ಕಳೆಂಜ: ಜೆಸಿಐ ಕೊಕ್ಕಡ ಕಪಿಲಾ ಘಟಕ ಮತ್ತು ಶ್ರೀ ಸದಾಶಿವೇಶ್ವರ ದೇವಸ್ಥಾನ ಕಳೆಂಜ ಇವುಗಳ ನೇತೃತ್ವದಲ್ಲಿ ಶ್ರೀ ಸದಾಶಿವೇಶ್ವರ ದೇವಸ್ಥಾನದ ವಠಾರದಲ್ಲಿ ಮೇ 25 ಮತ್ತು 26 ರಂದು ಎರಡು ದಿನದ ಶಿಬಿರವು ನಡೆಯಿತು.
ಈ ಶಿಬಿರದಲ್ಲಿ 39 ಮಕ್ಕಳು ಭಾಗವಹಿಸಿದರು. ಶಿಬಿರದ ಉದ್ಘಾಟನೆಯನ್ನು ಜೆಸಿ ಭರತ್ ಶೆಟ್ಟಿ ಝೋನ್ ಡೈರೆಕ್ಟರ್ ಕಮ್ಯುನಿಟಿ ಡೆವಲಪ್ಮೆಂಟ್ ಝೋನ್-15 ಉದ್ಘಾಟಿಸಿದರು.
ಮುಖ್ಯ ಅತಿಥಿಗಳಾಗಿ ಜೆ ಸಿ ಎಚ್ ಜಿಎಫ್ ಜೋಸೆಫ್ ಪಿರೇರ ಮಾರ್ಗದರ್ಶಕರು ಜೆಸಿಐ ಕೊಕ್ಕಡ ಕಪಿಲಾ, ಹಾಗೂ ಶ್ರೀ ಸದಾಶಿವೇಶ್ವರ ದೇವಸ್ಥಾನದ ಅಧ್ಯಕ್ಷ ಜೆಸಿ ಜೆಎಫ್ಎಂ ಶ್ರೀಧರ್ ರಾವ್ ಕಾಯಡ, ನಿಕಟಪೂರ್ವ ಅಧ್ಯಕ್ಷ ಜೆಸಿ ಸೆನಿಟರ್ ಜಿತೇಶ್ ಪಿರೇರ, ಅಧ್ಯಕ್ಷ ಜೆಸಿ ಎಚ್ ಜಿ ಎಫ್ ಸಂತೋಷ್ ಜೈನ್, ಕಾರ್ಯದರ್ಶಿಯಾದ ಅಕ್ಷತ್ ರೈ, ಮತ್ತು ಮಹಿಳಾ ಜೆಸಿ ಅಧ್ಯಕ್ಷೆ ಜೆಸಿ ಶೋಭಾ ಪಿ ಭಾಗವಹಿಸಿದರು.
ಶಿಬಿರದ ಸಂಪನ್ಮೂಲ ವ್ಯಕ್ತಿಗಳಾಗಿ ಉಜಿರೆ ಸಮ್ಮತಿ ನಿಲಯ ಶ್ರೀಮತಿ ಚಂಪಾ ಜೈನ್ ರವರು ಕಸದಿಂದ ರಸ ಎಂಬ ಶಿರ್ಷಿಕೆಯಲ್ಲಿ ಕ್ರಾಫ್ಟ್ ವರ್ಕ್ ಅನ್ನು ಹೇಳಿಕೊಟ್ಟರು. ಗಂಗಾಧರ ಭಂಡಾರಿ ರವರು ಮಕ್ಕಳಲ್ಲಿ ಸಂಸ್ಕಾರ ಮತ್ತು ಒಳ್ಳೆಯ ಸಂಸ್ಕೃತಿ ಬೆಳವಣಿಗೆಯನ್ನು ಚಟುವಟಿಕೆಗಳ ಮೂಲಕ ಮಾಹಿತಿ ನೀಡಿದರು. ಜೆಸಿ ರಾಜಾರಾಮ್ ಸಂಗಮ ನಗರ ಜಾನಪದ ಹಾಡುಗಳನ್ನು ಮಕ್ಕಳಿಗೆ ಹೇಳಿಕೊಟ್ಟರು. ಶ್ರೀಮತಿ ಚೇತನಾ ಎಂ ಶಿಕ್ಷಣ ಸಂಯೋಜಕರು ಸಾರ್ವಜನಿಕ ಶಿಕ್ಷಣ ಇಲಾಖೆ ಬೆಳ್ತಂಗಡಿ ಇವರು ಚಟುವಟಿಕೆಗಳ ಮೂಲಕ ವಿದ್ಯಾರ್ಥಿಗಳಲ್ಲಿ ಕಲಿಕ ಸಾಮರ್ಥ್ಯ ಹೆಚ್ಚಿಸುವಿಕೆಯನ್ನು ಹೇಳಿಕೊಟ್ಟರು.
ಎಲ್ಲ ಸಂಪನ್ಮೂಲ ವ್ಯಕ್ತಿಗಳನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು. ಶಿಬಿರಕ್ಕೆ ಶ್ರೀ ಸದಾಶಿವೇಶ್ವರ ದೇವಸ್ಥಾನ ಕಳೆಂಜದ ಆಡಳಿತ ಮಂಡಳಿ ಸ್ಥಳಾವಕಾಶ ಮತ್ತು ಎಲ್ಲಾ ರೀತಿಯ ಸಹಾಯವನ್ನು ನೀಡಿರುತ್ತಾರೆ. ಮಕ್ಕಳಿಗೆ ಕೆಲವು ಮೈಂಡ್ ಗೇಮ್ ಆಟಗಳನ್ನು ಆಡಿಸಲಾಯಿತು.
ಮೇ 26 ರಂದು ನಡೆದ ಸಮಾರೋಪ ಸಮಾರಂಭದ ಮುಖ್ಯ ಅತಿಥಿಯಾಗಿ ಶ್ರೀ ಸದಾಶಿವೇಶ್ವರ ದೇವಸ್ಥಾನ ಕಳೆಂಜದ ಅಧ್ಯಕ್ಷ ಜೆಸಿ ಜೆಎಫ್ಎಂ ಕೆ ಶ್ರೀಧರ್ ರಾವ್ ಭಾಗವಹಿಸಿದರು. ಸಮಾರಂಭದಲ್ಲಿ ಹತ್ತನೇ ತರಗತಿಯಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆದಿರುವ ಶ್ರೀಮತಿ ಸುಮಾ ಪ್ರಕಾಶ್ ಶೆಟ್ಟಿ ಬೈಂದೂರು ಅವರ ಪುತ್ರಿಯಾದ ಕುಮಾರಿ ತೃಷಾ ಶೆಟ್ಟಿ ಅವರನ್ನು ಜೆಸಿಐ ಕೊಕ್ಕಡ ಕಪಿಲಾ ಘಟಕದ ವತಿಯಿಂದ ಸನ್ಮಾನಿಸಲಾಯಿತು.
ಶಿಬಿರದಲ್ಲಿ ಭಾಗವಹಿಸಿದ ಶಿಬಿರಾರ್ಥಿಗಳಿಗೆ ಪ್ರಶಸ್ತಿ ಪತ್ರ ಘಟಕದ ವತಿಯಿಂದ ನೀಡಲಾಯಿತು.
ಶಿಬಿರದಲ್ಲಿ ಸಕ್ರಿಯವಾಗಿ ಎರಡು ದಿನವೂ ಜೆ ಸಿ ಎಚ್ ಜಿ ಎಫ್ ಜೆಸಿಂತಾ ಡಿಸೋಜ, ಜೆ ಸಿ ಚಂದನಾ ಜೈನ್, ಜೆ ಸಿ ವಿದ್ಯೆಂದ್ರ ಗೌಡ, ಜೆ ಸಿ ಯೋಗೀಶ ಎಸ್ ಪಿ, ಜೆಸಿ ಧನುಷ್ ಜೈನ್, ಶ್ರೀ ಜಿನ ರಾಜ್ ಪೂವಣಿ, ಶ್ರೀ ವೃಷಭ ಜೈನ್, ಬಾಬು ಗೌಡ ಎಣ್ಣೆ ತಂಡ, ರಾಜೇಶ್ ಶೆಟ್ಟಿ, ಶ್ರೀಮತಿ ಕವಿತಾ ಶ್ರೀನಿವಾಸ್ ಗೌಡ ನಿಡ್ಲೆ ಇವರು ಭಾಗವಹಿಸಿದರು.
ಕಾರ್ಯಕ್ರಮದಲ್ಲಿ ಕಳೆಂಜ ಪಂಚಾಯತ್ ಸದಸ್ಯರಾದ ಟಿ ಎಸ್ ನಿತ್ಯಾನಂದ ರೈ ಶಾಲೆತಡ್ಕ, ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಹರೀಶ್ ರಾವ್ ಕಾಯಡ, ರಂಜಿತ್, ಕೇಶವ ಗೌಡ, ಶ್ರೀಮತಿ ಪಾರ್ವತಿ ಮಹಾಬಲ ಸಂಗಮ ನಗರ ಮುದ್ದಿಗೆ, ನಾಟಿ ವೈದ್ಯರು ರಮಾನಾಥ ರೈ ಶೇಡಿ, ಮತ್ತು ಸ್ಥಳೀಯರು ಹಾಗೂ ಪುಟಾಣಿ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಶ್ರೀಧರ್ ರಾವ್ ಕಾಯಡ ಅವರು ಸನ್ಮಾನಿತರ ಪರಿಚಯಿಸಿದರು, ಜೆಸಿ ವಾಣಿಯನ್ನು ಜೂನಿಯರ್ ಜೆ ಸಿ ಅದ್ವಿತ್ ಜೈನ್ ವಾಚಿಸಿದರು, ಶಿಬಿರದ ನಿರ್ದೇಶಕರಾದ ಜೆಸಿ ಶೋಭಾ ಪಿ ಶಿಬಿರದ ವರದಿಯನ್ನು ಓದಿದರು, ಸಂತೋಷ್ ಜೈನ್ ಸ್ವಾಗತಿಸಿ, ಅಕ್ಷತ್ ರೈ ಕಾರ್ಯಾಗಾರವನ್ನು ವಂದಿಸಿದರು.