ಬೆಳ್ತಂಗಡಿ: ಕರ್ನಾಟಕ ರಾಜ್ಯದ ವೃತ್ತಿಪರ ಸಿವಿಲ್ ಎಂಜಿನಿಯರುಗಳ ಪರಿಷತ್ತಿನ ಚೊಚ್ಚಲ ಸಮಿತಿಗೆ ಅಸೋಸಿಯೇಟ್ ಕನ್ಸ್ಲಟಿಂಗ್ ಸಿವಿಲ್ ಇಂಜಿನಿಯರ್ ಬೆಳ್ತಂಗಡಿ ತಾಲೂಕು ಸೆಂಟರ್ ಪ್ರಸ್ತುತ ಅಧ್ಯಕ್ಷ, ಸ್ಥಾಪಕಾದ್ಯಕ್ಷ ಇಂಜಿನಿಯರ್ ಜಗದೀಶ ಪ್ರಸಾದ್ ರವರು ರಾಜ್ಯ ಮಟ್ಟದ ಅತ್ಯುನ್ನತ ಸ್ಥಾನಮಾನವನ್ನು ಪಡೆದಿದ್ದಾರೆ.
ಕರ್ನಾಟಕ ವೃತ್ತಿ ಪರ ಸಿವಿಲ್ ಇಂಜಿನೀಯರುಗಳ ಪರಿಷತ್ತು ಇನ್ನು ಮುಂದೆ ಕಾರ್ಯಾಚರಣೆ ಮಾಡಲಿದ್ದು, ಇದರ ಕೇಂದ್ರ ಕಚೇರಿ ಬೆಂಗಳೂರಿನಲ್ಲಿ ಕಾರ್ಯನಿರ್ವಹಿಸುತ್ತಿದೆ. ಈ ಪರಿಷತ್ತು 18 ಸದಸ್ಯರ ಸಮಿತಿ ಹೊಂದಿದ್ದು, ಇದರಲ್ಲಿ 8 ಜನ ಸರಕಾರದಿಂದ ಆಯ್ದ ಸಿವಿಲ್ ಎಂಜಿನಿಯರ್ ಕ್ಷೇತ್ರದಿಂದ ನಾಮನಿರ್ದೇಶನ ಆಗಲಿದ್ದಾರೆ. ಉಳಿದ 10 ಜನ ಸದಸ್ಯರು ವೃತ್ತಿ ನಿರತ ಸಿವಿಲ್ ಎಂಜಿನಿಯರ್ ಗಳು ಆಯ್ಕೆ ಆಗಲಿದ್ದಾರೆ. ಇದರಲ್ಲಿ 4 ಜನ ಬೆಂಗಳೂರು ಕೇಂದ್ರದಿಂದ, ಉಳಿದ 6 ಜನ ಕಲಬುರ್ಗಿ, ಬೆಳಗಾವಿ ಮತ್ತು ಮಂಗಳೂರು ಕೇಂದ್ರದಿಂದ ತಲಾ 2 ಜನ ಆಯ್ಕೆ ಆಗಲಿದ್ದಾರೆ. ಅಧಿಕಾರದ ಅವಧಿ ಮೂರು ವರ್ಷ ಇರಲಿದೆ.
ಚೊಚ್ಚಲ ಕರ್ನಾಟಕ ವೃತ್ತಿ ಪರ ಸಿವಿಲ್ ಇಂಜಿನಿಯರುಗಳ ಪರಿಷತ್ತು ನಲ್ಲಿ ಮಂಗಳೂರು ವಿಭಾಗದಿಂದ ಇಂಜಿನಿಯರ್ ಜಗದೀಶ್ ಪ್ರಸಾದ್ ಇವರು ಸರ್ವಾನುಮತದಿಂದ ಆಯ್ಕೆ ಆಗಿದ್ದಾರೆ.
ಇವರು ವೃತ್ತಿಯಲ್ಲಿ ಸಿವಿಲ್ ಇಂಜಿನಿಯರ್, ನ್ಯಾಷನಲ್ ಬ್ಯಾಂಕ್ ಗಳ ವ್ಯಾಲ್ಯೂವರ್ ಆದರೂ ಕೃಷಿ ಕ್ಷೇತ್ರದಲ್ಲಿ ತನ್ನ ಛಾಪನ್ನು ಮೂಡಿಸಿರುವ, ಹಲವು ಸಮಾಜ ಮುಖಿ ಕಾರ್ಯಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿದ್ದಾರೆ .