29.5 C
ಪುತ್ತೂರು, ಬೆಳ್ತಂಗಡಿ
April 4, 2025
ಗ್ರಾಮಾಂತರ ಸುದ್ದಿಚಿತ್ರ ವರದಿವರದಿ

ಉಜಿರೆ ಎಸ್.ಡಿ.ಎಮ್ ಆಂ.ಮಾ. (ಸಿ.ಬಿ.ಎಸ್.ಇ) ಶಾಲೆಯಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆ

ಉಜಿರೆ : “ಯೋಗವು ಮನುಷ್ಯನ ಆರೋಗ್ಯದ ಮೇಲೆ ಉತ್ತಮ ಪರಿಣಾಮ ಬೀರುತ್ತದೆ. ಪ್ರತಿನಿತ್ಯವೂ ಯೋಗ ಮಾಡುವ ಮೂಲಕ ಅರೋಗ್ಯ ವೃದ್ಧಿಸಬಹುದು” ಎಂದು ಉಜಿರೆ ಎಸ್.ಡಿ.ಎಮ್ ಪ್ರಕೃತಿ ಮತ್ತು ಯೋಗ ವಿಜ್ಞಾನ ಕಾಲೇಜಿನ ಉಪನ್ಯಾಸಕ ಹಾಗೂ ಮೆಡಿಕಲ್ ಆಫೀಸರ್ ಆಗಿರುವ ಡಾ.ಪ್ರಣವ್ ಹೇಳಿದರು.

ಇವರು ಶ್ರೀ.ಧ.ಮಂ ಆಂಗ್ಲ ಮಾಧ್ಯಮ ಶಾಲೆ (ಸಿ.ಬಿ.ಎಸ್‌.ಇ) ಉಜಿರೆ ಇಲ್ಲಿ ಜೂ 21 ರಂದು ಆಯೋಜಿಸಲಾಗಿದ್ದ ಅಂತರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ವಿದ್ಯಾರ್ಥಿಗಳಿಗೆ ಯೋಗದ ಮಹತ್ವದ ಕುರಿತು ತಿಳಿಸಿದರು.

ವೇದಿಕೆಯಲ್ಲಿ ಇನ್ನೊರ್ವ ಅತಿಥಿ ಉಜಿರೆ ಎಸ್‌.ಡಿ.ಎಮ್ ಪ್ರಕೃತಿ ಮತ್ತು ಯೋಗ ವಿಜ್ಞಾನ ಕಾಲೇಜಿನ ಕ್ಲಿನಿಕಲ್ ಯೋಗ ವಿಭಾಗದ ಎಮ್.ಡಿ ಆಗಿರುವ ಡಾ. ವೈ.ಆರ್ ಶ್ರೀರಂಗ, ಶಾಲಾ ಮುಖ್ಯೋಪಾಧ್ಯಾಯರಾದ ಮನ್ಮೋಹನ್ ನಾಯ್ಕ್ ಕೆ.ಜಿ ಹಾಗೂ ಉಜಿರೆ ಎಸ್‌.ಡಿ.ಎಮ್ ಪ್ರಕೃತಿ ಮತ್ತು ಯೋಗ ವಿಜ್ಞಾನ ಕಾಲೇಜಿನ ವಿದ್ಯಾರ್ಥಿನಿಯರಾದ ಸಾಂಚಿ ಮತ್ತು ಅನನ್ಯ ಉಪಸ್ಥಿತರಿದ್ದರು.

ಶಾಲಾ ಮುಖ್ಯೋಪಾಧ್ಯಾಯರಾದ ಮನ್ಮೋಹನ್ ನಾಯ್ಕ್ ಕೆ.ಜಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.

ಕಾರ್ಯಕ್ರಮದಲ್ಲಿ ಶಾಲಾ ಮುಖ್ಯೋಪಾಧ್ಯಾಯರಾದ ಮನ್ಮೋಹನ್ ನಾಯ್ಕ್ ಕೆ.ಜಿ ಸ್ವಾಗತಿಸಿ, ಶಿಕ್ಷಕಿ ಸವಿತಾ ವೇದ ಪ್ರಕಾಶ್ ನಿರೂಪಿಸಿ ಶಿಕ್ಷಕಿ ಶಮೀಮ್ ವಂದಿಸಿದರು.

Related posts

ಕುಕ್ಕೇಡಿ:ಕೋಟಿ ಚೆನ್ನಯ ಸೇವಾ ಸಂಘದಿಂದ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ

Suddi Udaya

ಎಸ್.ಡಿ.ಎಂ ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ “ಮಾಮ್” ಪ್ರಶಸ್ತಿಯ ಗರಿ

Suddi Udaya

ನಿಡ್ಲೆ ಬೂತ್ ಗೆ ಬಿಜೆಪಿ ಮಂಡಲ ಅಧ್ಯಕ್ಷ ಶ್ರೀನಿವಾಸ್ ರಾವ್ ಭೇಟಿ

Suddi Udaya

ಬಳಂಜ: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಬಳಂಜ- ನಾಲ್ಕೂರು-ತೆಂಕಕಾರಂದೂರು: 36ನೇ ವರ್ಷದ ಆಚರಣಾ ಸಮಿತಿ ಅಧ್ಯಕ್ಷರಾಗಿ ಯುವ ಉದ್ಯಮಿ ರಾಕೇಶ್ ಹೆಗ್ಡೆ ಬಳಂಜ ಆಯ್ಕೆ

Suddi Udaya

ಬೆಳ್ತಂಗಡಿ: ಕಲ್ಕಣಿಯಲ್ಲಿ ಧರೆಗುರುಳಿದ ತೆಂಗಿನ ಮರ, ವಿದ್ಯುತ್ ತಂತಿಗೆ ಬಿದ್ದು ಹಾನಿ

Suddi Udaya

ಜೂ.24: ಜನಸಂಪರ್ಕ ಸಭೆ

Suddi Udaya
error: Content is protected !!