ಬಿಜೆಪಿ ಕಾರ್ಯಕರ್ತರ ಮೇಲೆ ನಡೆಯುತ್ತಿರುವ ದೌರ್ಜನ್ಯ, ಬೆಲೆ ಏರಿಕೆಯನ್ನು ವಿರೋಧಿಸಿ ಬೃಹತ್ ಪ್ರತಿಭಟನೆ: ಮಲ್ಲೇಶ್ವರದಿಂದ ಬಂದ ಪುಡಾರಿಯಿಂದ ದ್ವೇಷದ ರಾಜಕಾರಣ: ಹರೀಶ್ ಪೂಂಜ ಆರೋಪ

Suddi Udaya

ಬೆಳ್ತಂಗಡಿ: ಬೆಳ್ತಂಗಡಿಯಲ್ಲಿ ದ್ವೇಷದ ರಾಜಕಾರಣ ಇರಲಿಲ್ಲ, ವಸಂತ ಬಂಗೇರ ಶಾಸಕರಾಗಿದ್ದವರು ಅವರು ಯಾವತ್ತು ದ್ವೇಷದ ರಾಜಕಾರಣ ಮಾಡಿದವರಲ್ಲ, ಕಳೆದ ಒಂದು ವರ್ಷದಿಂದ ನಮ್ಮ ತಾಲೂಕಿನಲ್ಲಿ ನಡೆಯತಕ್ಕಂತಹ ದ್ವೇಷದ ರಾಜಕಾರಣ, ರಾಜ್ಯದ ಯಾವುದೇ ಕ್ಷೇತ್ರದಲ್ಲಿ ನಡೆದಿಲ್ಲ, ಮಲ್ಲೇಶ್ವರದಿಂದ ಆಗಮಿಸಿರತಕ್ಕಂತಹ ರೌಡಿ ಪುಡಾರಿಯಿಂದಲೇ ಈ ರೀತಿ ದ್ವೇಷದ ರಾಜಕಾರಣ ನಡೆಯುತ್ತಿದೆ ಎಂದು ಶಾಸಕ ಹರೀಶ್ ಪೂಂಜ ಆರೋಪಿಸಿದರು.


ಅವರು ಜೂ.18ರಂದು ಭಾಜಪ ಮಂಡಲದ ವತಿಯಿಂದ ನಡೆದ ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡಿ, ದೇವರು ನಮ್ಮ ಜೊತೆ ಇದ್ದಾರೆ ಆ ಕಾರಣದಿಂದ ಶಶಿರಾಜ್‌ಗೆ, ಪ್ರಮೋದ್‌ಗೆ ನ್ಯಾಯಾಲಯ ಜಾಮೀನು ಕೊಡುತ್ತದೆ. ವಿನಃ ಕಾರಣ ರಾಜೇಶ್ ದ್ವೇಷದ ರಾಜಕಾರಣಗೋಸ್ಕರ ಲೈಂಗಿಕ ದೌರ್ಜನ್ಯ ಹೆಸರಿನಲ್ಲಿ ಯಾವುದೋ ಬೆಂಗಳೂರಿನ ಪುಡಿ ರೌಡಿ ಹೇಳಿದ ಎಂದು ಮಗಳನ್ನು ಆಸ್ಪತ್ರೆಯಲ್ಲಿ ಮಲಗಿಸಿ, ಇವತ್ತು ಪೋಕ್ಸೋ ಕೇಸು ಹಾಕುವಂತಹ ಕೆಲಸ ಮಾಡಿದ್ದಾರೆ ಇದನ್ನು ದೇವರು ಮೆಚ್ಚುವುದಿಲ್ಲ, ನ್ಯಾಯಾಲಯವು ಸಹ ಐದು ದಿವಸದಲ್ಲಿ ರಾಜೇಶ್ ಮಲೆಕುಡಿಯರಿಗೆ ಜಾಮೀನು ಮಂಜೂರು ಮಾಡಿದೆ. ಈ ರೀತಿಯ ದ್ವೇಷದ ರಾಜಕಾರಣ ಮಾಡಬೇಡಿ, ಸತ್ಯ, ಧರ್ಮದ ಮಣ್ಣು ಅಧರ್ಮದಿಂದ ನಡೆಯುವವರನ್ನು ದೈವ, ದೇವರೇ ಸಂವಾಹ ಮಾಡುತ್ತಾರೆ ಎಂದು ಎಚ್ಚರಿಕೆ ನೀಡಿದರು.


ಬಿಜೆಪಿ ಬೆಳ್ತಂಗಡಿ ಕ್ಷೇತ್ರದ ಪ್ರಭಾರಿ ಹರಿಕೃಷ್ಣ ಬಂಟ್ವಾಳ್ ಮಾತನಾಡಿ, ಬಿಜೆಪಿ ಕಾರ್ಯಕರ್ತರ ಮೇಲೆ ನಿರಂತರ ದೌರ್ಜನ್ಯವಾಗುತ್ತಿದೆ. ಮೊನ್ನೆ ಬೊಳಿಯಾರ್‌ನಲ್ಲಿ ಇಬ್ಬರು ಜೈಭಾರತ ಮಾತಕಿ ಜೈ ಎಂದವರಿಗೆ ಚೂರಿ ಹಾಕಿದ್ದಾರೆ. ಅದರ ಮುಖ್ಯ ಅಪರಾಧಿಯನ್ನು ಪೊಲೀಸರಿಗೆ ಬಂಧನ ಮಾಡಲು ಸಾಧವಾಗಿಲ್ಲ, ನಮ್ಮ ಇಬ್ಬರು ಹುಡುಗರ ಮೇಲೆ ಕೇಸು ಹಾಕಿ ಜೈಲಿಗೆ ಹಾಕಿದರು. ಅವರಿಗೆ ಜಾಮೀನು ಸಿಕ್ಕಿದೆ. ಇದು ಹರೀಶ್‌ಪೂಂಜರ ಹೋರಾಟಕ್ಕೆ ಸಿಕ್ಕಿದ ಜಯ, ಧರ್ಮ ಗೆದ್ದಿದೆ. ನ್ಯಾಯ ಗೆದ್ದಿದೆ ಎಂದು ಹೇಳಿದರು.
ನಮಗೆ ಪೊಲೀಸರ ಮೇಲೆ ಯಾವುದೇ ದ್ವೇಷ ಇಲ್ಲ, ಸರಕಾರ ಕಾಂಗ್ರೆಸ್ ನಿಮ್ಮನ್ನು ಮುಂದೆ ಕಳುಹಿಸುತ್ತಿದೆ. ಅದರೆ ನೆನಪಿಟ್ಟುಕೊಳ್ಳಿ ಸಿದ್ದರಾಮಯ್ಯನವರೇ ನಿಮಗೆ ಜನರು ಅಧಿಕಾರದ ಕೋಲು ಕೊಟ್ಟಿದ್ದಾರೆ. ನೀವು ಬೆಲೆ ಏರಿಕೆ ಮೂಲಕ ಅದೇ ಕೋಲಿನಿಂದ ಜನರಿಗೆ ಹೊಡೆಯುವ ಕೆಲಸ ಮಾಡುತ್ತಿದ್ದೀರಿ, ನೀವು ನೆನಪಿಟ್ಟುಕೊಳ್ಳಿ, ವಂದೇ ಮಾತರಂ ಹೇಳುವಾಗ ನಿಮಗೆ ಯಾಕೆ ಬಿಸಿಯಾಗುವುದು, ಕರ್ನಾಟಕದಲ್ಲಿ ಹಿಂದು, ಮುಸ್ಲಿಂ, ಕ್ರೈಸ್ತರು ಎಲ್ಲರನ್ನು ಪ್ರೀತಿ ಮಾಡಿ, ನೀವು ಮುಸ್ಲಿಂರನ್ನು ಪ್ರೀತಿ ಮಾಡಿ, ಆದರೆ ಪಾಕಿಸ್ತಾನ ಜಿಂದಾಬಾದ್ ಹೇಳುವ ಮುಸಲ್ಮಾನರಿಗೆ ಬಿಜೆಪಿ ಯಾವತ್ತು ಗೌರವ ಕೊಡುವುದಿಲ್ಲ, ಭಾರತ್‌ಮಾತಕೀ ಜೈ ಎನುನವ ಮುಸ್ಮಲರಿಗೆ ನಾವು ಗೌರವ ಕೊಡುತ್ತೇವೆ ಎಂದು ಹೇಳಿದರು.


ಬೆಳ್ತಂಗಡಿ ಅಯ್ಯಪ್ಪ ಗುಡಿಯಿಂದ ಆಡಳಿತ ಸೌಧದವರೆಗೆ ಕಾರ್ಯಕರ್ತರು ಕಾಂಗ್ರೆಸ್ ಸರಕಾರದ ಆಡಳಿತದ ವಿರುದ್ಧ ಘೋಷಣೆಗಳನ್ನು ಕೂಗಿ, ಪೆಟ್ರೋಲ್, ಡೀಸಿಲ್ ಬೆಲೆ ಏರಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಮಂಡಲ ಅಧ್ಯಕ್ಷ ಶ್ರೀನಿವಾಸ ರಾವ್ ಸ್ವಾಗತಿಸಿದರು. ವಿಜಯ ಗೌಡ ವೇಣೂರು ಕಾರ್ಯಕ್ರಮ ನಿರೂಪಿಸಿ, ಮಂಡಲ ಪ್ರಧಾನ ಕಾರ್ಯದರ್ಶಿ ಜಯಾನಂದ ಗೌಡ ವಂದಿಸಿದರು. ಪ್ರತಿಭಟನೆಯಲ್ಲಿ ಹಿರಿಯರಾದ ಕುಶಾಲಪ್ಪ ಗೌಡ ಪೂವಾಜೆ, ಪ್ರಸಾದ್ ಕುಮಾರ್, ಜಯಂತ್ ಕೋಟ್ಯಾನ್ ಜಿಲ್ಲಾ ಉಪಾಧ್ಯಕ್ಷರು, ಸೀತಾರಾಮ್ ಜಿಲ್ಲಾ ಕಾರ್ಯದರ್ಶಿ ಪ್ರಶಾಂತ್ ಪಾರೆಂಕಿ ಮತ್ತು ಜಯಾನಂದ ಗೌಡ ಮಂಡಲ ಪ್ರದಾನ ಕಾರ್ಯದರ್ಶಿಗಳು. ಕೊರಗಪ್ಪ ನಾಯ್ಕ್ ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷ, ಧನಲಕ್ಷ್ಮೀ ಜನಾರ್ಧನ ಮಾಜಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ. ವೇದಾವತಿ ತಾಲ್ಲೂಕ್ ಪಂಚಾಯತ್ ಮಾಜಿ ಉಪಾಧ್ಯಕ್ಷೆ, ಉಮೇಶ್ ಕುಲಾಲ್ ಜಿಲ್ಲಾ ಯುವ ಮೋರ್ಚಾ ಪ್ರದಾನ ಕಾರ್ಯದರ್ಶಿ, ಚಂದ್ರಕಲಾ ಎಸ್.ಸಿ ಮೋರ್ಚಾ ಜಿಲ್ಲಾ ಪ್ರದಾನ ಕಾರ್ಯದರ್ಶಿ, ಗಣೇಶ್ ಗೌಡ ನಾವೂರು ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ, ಶಶಿಧರ್ ಕಲ್ಮಂಜ ಜಿಲ್ಲಾ ಹಿಂದುಳಿದ ವರ್ಗದ ಪ್ರದಾನ ಕಾರ್ಯದರ್ಶಿ., ಶಶಿರಾಜ್ ಮಂಡಲ ಯುವ ಮೋರ್ಚಾ ಅಧ್ಯಕ್ಷ , ವಿದ್ಯಾ ಶ್ರೀನಿವಾಸ ಮಹಿಳಾ ಮೋರ್ಚಾ ಅಧ್ಯಕ್ಷ, ವಿಜಯ ಆರಂಬೋಡಿ, ಪ್ರಮುಖರಾದ ಮೋಹನ್ ಅಂಡಿಂಜೆ, ಸುಂದರ ಹೆಗ್ಡೆ ವೇಣೂರು, ಕೊರಗಪ್ಪ ಗೌಡ ಚಾರ್ಮಾಡಿ, ಜಯಂತ ಗೌಡ ಗುರಿಪಳ್ಳ, ಮಹಾಬಲ ಗೌಡ ಬಂದಾರು ಮೊದಲಾದವರು ಸೇರಿದಂತೆ ಕಾರ್ಯಕರ್ತರು ಉಪಸ್ಥಿತರಿದ್ದರು.

Leave a Comment

error: Content is protected !!