32.6 C
ಪುತ್ತೂರು, ಬೆಳ್ತಂಗಡಿ
November 24, 2024
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ವೇಣೂರು ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ದಾರ ಕಾಮಗಾರಿಗೆ ರೂ.91ಲಕ್ಷ ಕೊರತೆ : ಶಾಸಕ ಹರೀಶ್ ಪೂಂಜರವರು ರೂ.1 ಕೋಟಿ 5 ಲಕ್ಷ ಅನುದಾನ ನೀಡಿದ್ದು ದೇಗುಲದ ಅಭಿವೃದ್ಧಿಗೆ ಬಳಕೆಯಾಗಿದೆ: ದೇವಾಲಯ ಸಂಪೂರ್ಣ ಋಣ ಮುಕ್ತವಾಗಬೇಕು : ಪುರುಷೋತ್ತಮ ರಾವ್

ವೇಣೂರು: ವೇಣೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ದಾರ ಕಾಮಗಾರಿಯಲ್ಲಿ ಹಣಕಾಸಿನ ಕೊರತೆಯಾಗಿದ್ದು ದೇವಾಲಯ ಸಂಪೂರ್ಣ ಋಣ ಮುಕ್ತವಾಗಬೇಕು ಎಂದು ಪುರುಷೋತ್ತಮ ರಾವ್ ಹೇಳಿದರು.ಅವರು ಜೂ.13ರಂದು ಗುರುವಾಯನಕೆರೆ ನವಶಕ್ತಿ ಸಭಾಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ವೇಣೂರು ಮಹಾಲಿಂಗೇಶ್ವರ ದೇವಸ್ಥಾನದ ಬ್ರಹ್ಮಕಲಶವು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ರವರ ಅಧ್ಯಕ್ಷತೆಯಲ್ಲಿ 2023ರ ಫೆ.19ರಿಂದ 27 ರವರೆಗೆ ಬಹಳ ವಿಜೃಂಭಣೆಯಿಂದ ಜರಗಿರುತ್ತದೆ. ಸರಕಾರದಿಂದ ಶಾಸಕ ಹರೀಶ್ ಪೂಂಜರವರು 1 ಕೋಟಿ 5 ಲಕ್ಷ ರೂ ಅನುದಾನ ಬಿಡುಗಡೆಗೊಳಿಸಿ ದೇವಾಲಯದ ಜೀರ್ಣೋದ್ಧಾರ ಕೆಲಸಗಳಿಗೆ ಬಳಕೆ ಮಾಡಲಾಗಿದೆ ಹಾಗೂ ಇನ್ನುಳಿದ ಜೀರ್ಣೋದ್ದಾರದ ಕೆಲಸಗಳಿಗೆ ನಾನು ರೂ 35 ಲಕ್ಷ ಹಾಗೂ ಪ್ರಶಾಂತ ಹೆಗ್ಡೆ ಕುಂಟಲ್ಮಾರ್ 19 ಲಕ್ಷ ಬ್ಯಾಂಕ್ ನಿಂದ ವೈಯಕ್ತಿಕ ಸಾಲ ಪಡೆದು ಜೀರ್ಣೋದ್ದಾರ ಸಮಿತಿಯ ಖಾತೆಗೆ ಜಮಾಗೊಳಿಸಿ ಕಾಮಗಾರಿ ಮುಂದುವರಿಸಿದೆವು.ಕಾಮಗಾರಿ ಮುಕ್ತಾಯಕ್ಕೆ ಪೂರಕವಾಗಿ ಮಾಡಿಕೊಂಡ ಸಾಲಗಳ ಪೈಕಿ ಪ್ರಶಾಂತ ಹೆಗ್ಡೆ ಯವರ ರೂ.19 ಲಕ್ಷಗಳನ್ನು ಸಮಿತಿಯಿಂದ ಹಿಂಪಾವತಿಸಲಾಗಿಯಿತು.2014 ರಿಂದ ಈವರೆಗೆ ಆದ ಕಾಮಗಾರಿಗಳಿಗೆ ರೂಪಾಯಿ 6.65 ಕೋಟಿ ಗಳಷ್ಟು ದೇಣಿಗೆ ಸಂಗ್ರಹವಾಗಿ 7.56 ಕೋಟಿ ಖರ್ಚಾಗಿದ್ದು, ಸುಮಾರು 91 ಲಕ್ಷದ ಕೊರತೆ ಆಗಿರುತ್ತದೆ. ವೈಯಕ್ತಿಕ ಸಾಲಗಳ ಮರು ಪಾವತಿಗೆ ಹಾಗೂ ಕಾಮಗಾರಿ ಮಾಡಿದವರಿಗೆ ಪಾವತಿ ಮಾಡುವಲ್ಲಿ ಈಗಾಗಲೇ ಬಹಳ ವಿಳಂಬ ಆಗಿರುತ್ತದೆ.ದೇವಾಲಯ ಸಂಪೂರ್ಣ ಋಣ ಮುಕ್ತವಾಬೇಕು ಈ ನಿಟ್ಟಿನಲ್ಲಿ ಭಕ್ತಾದಿಗಳೆಲ್ಲರೂ ಕೈಲಾದಷ್ಟು ಧನಸಹಾಯವನ್ನು ದೇವಾಲಯಕ್ಕೆ ನೀಡಬೇಕು. ದೇವಾಲಯದ ಆಡಳಿತಾಧಿಕಾರಿಗಳೂ ಅಥವಾ ಮುಂದಿನ ವ್ಯವಸ್ಥಾಪನ ಸಮಿತಿಯವರು ಹಣ ಆದಷ್ಟು ಕ್ರೋಢೀಕರಿಸಿ, ದೇವಾಲಯ ಋಣಮುಕ್ತಗೊಳ್ಳುವವರೆಗೆ ಹೊಸ ಯೋಜನೆಗಳನ್ನು ಮುಂದೂಡಿ ಸಹಕರಿಸಬೇಕಾಗಿ ವಿನಂತಿಸಿಕೊಂಡರು. ಜೀರ್ಣೋದ್ದಾರ ಸಮಿತಿಯ ಕಾರ್ಯಾಧ್ಯಕ್ಷ ಸುಂದರ ಹೆಗ್ಡೆ ಮಾತನಾಡಿ ಸಂಗ್ರಹ ಆದ ಮೊತ್ತ ವನ್ನು ಬ್ಯಾಂಕ್‌ ಸಾಲಕ್ಕೆ ಕಂತು ಪಾವತಿಸಲು ಮಾರ್ಚ್ ತಿಂಗಳ ಕೊನೆಗೆ ಕಚೇರಿಯಿಂದ ಚೆಕ್ ಪುಸ್ತಕ ಪಡೆಯಲು ಹೋದಾಗ ಆಡಳಿತಾಧಿಕಾರಿ ಚೆಕ್ ಪುಸ್ತಕ ನೀಡಲು ನಿರಾಕರಿಸಿರುವುದರಿಂದ ಕಂತು ಭರಿಸಲು ಉಳಿದಿದೆ. ಮುಂದೆ ಹೆಚ್ಚುವರಿ ಬಡ್ಡಿಯನ್ನು ಭರಿಸ ಬೇಕಾಗುತ್ತದೆ ಎಂದರು.ಪತ್ರಿಕಾಗೋಷ್ಠಿಯಲ್ಲಿ ವ್ಯವಸ್ಥಾಪನ ಸಮಿತಿ ಮಾಜಿ ಅಧ್ಯಕ್ಷ ಪುರುಷೋತ್ತಮ ರಾವ್, ಗ್ರಾಮ ಸಮಿತಿ ಸಂಚಾಲಕ ಉಮೇಶ್ ,ಜೀರ್ಣೋದ್ಧಾರ ಸಮಿತಿಯ ಕಾರ್ಯದರ್ಶಿ ಸುಂದರ ಹೆಗ್ಡೆ , ಸದಸ್ಯರಾದ ಪ್ರಶಾಂತ್ ಹೆಗ್ಡೆ , ಚಂಪಾ, ಯಶೋಧ, ಅಣ್ಣು ಮೂಲ್ಯ, ಕಾರ್ತೀಕ್ ನಿಟ್ಟಡೆ , ಸತೀಶ್ ಕೆರಿಯಾರ್ ಉಪಸ್ಥಿತರಿದ್ದರು.

Related posts

ಗುರುವಾಯನಕೆರೆ: ಎಕ್ಸೆಲ್ ನಲ್ಲಿ ಚುನಾವಣಾ ಅರಿವು ಸ್ಪರ್ಧೆಗಳ ಉದ್ಘಾಟನೆ

Suddi Udaya

ಮುಂಡಾಜೆ: ನಿರಂತರ ಮಳೆಯಿಂದಾಗಿ ಮುಂಡ್ರುಪ್ಪಾಡಿ ಪರಿಸರದಲ್ಲಿ ತೋಟಕ್ಕೆ ನುಗ್ಗಿದ್ದ ನೀರು: ಅಪಾರ ಹಾನಿ

Suddi Udaya

ಗುರುವಾಯನಕೆರೆ: ಶಕ್ತಿನಗರ ನಿವಾಸಿ ರಮೇಶ ಶೆಟ್ಟಿ ಹೃದಯಾಘಾತದಿಂದ ನಿಧನ

Suddi Udaya

ಕೊಲ್ಲಿ ಶ್ರೀ ದುರ್ಗಾ ದೇವಿ ದೇವಸ್ಥಾನ ದಲ್ಲಿ ವರಮಹಾಲಕ್ಷ್ಮಿ ಪೂಜೆ

Suddi Udaya

ಕುವೆಟ್ಟು :ಶ್ರೀ ಗುರುನಾರಾಯಣ‌ ಸ್ವಾಮಿ ಸೇವಾ‌ ಸಂಘ ಯುವ ಬಿಲ್ಲವ ವೇದಿಕೆ, ಮಹಿಳಾ ಬಿಲ್ಲವ ವೇದಿಕೆ, ಕುವೆಟ್ಟು ಗ್ರಾಮ ಸಮಿತಿಯಿಂದ  ಗುರು ಪೂಜೆ ಹಾಗೂ ಸಾರ್ವಜನಿಕ ಶನೈಶ್ಚರ ಪೂಜೆ

Suddi Udaya

ಬೆದ್ರಬೆಟ್ಟು: ಜಲ್ಸತುಲ್ ಜಮೀಲ್ ಮಿಲಾದ್ 2024 ಪ್ರತಿಭಾ ಕಾರ್ಯಕ್ರಮ

Suddi Udaya
error: Content is protected !!