April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿ

ಬೆಳ್ತಂಗಡಿ : ಮಾಜಿ ಶಾಸಕ ವಸಂತ ಬಂಗೇರ ಮತ್ತು ಎಮ್. ತುಂಗಪ್ಪ ಗೌಡರಿಗೆ ಶ್ರದ್ಧಾಂಜಲಿ

ಬೆಳ್ತಂಗಡಿ: ಕೆ.ಪಿ.ಸಿ.ಸಿ ಯ ಉಪಾಧ್ಯಕ್ಷರು ಹಾಗೂ ಕರ್ನಾಟಕ ಸರಕಾರದ ಮಾಜಿ ಸಚಿವರಾದ ಕೆ. ಗಂಗಾಧರ ಗೌಡ ರವರ ಕಛೇರಿಯಲ್ಲಿ ಮಾಜಿ ಶಾಸಕರು ಹಾಗೂ ಸರಕಾರದ ಮಾಜಿ ಮುಖ್ಯ ಸಚೇತಕರಾದ ಕೆ. ವಸಂತ ಬಂಗೇರ ಮತ್ತು ಮಾಜಿ ಜಿಲ್ಲಾ ಪಂ. ಸದಸ್ಯರೂ, ಹಿರಿಯ ಸಹಕಾರಿಗಳಾದ ತುಂಗಪ್ಪ ಗೌಡರಿಗೆ ಮೇ 13 ರಂದು ಶ್ರದ್ಧಾಂಜಲಿ ಅರ್ಪಿಸಿ, ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಮೌನ ಪ್ರಾರ್ಥನೆ ಮಾಡಲಾಯಿತು.


ಕೆ. ಗಂಗಾಧರ ಗೌಡರು ವಸಂತ ಬಂಗೇರರ ಗುಣಗಾನ ಮಾಡಿ ಅವರ ಆತ್ಮಕ್ಕೆ ಶಾಂತಿ ಕೋರಿ ಪ್ರಾರ್ಥಿಸಿದರು. ಇನ್ನೋರ್ವ ರಾಜಕಾರಿಣಿ ತುಂಗಪ್ಪ ಗೌಡರ ಬಗ್ಗೆ ನುಡಿನಮನ ಸಲ್ಲಿಸಿ ಅವರ ಆತ್ಮಕ್ಕೂ ಶಾಂತಿ ಸಿಗುವಂತೆ ಪ್ರಾರ್ಥಿಸಿದರು. ಸಭೆಯಲ್ಲಿ ಮಾಜಿ ಜಿಲ್ಲಾ ಪಂ. ಸದಸ್ಯರಾದ ಇ. ಸುಂದರ ಗೌಡ, ಮಾಜಿ ಜಿಲ್ಲಾ ಪಂ. ಸದಸ್ಯರಾದ ಬಿ. ರಾಜಶೇಖರ ಅಜ್ರಿ, ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷರಾದ ಕೆ. ಬಾಲಕೃಷ್ಣ ಗೌಡ, ನಿವೃತ್ತ ಎ.ಸಿ.ಎಫ್. ಎಮ್. ಎಸ್. ವರ್ಮ, ಕೆ.ಪಿ.ಸಿ.ಸಿ ಯ ಸದಸ್ಯರಾದ ಕೇಶವ ಗೌಡ ಬೆಳಾಲು, ತಾಲೂಕು ಪಂ. ಮಾಜಿ ಅಧ್ಯಕ್ಷರಾದ ಮುಕುಂದ ಸುವರ್ಣ, ತಾಲೂಕು ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಮಾಜಿ ಅಧ್ಯಕ್ಷರಾದ ಕೆ. ಸಲೀಂ ಗುರುವಾಯನಕೆರೆ, ಜಿಲ್ಲಾ ಕಾಂಗ್ರೆಸ್ ಸಮಿತಿಯ ಮಾಜಿ ಕಾರ್ಯದರ್ಶಿಗಳಾದ ಬಿ.ಎ. ನಝೀರ್, ಕೆ.ಪಿ.ಸಿ.ಸಿ ಕಾರ್ಮಿಕ ಘಟಕದ ಪ್ರಧಾನ ಕಾರ್ಯದರ್ಶಿಗಳಾದ ಅಬ್ದುಲ್ ರಹಿಮಾನ್ ಪಡ್ಪು, ಪ್ರಮುಖರಾದ ಕೆ.ಎಸ್. ಅಬ್ದುಲ್ಲ, ಬಿ. ಮೆಹಬೂಬ್, ಕೆ. ಆನಂದ ಶೆಟ್ಟಿ, ನ. ಪಂ. ಸದಸ್ಯ ಜಗದೀಶ್ ಡಿ., ರಮೀಝ್ ಬೆಳ್ತಂಗಡಿ, ಸತ್ತಾರ್ ಸಾಹೇಬ್, ಎಸ್.ಎಮ್. ಕೋಯ ಉಜಿರೆ, ಯು.ಎ. ಹಮೀದ್, ಬಿ. ಎಮ್. ಹಮೀದ್, ಕೆ.ಪಿ.ಸಿ.ಸಿ ಯ ಸದಸ್ಯರಾದ ಕೆ. ಮೋಹನ್ ಶೆಟ್ಟಿಗಾರ್, ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷರಾದ ಕೆ. ಶೈಲೇಶ್ ಕುಮಾರ್, ಜಿಲ್ಲಾ ಕಾಂಗ್ರೆಸ್ ಸಮಿತಿಯ ಕಾರ್ಯದರ್ಶಿ ಅಭಿನಂದನ್ ಹರೀಶ್ ಕುಮಾರ್, ಎಸ್ಸಿ ಘಟಕದ ಪ್ರಧಾನ ಕಾರ್ಯದರ್ಶಿ ಅವಿನಾಶ್ ಕುರ್ತ್ತೋಡಿ, ಪ್ರಭಾಕರ ಓಡಿಲ್ನಾಳ, ರಮೇಶ್ ರೆಂಕೆದಗುತ್ತು, ಗುರುಪ್ರಸಾದ್ ಮಾಲಾಡಿ, ಶಬೀರ್ ಮದ್ದಡ್ಕ, ಕೆ. ಬಾಲಕೃಷ್ಣ ಗೌಡ, ಸಂತೋಷ್ ಕುಮಾರ್ ಕಣಿಯೂರು, ಮುನಿರಾಜ ಅಜ್ರಿ, ಪುತ್ತಾಕ ಜೈ ಭಾರತ್, ಬಾಬು ಕೆ. ತೋಟತ್ತಾಡಿ, ಜನಾರ್ಧನ ಕುಲಾಲ್, ಮೂಸ ಕುಂಞ್ಞಿ, ಆಗಸ್ಟಿನ್ ನಡ, ಎಚ್. ರಾಮಕೃಷ್ಣ ಗೌಡ, ಸಿನಾನ್, ಲಕ್ಷಣ ಫಂಡಿಜೆ ಮುಂತಾದವರು ಉಪಸ್ಥಿತರಿದ್ದರು.

Related posts

ಬಸ್ಸು ಮತ್ತು ಬೈಕ್ ನಡುವೆ ಭೀಕರ ರಸ್ತೆ ಅಪಘಾತ: ಚಾರ್ಮಾಡಿಯ ಯುವಕ ಸಾವು

Suddi Udaya

ಬೆಳ್ತಂಗಡಿ ಭಾರತೀಯ ರೆಡ್ ಕ್ರಾಸ್ ಸೊಸೈಟಿ , ನ್ಯಾಷನಲ್ ಇನ್ಶುರೆನ್ಸ್ ಕಂಪನಿ ಬಂಟ್ವಾಳ ಬ್ರಾಂಚ್ ಮತ್ತು ಜೆಸಿಐ ಸೀನಿಯರ್ ಛೇಂಬರ್ ವತಿಯಿಂದ ಮಹಾತ್ಮ ಗಾಂಧಿ ಜಯಂತಿ ಆಚರಣೆ

Suddi Udaya

ಹಿಂದೂ ಧರ್ಮದ ವಿರುದ್ಧ ನೀಡಿರುವ ಹೇಳಿಕೆಗೆ ದ.ಕ. ಜಿಲ್ಲಾ ಶಿವಳ್ಳಿ ಬ್ರಾಹ್ಮಣ ಸಂಘ ಮತ್ತು ಸಮಗ್ರ ಹಿಂದೂ ಸಮಾಜ ಖಂಡನೆ: ಡಾ| ಎಂ.ಎಂ. ದಯಾಕರ್

Suddi Udaya

ಜ.14-18: ಅನಾರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವರ್ಷಾವಧಿ ಜಾತ್ರಾ ಮಹೋತ್ಸವ

Suddi Udaya

ಧರ್ಮಸ್ಥಳ: ಮಾನ್ವಿ ಶ್ರೀ ಸಂಜೀವಿನಿ ಮಹಿಳಾ ಒಕ್ಕೂಟದ ವಾರ್ಷಿಕ ಮಹಾಸಭೆ

Suddi Udaya

ಇಂದಬೆಟ್ಟು ಗ್ರಾ.ಪಂ. ವತಿಯಿಂದ ಸ್ವಚ್ಛತಾ ಕಾರ್ಯ

Suddi Udaya
error: Content is protected !!