24.5 C
ಪುತ್ತೂರು, ಬೆಳ್ತಂಗಡಿ
April 5, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಭಾರತೀಯ ಜೈನ್ ಮಿಲನ್ ಬೆಳ್ತಂಗಡಿ ಶಾಖೆಯ ಮಾಸಿಕ ಸಭೆ

ಉಜಿರೆ: ಭಾರತೀಯ ಜೈನ್ ಮಿಲನ್ ಬೆಳ್ತಂಗಡಿ ಶಾಖೆಯ ಮಾಸಿಕ ಸಭೆಯು ಇತ್ತೀಚೆಗೆ ಉಜಿರೆಯಲ್ಲಿ ಮಿಲನ್ ಅಧ್ಯಕ್ಷರಾದ ವೀರ್ ಡಾ| ನವೀನ್ ಕುಮಾರ್ ಜೈನ್ ಇವರ ಅಧ್ಯಕ್ಷತೆಯಲ್ಲಿ ಜರಗಿತು.

ಜೈನ್ ಮಿಲನ್ ನ ಕಾರ್ಯಕ್ರಮಗಳು ಹಾಗೂ ಮುಂದಿನ ಯೋಜನೆಗಳ ಬಗ್ಗೆ ಸವಿವರವಾಗಿ ಅಧ್ಯಕ್ಷರು ವಿವರಿಸಿ ತಿಳಿಸಿದರು, ವೀರ್ ಭುಜಬಲಿಯವರು ಯಶಸ್ವಿ ಮಾಸಿಕ ಸಭೆ ನಡೆಸುವ ಬಗ್ಗೆ ಸಲಹೆ ನೀಡಿದರು, ಧೀಮಹಿ ಮಹಿಳಾ ಸಮಾಜದ ಅಧ್ಯಕ್ಷೆ ವೀರಾಂಗನ ಶ್ರೀಮತಿ ಡಾಕ್ಟರ್ ರಜತ ಅವರು ಮಾತನಾಡಿ ತಿಂಗಳಿಗೆ ಒಂದು ಸಲ ಪರಸ್ಪರ ವಿಚಾರ ವಿನಿಮಯ ಮಾಡಿಕೊಳ್ಳಲು ಇಂತಹ ಸಭೆಗಳಿಂದ ಅವಕಾಶ ದೊರೆಯುತ್ತದೆ ಮತ್ತು ಇದನ್ನು ಎಲ್ಲಾ ಸದಸ್ಯರು ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ಮಿಲನ್ ನಿರ್ದೇಶಕ ವೀರ್ ಬಿ. ಸೋಮಶೇಖರ ಶೆಟ್ಟಿ ಅವರು ಮಾತನಾಡಿ ಮಿಲನ್ ಸಂಘಟನೆಯ ಮಹತ್ವ ಹಾಗೂ ಅವಕಾಶಗಳ ಬಗ್ಗೆ ಮಾಹಿತಿ ನೀಡಿದರು ಮತ್ತು ಸಂಘಟನೆ ಬಲಗೊಳಿಸುವಲ್ಲಿ ಸದಸ್ಯರ ದಕಾರವನ್ನು ಕೋರಿದರು. ವೇದಿಕೆಯಲ್ಲಿ ವೀರ್ ಮುನಿರಾಜ ಅಜ್ರಿ ಉಪಸ್ಥಿತರಿದ್ದರು.


ಕಾರ್ಯದರ್ಶಿ ವೀರ್ ಸಂಪತ್ ಕುಮಾರ್ ಕಾರ್ಯ ಕ್ರಮ ನಿರ್ವಹಿಸಿದರು, ವೀರ್ ನಿಖಿತ್ ವಂದಿಸಿದರು.

Related posts

ಓಡಲ ಶಿವ-ಪಾರ್ವತಿ ಮಹಿಳಾ ಭಜನಾ ತಂಡದಿಂದ ನಿವೃತ್ತ ಶಿಕ್ಷಕಿ ಸೀತಮ್ಮ ರವರಿಗೆ ಗುರುವಂದನೆ ಕಾರ್ಯಕ್ರಮ

Suddi Udaya

ಅನಾರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವರ್ಷಾವಧಿ ಜಾತ್ರಾ ಮಹೋತ್ಸವ : ಧಾರ್ಮಿಕ ಸಭೆ, ಸಾಧಕರಿಗೆ ಸನ್ಮಾನ

Suddi Udaya

ತಾಲೂಕು ಹಬ್ಬಗಳ ಆಚರಣೆ ಸಮಿತಿಯಿಂದ ಡಾ|| ಬಿ.ಆರ್.ಅಂಬೇಡ್ಕರ್ ಜನ್ಮದಿನಾಚರಣೆ

Suddi Udaya

ಸೆ.21: ಕರಾಯ ವಿದ್ಯುತ್ ನಿಲುಗಡೆ

Suddi Udaya

ತೆಂಕಕಾರಂದೂರು: ಕಾಪಿನಡ್ಕ ಗಾಂಧಿನಗರ ನಿವಾಸಿ ಸುಂದರ ದೇವಾಡಿಗ ನಿಧನ

Suddi Udaya

ಬೈಲಹೊಂಗಲ ಮಂಡಲದ ವತಿಯಿಂದ ಶಾಸಕ ಹರೀಶ್ ಪೂಂಜರಿಗೆ ಸನ್ಮಾನ

Suddi Udaya
error: Content is protected !!