September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಕನ್ಯಾಡಿ-1 ಸರಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ

ಕನ್ಯಾಡಿ-1: ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ, ಮಂಗಳೂರು ಸಾಮಾಜಿಕ ಅರಣ್ಯ ವಿಭಾಗ, ಬೆಳ್ತಂಗಡಿಯ ಇವರ ವತಿಯಿಂದ ಸರಕಾರಿ ಉನ್ನತೀಕರಿಸಿದ ಪ್ರಾಥಮಿಕ ಶಾಲೆಯಲ್ಲಿ ಸುಮಾರು 15 ಬಗೆಯ ಹಣ್ಣಿನ ಗಿಡಗಳನ್ನು ಶಾಲೆಯ ಆವರಣದಲ್ಲಿ ನೆಡಲಾಯಿತು.


ಸಾಮಾಜಿಕ ಅರಣ್ಯ ಬೆಳ್ತಂಗಡಿ ಇದರ ಉಪ ವಲಯ ಅರಣ್ಯ ಅಧಿಕಾರಿಗಳಾದ ಅಶೋಕ್ ಮಕ್ಕಳಿಗೆ ಅರಣ್ಯಗಳನ್ನು ಬೆಳೆಸುವುದರಿಂದ ಆಗುವ ಉಪಯೋಗಗಳನ್ನು ತಿಳಿಸಿಕೊಟ್ಟರು. ಶೇಖರ್ ಅರಣ್ಯ ವೀಕ್ಷಕರು, ನಡ ಹಾಗೂ ಅರಣ್ಯ ಸಿಬ್ಬಂದಿಯವರಾದ ದೀಕ್ಷಿತ್ ರವರು ಸಹಕರಿಸಿದರು.


ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷ ನೋಣಯ್ಯ ಗೌಡ ಇವರು ಉಪಸ್ಥಿತರಿದ್ದು ಎಲ್ಲಾ ಮಕ್ಕಳಿಗೆ ಸಿಹಿ ತಿಂಡಿಯನ್ನು ವಿತರಿಸಿದರು. ಎಸ್ ಡಿ.ಎಂ ಸಿ ಸದಸ್ಯ ರಘುಚಂದ್ರ ಶೆಟ್ಟಿ, ಮುಖ್ಯೋಪಾಧ್ಯಾಯರಾದ‌ ಹನುಮಂತರಾಯ, ಶಿಕ್ಷಕ ವಿಕಾಸ್ ಕುಮಾರ್ ವೈ, ಶಿಕ್ಷಕಿಯರಾದ ಶ್ರೀದೇವಿ, ಪ್ರಮೀಳಾ, ಹರಿತಾ ಉಪಸ್ಥಿತರಿದ್ದರು.

Related posts

ಬೆಳ್ತಂಗಡಿ: ಶ್ರೀ ರಾಘವೇಂದ್ರ ಸೇವಾ ಪ್ರತಿಷ್ಠಾನದಿಂದ 354 ನೇ ಶ್ರೀ ಗುರುರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವ

Suddi Udaya

ಕೆನರಾ ಬ್ಯಾಂಕಿನಿಂದ ದ.ಕ ಹಾಲು ಒಕ್ಕೂಟಕ್ಕೆ ದ್ರುವಸಾರಜನಕ ಜಾಡಿ ಕೊಡುಗೆ

Suddi Udaya

ಪಂಜಾಬ್ ನಲ್ಲಿ ಅಕಾಂಕ್ಷ ಆತ್ಮಹತ್ಯೆ ಪ್ರಕರಣ: ಧರ್ಮಸ್ಥಳದ ಬೋಳಿಯಾರು ಮನೆಗೆ ತಲುಪಿದ ಮೃತದೇಹ

Suddi Udaya

ಬಿಜೆಪಿ ಅಭ್ಯರ್ಥಿ ಹರೀಶ್ ಪೂಂಜರವರು ಮತದಾನ ಕೇಂದ್ರಗಳಿಗೆ ಭೇಟಿ

Suddi Udaya

ಓಡಿಲ್ನಾಳ ಮೈರಲ್ಕೆ ಶ್ರೀ ರಾಮನಗರ ಸಾರ್ವಜನಿಕ ಶಾರದೋತ್ಸವ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಎ.25: ಮರೋಡಿ ದೇವಸ್ಥಾನದಲ್ಲಿ ಚಂಡಿಕಾಯಾಗ, ಮೃತ್ಯುಂಜಯ ಹೋಮ

Suddi Udaya
error: Content is protected !!