ್ಮಣ ಪೂಜಾರಿ ಹಾಗೂ ಸಂಘದ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.