24.7 C
ಪುತ್ತೂರು, ಬೆಳ್ತಂಗಡಿ
May 18, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿನಿಧನಪ್ರಮುಖ ಸುದ್ದಿ

ನಿಡ್ಲೆ ಸರಕಾರಿ ಪ್ರೌಢ ಶಾಲೆಯ ಕಂಪ್ಯೂಟರ್ ಶಿಕ್ಷಕಿ ಪ್ರಭಾ ಟಿ. ತಲೇಕಿ ನಿಧನ: ಪ್ರಭಾ ಅಪೇಕ್ಷೆಯಂತೆ ಮಣಿಪಾಲ ಮೆಡಿಕಲ್ ಕಾಲೇಜಿಗೆ ಮೃತದೇಹ ದಾನ

ನಿಡ್ಲೆ : ಇಲ್ಲಿಯ ತಲೇಕಿ ಪ್ರಭಾ ಟಿ.(48ವ.) ಯವರು ಮೇ.31ರಂದು ನಿಧನರಾದರು.

ಕಂಪ್ಯೂಟರ್ ಕೋರ್ಸ್ ಮಾಡಿದ್ದ ಇವರು ನಿಡ್ಲೆ ಸರಕಾರಿ ಪ್ರೌಢ ಶಾಲೆಯಲ್ಲಿ ಕಂಪ್ಯೂಟರ್ ಶಿಕ್ಷಕಿಯಾಗಿ 3ವರ್ಷ ಸೇವೆ ಸಲ್ಲಿಸಿದ್ದರು. ಹೃದಯ ಸಂಬಂಧಿ ಕಾಯಿಲೆಗೆ ಮೂರು ವರ್ಷದ ಹಿಂದೆ ಅಂದರೆ ಕೊರೋನ ಸಂಧರ್ಭದಲ್ಲಿ ನಡೆದ ಫೇಸ್ ಮೇಕರ್ ಅಪರೇಷನ್ ನಂತರ ಗುಣಮುಖರಾಗದೇ ಹೆಚ್ಚಾಗಿ ಆಸ್ಪತ್ರೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದ ಇವರು ಮೇ.31ರಂದು ನಿಧನರಾದರು.

ಒಂದು ವರ್ಷದ ಹಿಂದೆ ದೇಹದಾನ ಮಾಡಬೇಕೆನ್ನುವ ತನ್ನ ಮನದ ಆಸೆಯನ್ನು ಸಂಬಂಧಿಕರಲ್ಲಿ ತಿಳಿಸಿ, ಮಣಿಪಾಲ ಮೆಡಿಕಲ್ ಕಾಲೇಜಿಗೆ ಬರೆದು ಕೊಟ್ಟಿದ್ದರು. ಅಂತೆಯೇ ಮೃತದೇಹವನ್ನು ಮೆಡಿಕಲ್ ಕಾಲೇಜಿಗೆ ನೀಡಲಾಯಿತು. ಮೃತರು ಪತಿ ಜಗದೀಶ್ ರಾವ್, ಸಹೋದರ, ಸಹೋದರಿ, ಬಂಧು ಬಳಗವನ್ನು ಅಗಲಿದ್ದಾರೆ.

Related posts

ಬೆಳ್ತಂಗಡಿ ಕ್ಯಾಂಪ್ಕೋ ಶಾಖೆಯಿಂದ ನಿವೃತ್ತಿ ಹೊಂದಿದ ಶ್ರೀಧರ ಕೆ. ರವರಿಗೆ ಬೀಳ್ಕೊಡುಗೆ ಸಮಾರಂಭ

Suddi Udaya

ಮಚ್ಚಿನ ಅನಂತೇಶ್ವರ ಸಂಜೀವಿನಿ ಮಹಿಳಾ ಒಕ್ಕೂಟದ ವತಿಯಿಂದ ಸ್ವಸಹಾಯ ಸಂಘದ ಸದಸ್ಯರಿಗೆ ಫಿನೈಲ್ ಹಾಗೂ ಸೋಪ್ ಆಯಿಲ್ ತರಬೇತಿ

Suddi Udaya

ಜ.28 ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ರಕ್ತೇಶ್ವರಿ ಮತ್ತು ಪಂಜುರ್ಲಿ ದೈವಗಳ ಪ್ರತಿಷ್ಠಾಪನೆ: ಫೆ.2 ರಂದು ದೈವಗಳ ನರ್ತನ ಸೇವೆ

Suddi Udaya

ಬಳಂಜ: ಗ್ರಾಮ ಸಭೆ

Suddi Udaya

ಮುಂಡಾಜೆ: ನಿವೃತ್ತ ಅಧ್ಯಾಪಕ ಮೋಹನ್ ತಾಮನ್ಕರ್ ನಿಧನ

Suddi Udaya

ಆರ್ಥಿಕ ಹೊರೆಯಿಂದಾಗಿ ಅಭಿವೃದ್ಧಿಗೆ ಗ್ಯಾರಂಟಿಗಳು ಹೊಡೆತ: ರಾಜ್ಯವು ಆರ್ಥಿಕ ದಿವಾಳಿಯತ್ತ: ಪ್ರತಾಪಸಿಂಹ ನಾಯಕ್

Suddi Udaya
error: Content is protected !!