March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಚಾರ್ಮಾಡಿ ಘಾಟಿಯಲ್ಲಿ ಮತ್ತೆ ಕಾಡಾನೆ ಪ್ರತ್ಯಕ್ಷ

ಚಾರ್ಮಾಡಿ ಘಾಟಿ ರಸ್ತೆಯಲ್ಲಿ ಇಂದು (ಮೇ 18) ಮಧ್ಯಾಹ್ನದ ಹೊತ್ತು ಕಾಡಾನೆ ಮತ್ತೆ ಕಂಡು ಬಂದಿದೆ.
ಈ ವಾರದಲ್ಲಿ ಇದು ಕಾಡಾನೆ ಕಂಡು ಬಂದಿರುವುದು ನಾಲ್ಕನೇ ಬಾರಿ. ಸೋಮವಾರದಿಂದ ಬುಧವಾರದವರೆಗೆ ಇಲ್ಲಿನ ರಸ್ತೆಯ ಒಂದನೇ ತಿರುವಿನಿಂದ ಒಂಬತ್ತನೇ ತಿರುವಿನ ಅಲ್ಲಲ್ಲಿ ಕಾಡಾನೆ ಹಗಲಲ್ಲಿ ಹಾಗೂ ರಾತ್ರಿ ಹೊತ್ತು ಕಂಡುಬಂದಿತ್ತು. ಬಳಿಕ ಅರಣ್ಯ ಇಲಾಖೆ ಘಾಟಿ ಭಾಗದಲ್ಲಿ ರಾತ್ರಿ ಗಸ್ತು ಕಾರ್ಯಾಚರಣೆ ಆರಂಭಿಸಿದೆ. ಇದರ ನಂತರ ಎರಡು ದಿನ ಕಾಡಾನೆ ಕಂಡು ಬಂದಿರಲಿಲ್ಲ.
ಆದರೆ ಶನಿವಾರ ಮಧ್ಯಾಹ್ನ 8ನೇ ತಿರುವಿನಲ್ಲಿ ಕಾಡಾನೆ ಮತ್ತೆ ಕಂಡುಬಂದಿದೆ. ರಸ್ತೆ ಬದಿ ಆಹಾರ ತಿನ್ನುತ್ತಿದ್ದ ಕಾಡಾನೆ ಬಳಿಕ ಅರ್ಧ ಗಂಟೆ ಹೊತ್ತು ಅಲ್ಲೇ ವಿರಮಿಸಿತ್ತು. ಆನೆ ರಸ್ತೆ ವ್ಯಾಪ್ತಿಯಲ್ಲಿ ಇದ್ದ ಕಾರಣ ಸುಮಾರು ಒಂದು ತಾಸು ಕಾಲ ವಾಹನ ಸವಾರರು ಕಾದು ನಿಂತರು.


ಅರಣ್ಯ ಇಲಾಖೆ ಡಿ ಆರ್ ಎಫ್ ಒ ನಾಗೇಶ್ ಸಿಬ್ಬಂದಿಗಳಾದ ದಿವಾಕರ ಮತ್ತು ಗೋಪಾಲ ಸ್ಥಳಕ್ಕೆ ಭೇಟಿ ನೀಡಿದಾಗ ಆನೆ ಅಲ್ಲಿಂದ ಕಾಡಿನ ಕಡೆಗೆ ಮುಂದುವರೆದಿತ್ತು. ತಂಡವು ಕಾಡಿನ ಒಳಭಾಗದಲ್ಲಿ ಅಲ್ಲಲ್ಲಿ ಪರಿಶೀಲನೆ ನಡೆಸಿತು. ಈ ಹೊತ್ತಿಗೆ ಆನೆ ಅಲ್ಲಿಂದ ಬೇರೆ ಜಾಗಕ್ಕೆ ತನ್ನ ಠಿಕಾಣಿಯನ್ನು ಬದಲಾಯಿಸಿತ್ತು.

Related posts

ಉಜಿರೆಯ ಶ್ರೀ ಪಂಚಮಿ ನಾಗಬನದಲ್ಲಿ ನಾಗದೇವರಿಗೆ ಕ್ಷೀರಾಭಿಷೇಕ, ಮಹಾಪೂಜೆ

Suddi Udaya

ಅಳದಂಗಡಿ ಸ.ಪ.ಪೂ. ಕಾಲೇಜಿನಲ್ಲಿ ಪ್ರಯೋಗಾಲಯ ಉಪಕರಣಗಳ ಹಸ್ತಾಂತರ ಮತ್ತು ಪ್ರತಿಭಾ ಪುರಸ್ಕಾರ

Suddi Udaya

22ನೇ ಮಹಿಳಾ ಆಲ್ ಇಂಡಿಯಾ ಇಂಟರ್ ಝೋನಲ್ ನೆಟ್ಬಾಲ್ ಪಂದ್ಯಾಟ: ಎಸ್ ಡಿ ಎಂ ಕಾಲೇಜಿನ 2 ಕ್ರೀಡಾಪಟುಗಳಿಗೆ ಬೆಳ್ಳಿ ಪದಕ

Suddi Udaya

ಧರ್ಮಸ್ಥಳ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಬಸ್ ನಿಲ್ದಾಣವನ್ನು ಮೇಲ್ದರ್ಜೆಗೇರಿಸಲು ಸಾರಿಗೆ ಸಚಿವರಿಗೆ ರಕ್ಷಿತ್ ಶಿವರಾಂ ಮನವಿ

Suddi Udaya

ಪಡಂಗಡಿ ಹಾಲು ಉತ್ಪಾದಕರ ಸಂಘದ ನೂತನ ಅಧ್ಯಕ್ಷರಾಗಿ ಸುಂದರ ಪೂಜಾರಿ ಅವಿರೋಧ ಆಯ್ಕೆ

Suddi Udaya

ಫೆ. 28- 29: ಶಿಬಾಜೆ ಮೊಂಟೆತ್ತಡ್ಕ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ವಾರ್ಷಿಕ ಜಾತ್ರೋತ್ಸವ: ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya
error: Content is protected !!