July 23, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಶಾಲಾ ಕಾಲೇಜುಶಿಕ್ಷಣ ಸಂಸ್ಥೆ

ಉಜಿರೆ: ಎಸ್.ಡಿ.ಎಂ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವತಿಯಿಂದ ಪರಿಸರ ದಿನಾಚರಣೆ

ಉಜಿರೆ: ಪರಿಸರದ ಕಾಳಜಿ ಅತಿ ಮುಖ್ಯ. ಪರಿಸರ ಚೆನ್ನಾಗಿದ್ದರೆ ಮಾತ್ರ ನಾವು ಆರೋಗ್ಯಯುತವಾಗಿ ಬದುಕಲು ಸಾಧ್ಯ. ಮಾನವನಿಗೆ ಪೂರಕವಾದ ಒಳ್ಳೆಯ ಪರಿಸರ ಇದ್ದಿದ್ದರೆ ಪರಿಸರ ದಿನದ ಕಾರ್ಯಕ್ರಮದ ಅಗತ್ಯತೆ ಇರುವುದಿಲ್ಲ. ಪರಿಸರದ ಬಗ್ಗೆ ಸರಿಯಾದ ಪ್ರಜ್ಞೆ ಮೂಡಿಸಲು ಇಂತಹ ಕಾರ್ಯಕ್ರಮ ಸಹಕಾರಿ ಎಂದು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಪ್ರಮೋದ್ ಕುಮಾರ್ ಹೇಳಿದರು.

ಇವರು ರಾಷ್ಟ್ರೀಯ ಸೇವಾ ಯೋಜನೆಯ ವತಿಯಿಂದ ಪರಿಸರ ದಿನಾಚರಣೆ ಕಾರ್ಯಕ್ರಮ ಹಾಗೂ ಪರಿಸರ ದಿನಾಚರಣೆ ಅಂಗವಾಗಿ ಬೆಳ್ತಂಗಡಿ ತಾಲೂಕಿನಾದ್ಯಂತ ಒಂದು ವಾರಗಳ ಗಿಡಗಳನ್ನು ನೆಟ್ಟು ಪೋಷಿಸುವ ಕಾರ್ಯಕ್ರಮವನ್ನು ಗಿಡ ನೆಡುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು. ಉಪ ಪ್ರಾಚಾರ್ಯ ಡಾ. ರಾಜೇಶ್ ಬಿ ಅವರು ಮುಖ್ಯ ಅಭ್ಯಾಗತರಾಗಿ ಭಾಗವಹಿಸಿ ಪರಿಸರ ಸಂರಕ್ಷಣೆ ಬಗ್ಗೆ ಮಾತನಾಡಿದರು.

ಹಾಗೆಯೇ ಸ್ವಯಂ ಸೇವಕರು ಸ್ಥಳೀಯ ಜಾಗಗಳ ಹಾಗೂ ಬಸ್ ನಿಲ್ದಾಣದ ಕಸಗಳನ್ನು ಸ್ವಚ್ಛಗೊಳಿಸಿ ಶುಚಿಗೊಳಿಸಿದರು.

ಯೋಜನಾಧಿಕಾರಿ ಡಾ.ಪ್ರಸನ್ನಕುಮಾರ ಐತಾಳ್ ಕಾರ್ಯಕ್ರಮ ನಿರ್ವಹಿಸಿದರು. ಸಹ ಯೋಜನಾಧಿಕಾರಿ ಶ್ರೀಮತಿ ಪದ್ಮಶ್ರೀ ರಕ್ಷಿತ್ ಅವರು ಸ್ವಯಂ ಸೇವಕರಿಗೆ ಮಾರ್ಗದರ್ಶನ ಮಾಡಿದರು. ಘಟಕದ ನಾಯಕ ಆದಿತ್ಯ.ವಿ.ಧನ್ಯವಾದ ಅರ್ಪಿಸಿದರು.

Related posts

ನ್ಯಾಯತರ್ಪು ಜಾರಿಗೆಬೈಲು ನಿವಾಸಿ ಕೆ.ಎಂ. ಅಬೂಬಕ್ಕರ್ ರವರ ಬ್ಯಾಂಕ್ ಖಾತೆಯಿಂದ ಅಪರಿಚಿತ ಇಬ್ಬರು ವ್ಯಕ್ತಿಗಳಿಂದ ಹಣ ಕಳವು

Suddi Udaya

ಜೆಸಿಐ ಕೊಕ್ಕಡ ಕಪಿಲ ಘಟಕದ ವತಿಯಿಂದ ವಿಶಿಷ್ಟ ಶ್ರೇಣಿಯಲ್ಲಿ ಅಂಕಗಳನ್ನು ಪಡೆದಿರುವ ಕುಮಾರಿ ಮಾನಸರಿಗೆ ಸನ್ಮಾನ

Suddi Udaya

ಎಸ್ ಡಿ ಎಮ್ ಬೆಳ್ತಂಗಡಿ ಶಾಲೆಗೆ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಸಂಘಟನಾ ಆಯುಕ್ತರ ಭೇಟಿ

Suddi Udaya

ಬೆಳಾಲು ಅಯ್ಯಪ್ಪ ಭಕ್ತ ವೃಂದ ಸಮಿತಿ ರಚನೆ: ಅಧ್ಯಕ್ಷರಾಗಿ ಶ್ರೀನಿವಾಸ್ ಗೌಡ, ಕಾರ್ಯದರ್ಶಿಯಾಗಿ ಶಶಿಧರ್ ಆಚಾರ್ಯ ಆಯ್ಕೆ

Suddi Udaya

ನಾಳ ಅಂಗನವಾಡಿ ಕೇಂದ್ರದಲ್ಲಿ ಸಂಭ್ರಮದ ಸ್ವಾತಂತ್ರ್ಯ

Suddi Udaya

ವೇಣೂರು ಗ್ರಾ.ಪಂ. ಹಾಗೂ ಮೂಡುಕೋಡಿಯ ಶೌರ್ಯ ವಿಪತ್ತು ನಿರ್ವಹಣಾ ತಂಡದಿಂದ ಸ್ವಚ್ಛತಾ ಕಾರ್ಯ

Suddi Udaya
error: Content is protected !!