35.1 C
ಪುತ್ತೂರು, ಬೆಳ್ತಂಗಡಿ
April 11, 2025
Uncategorized

ಗುರುವಾಯನಕೆರೆ ಎಕ್ಸೆಲ್ ವಿದ್ಯಾಸಂಸ್ಥೆಯಲ್ಲಿ ವಾಣಿಜ್ಯ ತರಗತಿಗಳ ಪ್ರಾರಂಭೋತ್ಸವ ಕಾರ್ಯಕ್ರಮ

ಗುರುವಾಯನಕೆರೆ ಎಕ್ಸೆಲ್ ವಿದ್ಯಾಸಂಸ್ಥೆಯಲ್ಲಿ ವಾಣಿಜ್ಯ ತರಗತಿಗಳ ಪ್ರಾರಂಭೋತ್ಸವ ಕಾರ್ಯಕ್ರಮವು ನಡೆಯಿತು.

ವಾಣಿಜ್ಯ ವಿಭಾಗದಲ್ಲಿ ರಾಜ್ಯದಲ್ಲೇ ಪ್ರಪ್ರಥಮ ಇಂಟಿಗ್ರೇಟೆಡ್ ಪದವಿ ಪೂರ್ವ ಕಾಲೇಜಾಜಿ ಎಕ್ಸೆಲ್ ವಿದ್ಯಾಸಂಸ್ಥೆಯು ಗುರುತಿಸಿಕೊಂಡಿದ್ದು, ವಾಣಿಜ್ಯ ವಿಭಾಗವನ್ನು ಹೋಲಿ ರೆಡಿಮರ್ ಶಾಲೆಯ ಮುಖ್ಯೋಪಾಧ್ಯಾಯ ಫಾದರ್ ಕ್ಲಿಫರ್ಡ್ ಎಸ್. ಪಿಂಟೋ ರವರು ‘ಎಕ್ಸೆಲ್ ಇನ್ ಕಾಮರ್ಸ್, ಎಕ್ಸೆಲ್ ಇನ್ ಲೈಫ್’ ಎಂಬ ಉದ್ಘೋಷದೊಂದಿಗೆ ದೀಪ ಬೆಳಗಿಸಿ ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಸಂಚಲನ ಮೂಡಿಸಿದ ಎಕ್ಸೆಲ್ ವಿದ್ಯಾ ಸಂಸ್ಥೆಯು ನೂತನವಾಗಿ ವಾಣಿಜ್ಯ ವಿಭಾಗದಲ್ಲೂ ಹೊಸ ಶಕೆಯನ್ನು ಬರೆಯ ಹೊರಟಿದೆ. ಸಿ.ಎ. ಫೌಂಡೇಶನ್ ಕೋರ್ಸ್ ನಲ್ಲಿ ಮಕ್ಕಳಿಗೆ ರಾಜ್ಯಮಟ್ಟದ ಉತ್ತಮ ರಾಂಕ್ ತಂದು ಕೊಟ್ಟ ಅಧ್ಯಾಪಕರನ್ನು ಹೊoದಿರುವುದು ಗಮನಾರ್ಹವಾಗಿದೆ. ಇಂದಿನ ಕಾಲದಲ್ಲಿ ವಾಣಿಜ್ಯ ವಿಭಾಗದಲ್ಲಿನ ಗಣನೀಯ ಬದಲಾವಣೆಗಳು ಮಕ್ಕಳಿಗೆ ವ್ಯಾಪಕ ಅವಕಾಶಗಳನ್ನು ನೀಡುತ್ತಿದೆ. ಇ-ಕಾಮರ್ಸ್, ಡಿಜಿಟಲೀಕರಣ, ವಾಣಿಜ್ಯ ತೆರಿಗೆ ವಿಭಾಗ, ಹೆಚ್ಚಿದ ವ್ಯಾಪಾರ ವಹಿವಾಟುಗಳಿಂದಲಾಗಿ ಮುಕ್ತ ಉದ್ಯೋಗದ ಅವಕಾಶ ಸಾಧ್ಯವಾಗಿದೆ. ನೆರೆದಿದ್ದ ಎಲ್ಲಾ ವಿದ್ಯಾರ್ಥಿಗಳಿಗೆ ಶುಭ ಹಾರೈಸಿ ಸಾಧನೆಯ ಹಾದಿಗೆ ಜಾಗತೀಕ ಮಟ್ಟದಲ್ಲಿ ತೆರೆದ ಅವಕಾಶಗಳಿದ್ದು ಅವುಗಳನ್ನು ಸಮರ್ಪಕವಾಗಿ ಬಳಸುವಂತೆ ಮಾರ್ಗದರ್ಶನ ನೀಡಿದರು.

ಸಂಸ್ಥೆಯ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ರವರು ಹೊಸದಾಗಿ ದಾಖಲೆಗೊಂಡ ವಾಣಿಜ್ಯ ವಿಭಾಗದ ಮಕ್ಕಳನ್ನು ಉದ್ದೇಶಿಸಿ ಮಾತನಾಡುತ್ತಾ, ಕೇವಲ ವಿಜ್ಞಾನ ವಿಭಾಗದಲ್ಲಿ ಸಾಧನೆಗೈದ ನಮ್ಮ ಸಂಸ್ಥೆಯು ಇನ್ನು ಮುಂದೆ ವಾಣಿಜ್ಯ ವಿಭಾಗದಲ್ಲೂ ಸಾಧನೆಗೆ ಅಣಿಯಾಗುತ್ತಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ವಿಚಾರವಾಗಿದೆ. ಇದರೊಂದಿಗೆ ಎಲ್ಲಾ ಸೌಕರ್ಯವನ್ನು ಹಾಗೂ ವಿದ್ಯಾರ್ಜನೆಗೆ ಬೇಕಾದ ಎಲ್ಲಾ ಸಹಕಾರವನ್ನು ನೀಡುತ್ತಿದ್ದೇವೆ. ಅತ್ಯುತ್ತಮ ಅನುಭವ ಇರುವ ಮತ್ತು ರಾಜ್ಯದಲ್ಲಿ ಸಿ.ಎ., ಸಿ. ಎಸ್. ಕೋರ್ಸ್‌ಗಳಲ್ಲಿ ಅತ್ಯಂತ ಹೆಚ್ಚು ಫಲಿತಾಂಶಕ್ಕೆ ಅಡಿಪಾಯ ಹಾಕುವ ಅಧ್ಯಾಪಕ ವರ್ಗವನ್ನು ಎಕ್ಸೆಲ್ ಸಂಸ್ಥೆ ಹೊಂದಿರುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಕಾರ್ಯದರ್ಶಿಗಳಾದ ಅಭಿರಾಮ್ ಬಿ.ಎಸ್. , ಪ್ರಾಂಶುಪಾಲರಾದ ಡಾ.ನವೀನ್ ಕುಮಾರ್ ಮರಿಕೆ, ಶಾಂತಿರಾಜ್ ಜೈನ್, ಕೀರ್ತಿನಿಧಿ ಜೈನ್, ರಿಚರ್ಡ್ ಜೀವನ್ , ವಾಣಿಜ್ಯ ವಿಭಾಗದ ಮುಖ್ಯಸ್ಥ ಪ್ರಸನ್ನ ಭಾಗವಹಿಸಿದ್ದರು.
ವಾಣಿಜ್ಯ ವಿಭಾಗದ ಡೀನ್ ಸಂತೋಷ್ ರವರು ನಿರೂಪಣೆ ಮಾಡಿದರು. ಪ್ರಭಾಕರ್ ರವರು ಸ್ವಾಗತಿಸಿ, ರವಿ ಇವರು ವಂದಿಸಿದರು.

Related posts

ನಾಳೆ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ

Suddi Udaya

ನಿಡ್ಲೆ: ನಿವೃತ್ತ ಶಿಕ್ಷಕ ರಾಮಣ್ಣ ಪೂಜಾರಿ ನಿಧನ

Suddi Udaya

ಪ್ರಾಜೆಕ್ಟ್ ಡಿಸೈನ್ ವಿಭಾಗದಲ್ಲಿ ಎಕ್ಸ್ ಪ್ರೋ 201 ಅವಾರ್ಡ್, ವಾರಾಣಸಿ ಸುಬ್ರಾಯ ಭಟ್ ಅವಾರ್ಡ್, ಪ್ರೋಡೆಕ್ಟ್ ಇಂಜಿನಿಯರ್ ಅವಾರ್ಡ್ ಪಡೆದ ಅಜಿತ್ ಕುಮಾರ್ ತೆಂಕಕಾರಂದೂರು

Suddi Udaya

ಕೊಕ್ಕಡ ಜೇಸಿ ಸಾಮಾನ್ಯ ಸಭೆ: ವಲಯ ಕಾರ್ಯಕ್ರಮಕ್ಕೆ ನಿರ್ಧಾರ

Suddi Udaya

ಶ್ರೀಮತಿ ಕಮಲರವರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ರೂ 25,000 ಸಹಾಯಧನ

Suddi Udaya

ಅಳದಂಗಡಿ ಅಜಿಲ ಸೀಮೆಯ ತಿಮ್ಮಣ್ಣರಸರಾದ ಡಾ. ಪದ್ಮಪ್ರಸಾದ್ ಅಜಿಲರನ್ನು ಭೇಟಿಯಾದಸೆ.12ರಂದು ರಾಜ್ಯದಾದ್ಯಂತ ಬಿಡುಗಡೆಯಾಗಲಿರುವ ಕನ್ನಡ ಚಲನ ಚಿತ್ರ ರಾನಿ – RONNY‌ದ ನಿರ್ಮಾಪಕರಾದ ಉಮೇಶ್ ಹೆಗ್ಡೆ

Suddi Udaya
error: Content is protected !!