22.2 C
ಪುತ್ತೂರು, ಬೆಳ್ತಂಗಡಿ
November 24, 2024
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಮಂಜೊಟ್ಟಿ ಸ್ಟಾರ್ ಲೈನ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ” ವಿದ್ಯಾರ್ಥಿ ಸಂಘದ ಚುನಾವಣೆ “

ನಡ: ಸ್ಟಾರ್ ಲೈನ್ ಆಂಗ್ಲ ಮಾಧ್ಯಮ ಶಾಲೆ ರಝಾ ಗಾರ್ಡನ್ ಮಂಜೊಟ್ಟಿ ಇಲ್ಲಿ 2024_25 ನೇ ಸಾಲಿನ ವಿದ್ಯಾರ್ಥಿ ಸಂಘದ ಚುನಾವಣೆಯನ್ನು ಸಾರ್ವತ್ರಿಕ ಚುನಾವಣೆಯ ಮಾದರಿಯಲ್ಲಿ ನಡೆಸಲಾಯಿತು. ವಿದ್ಯಾರ್ಥಿಗಳಿಗೆ ಚುನಾವಣೆಯ ಮಹತ್ವ ಮತ್ತು ಅರಿವು ಮೂಡಿಸುವ ನಿಟ್ಟಿನಲ್ಲಿ ಈ ಚುನಾವಣೆಯು ಮಹತ್ವದ ಪಾತ್ರ ವಹಿಸಿತ್ತು.

ಶಾಲಾ ಆಡಳಿತ ಟ್ರಸ್ಟಿನ ಸಂಚಾಲಕ ಜನಾಬ್ ಸೈಯ್ಯದ್ ಹಬೀಬ್, ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಜಾಕಿನ್ ಬಿನ್ ಮತ್ತು ಶಾಲಾ ಶಿಕ್ಷಕ ಸಮೂಹ ಮತದಾನ ಮಾಡುವುದರ ಮೂಲಕ ಚುನಾವಣಾ ಪ್ರಕ್ರಿಯೆ ಪ್ರಾರಂಭವಾಯಿತು. ಚುನಾವಣೆಯ ಫಲಿತಾಂಶವಾಗಿ ಮೊಹಮ್ಮದ್ ಶಮ್ಮಾಝ್ 2024_25 ನೇ ಸಾಲಿನ ವಿದ್ಯಾರ್ಥಿ ಸಂಘದ ನಾಯಕನಾಗಿ ಆಯ್ಕೆಯಾದರು. ವಿದ್ಯಾರ್ಥಿ ಸಂಘದ ವಿವಿಧ ಘಟಕಗಳಿಗೆ ನಡೆದ ಚುನಾವಣೆಯಲ್ಲಿ ಶಾಲಾ ಉಪನಾಯಕನಾಗಿ ಝಿಶಾನ್, ಶಿಸ್ತು ಮಂತ್ರಿಯಾಗಿ ತಮೀಝ್ ಉಪನಾಯಕಿಯಾಗಿ ಹಿಫ್ಸಾ ಬೇಗಂ, ಕ್ರೀಡಾ ಮಂತ್ರಿಯಾಗಿ ಹಫೀಜ್, ಉಪನಾಯಕಿಯಾಗಿ ಅಶ್ಫಿಯ, ಆರೋಗ್ಯಮಂತ್ರಿಯಾಗಿ ರಫಾ ಆಸಿಯ, ಉಪನಾಯಕನಾಗಿ ನಫೀಝ್, ಸ್ವಚ್ಛತಾ ಮಂತ್ರಿಯಾಗಿ ಸುಹೈಬ್, ಉಪನಾಯಕನಾಗಿ ಜೆಸ್ವಿನ್ ಜೇಮ್ಸ್, ಗ್ರಂಥಾಲಯದ ಮಂತ್ರಿಯಾಗಿ ರಫಾಝ್, ಉಪನಾಯಕಿಯಾಗಿ ಫಾತಿಮತ್ ಫಾಯಿಝ, ಸಾಂಸ್ಕೃತಿಕ ಮಂತ್ರಿಯಾಗಿ ಶೇಖ್ ಶಿಹಾಬುದ್ದೀನ್, ಉಪನಾಯಕನಾಗಿ ಶಾಖಿಬುಲ್ ಹಸನ್, ಶಿಕ್ಷಣ ಮಂತ್ರಿಯಾಗಿ ಮ!ಜಾಹಫರ್, ನಾಯಕಿಯಾಗಿ ಖದೀಜತ್ ರಂಝಿಯಾ ಆಯ್ಕೆಯಾದರು. ಹಾಗೂ ವಿದ್ಯಾರ್ಥಿ ಸಂಘದ ಪದಗ್ರಹಣ ಕಾರ್ಯಕ್ರಮವು ಬಹಳ ಅರ್ಥಪೂರ್ಣವಾಗಿ ನೆರವೇರಿತು.

Related posts

ಕೊಕ್ಕಡ: ಬೈಕ್‌ಗಳ ಮುಖಾಮುಖಿ ಡಿಕ್ಕಿ: ಮೂವರಿಗೆ ಗಾಯ

Suddi Udaya

ಅ.20 ರಂದು ಧರ್ಮಸ್ಥಳದಲ್ಲಿ ಸ್ನೇಹ ಕೂಟ

Suddi Udaya

ಉಜಿರೆ ಎಸ್.ಡಿ.ಎಂ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ಧಾರವಾಡ ಎಸ್.ಡಿ.ಎಂ ಯೂನಿರ್ವಸಿಟಿ ರಿಜಿಸ್ಟ್ರಾರ್ ಭೇಟಿ

Suddi Udaya

ಕರಾಟೆ ಪಂದ್ಯಾಟ: ಉಜಿರೆಯ ಮೋಹನ್ ರಿಗೆ ಕುಮಿತೆ ಹಾಗೂ ಕಟಾ ವಿಭಾಗದಲ್ಲಿ ಚಿನ್ನದ ಪದಕ

Suddi Udaya

ಬೆಳ್ತಂಗಡಿ: ಶಾಲೆಗಳಲ್ಲಿ ಹಿಂದೂ ಹಬ್ಬಗಳ ಆಚರಣೆಗೆ ರಾಜ್ಯ ಸರ್ಕಾರ ನಿರ್ಬಂಧ ಖಂಡಿಸಿ ಬಿಜೆಪಿ ಯುವ ಮೋರ್ಚಾ ಬೆಳ್ತಂಗಡಿ ಮಂಡಲ ವತಿಯಿಂದ ಬೃಹತ್ ಪ್ರತಿಭಟನೆ

Suddi Udaya

ಉಜಿರೆ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ (ಸಿ.ಬಿ.ಎಸ್.ಇ) ಶಾಲೆಯಲ್ಲಿ ಸಂಸ್ಕೃತೋತ್ಸವ

Suddi Udaya
error: Content is protected !!