30.7 C
ಪುತ್ತೂರು, ಬೆಳ್ತಂಗಡಿ
May 17, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿವರದಿಶಾಲಾ ಕಾಲೇಜುಸಾಧಕರು

ಉಜಿರೆ: ಎಸ್‌ಡಿಎಂ ಆಂಗ್ಲ ಮಾಧ್ಯಮ (ಸಿ.ಬಿ.ಎಸ್‌.ಇ) ಶಾಲೆಯ ಹಳೆ ವಿದ್ಯಾರ್ಥಿನಿ ಡಾ| ಶಿವಾನಿ ಎಂ.ಡಿ ರವರಿಗೆ ಅಭಿನಂದನ ಕಾರ್ಯಕ್ರಮ

ಉಜಿರೆ: ಭಾರತೀಯ ಏಮ್ಸ್ (AIIMS) ಮೆಡಿಕಲ್‌ ಕಾಲೇಜುಗಳ ಸ್ನಾತಕೋತ್ತರ ಪದವಿ ಪ್ರವೇಶಕ್ಕಾಗಿ ನಡೆದ Institute of National Importance CET (INICET) ಪ್ರವೇಶ ಪರೀಕ್ಷೆಯಲ್ಲಿ AII Indian Rank (AIR)ನಲ್ಲಿ 191ನೇ ರ್‍ಯಾಂಕ್ ಪಡೆದಿರುವ ಶಾಲೆಯ ಹಳೆ ವಿದ್ಯಾರ್ಥಿನಿ ಡಾl ಶಿವಾನಿ ಎಂ.ಡಿ ಇವರಿಗೆ ಅಭಿನಂದನಾ ಕಾರ್ಯಕ್ರಮ ಜೂ3 ರಂದು ಎಸ್‌ಡಿಎಂ ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ಶಾಲೆಯಲ್ಲಿ ಆಯೋಜಿಸಲಾಗಿತ್ತು.

“ಪಠ್ಯದ ಜೊತೆಗೆ ಶಾಲೆಯ ಪ್ರತಿಯೊಂದು ಕ್ಷಣಗಳ ಪ್ರಯೋಜನವನ್ನು ಪಡೆಯಿರಿ” ಎಂದು ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿ ಕ್ಷೇಮಪಾಲನ ಅಧಿಕಾರಿ ಧನ್ಯಕುಮಾರ್ ಜೈನ್ ವಿದ್ಯಾರ್ಥಿಗಳನ್ನುದ್ದೇಶಿಸಿ ಹೇಳಿದರು.

ಕಾರ್ಯಕ್ರಮದಲ್ಲಿ ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಮನ್ಮೋಹನ್ ನಾಯ್ಕ್ ಕೆ.ಜಿ ಅಧ್ಯಕ್ಷತೆ ವಹಿಸಿದ್ದರು.

ಶಿಕ್ಷಕಿ ಶ್ರೀಮತಿ ನೀತು ಪ್ರಸಾದ್ ನಿರೂಪಿಸಿದ ಕಾರ್ಯಕ್ರಮದಲ್ಲಿ ಶಾಲಾ ಮುಖ್ಯೋಪಾಧ್ಯಾಯರಾದ ಮನ್ಮೋಹನ್ ನಾಯ್ಕ್ ಕೆ.ಜಿ ಸ್ವಾಗತಿಸಿದರು.

Related posts

ಕಡಿರುದ್ಯಾವರ : ಪಾದಚಾರಿಗೆ ಬೈಕ್ ಡಿಕ್ಕಿ: ಗಂಭೀರ ಗಾಯ

Suddi Udaya

ಶಿರ್ಲಾಲು ವಿ.ಹಿಂ.ಪ. ಆಶ್ರಯದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ 22ನೇ ವರ್ಷದ ಮೊಸರು ಕುಡಿಕೆ ಉತ್ಸವ

Suddi Udaya

ಕೂಟ ಮಹಾಜಗತ್ತು ಬೆಳ್ತಂಗಡಿ ಅಂಗಸಂಸ್ಥೆಯ ಮಹಾಸಭೆ

Suddi Udaya

ಅಳದಂಗಡಿ ಸ.ಪ.ಪೂ. ಕಾಲೇಜಿನಲ್ಲಿ ಪೋಕ್ಸೋ ಕಾಯ್ದೆ ಮತ್ತು ಬಾಲ್ಯ ವಿವಾಹ ಬಗ್ಗೆ ಕಾನೂನು ಅರಿವು ಕಾರ್ಯಕ್ರಮ

Suddi Udaya

ಉರುವಾಲು: ಕುಪ್ಪೆಟ್ಟಿ ರಸ್ತೆಯಲ್ಲಿ ಬೃಹತ್ ಹೊಂಡ: ಸ್ಥಳೀಯರಿಂದ ರಸ್ತೆಯ ಮಧ್ಯೆ ಕೆಂಪು ವಸ್ತ್ರವಿಟ್ಟು ಎಚ್ಚರಿಕೆಯ ಸೂಚನೆ

Suddi Udaya

ಅಪರೂಪದ ರಾಜಕಾರಣಿ ಮಾಜಿ ಶಾಸಕ ಕೆ. ವಸಂತ ಬಂಗೇರರ ನಿಧನಕ್ಕೆ ಸಂತಾಪ ಸೂಚಿಸಿದ ವಿಪಕ್ಷ ನಾಯಕ, ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ

Suddi Udaya
error: Content is protected !!