ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಉಜಿರೆ ಶ್ರೀ ಧ.ಮಂ. ಪ.ಪೂ. ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಸ್ವಯಂ ಸೇವಕರಿಗೆ ಪ್ರಶಿಕ್ಷಣ ಕಾರ್ಯಾಗಾರ

ಉಜಿರೆ: ವಿದ್ಯಾರ್ಥಿಗಳ ಸೃಜನಶೀಲತೆಯೊಂದಿಗೆ ಸಾಮಾಜಿಕ ಕಳಕಳಿಯ ಕಾರ್ಯಗಳಿಗೆ ಉತ್ತಮ ವೇದಿಕೆಯಾಗಿ ರಾಷ್ಟ್ರೀಯ ಸೇವಾ ಯೋಜನೆಯು ಕಾರ್ಯನಿರ್ವಹಿಸುತ್ತಿದೆ. ಸಮಾಜಮುಖಿ ಕಾರ್ಯಗಳ ಮೂಲಕ ವ್ಯಕ್ತಿತ್ವ ನಿರ್ಮಾಣ ಇದರಿಂದ ಸಾಧ್ಯ. ಸಮಾಜದಲ್ಲಿ ಉತ್ತಮರಾಗಿ ಹೊರಹೊಮ್ಮಲು ಮಾತ್ರವಲ್ಲದೆ ಪರಿಸರ ಕಾಳಜಿ, ವೈಯುಕ್ತಿಕ ಸ್ವಚ್ಛತೆ , ಆತ್ಮವಿಶ್ವಾಸ ಬೆಳೆಸಿಕೊಳ್ಳಲು ರಾ. ಸೇ. ಯೋಜನೆ ಸಹಾಯಕವಾಗಿದೆ. ಒಟ್ಟಾರೆ ಸಾಮಾಜಿಕ ಸಾಮರಸ್ಯ ಹಾಗೂ ಕ್ರಿಯಾತ್ಮಕ ಚಟುವಟಿಕೆಗಳಿಗೆ ಇದು ಬುನಾದಿಯಾಗಿದೆ ಎಂದು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪಾಲಿಟೆಕ್ನಿಕ್ ಕಾಲೇಜಿನ ಉಪನ್ಯಾಸಕ ಹಾಗೂ ರಾ.ಸೇ.ಯೋಜನೆಯ ಪೂರ್ವ ಯೋಜನಾಧಿಕಾರಿ ಅವನೀಶ್. ಪಿ. ಹೇಳಿದರು.

ಇವರು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಸ್ವಯಂ ಸೇವಕರಿಗೆ ನಡೆದ ಪ್ರಶಿಕ್ಷಣ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.

ಈ ಸಂದರ್ಭದಲ್ಲಿ ಸ್ವಯಂ ಸೇವಕರು ರಚಿಸಿದ ಭಿತ್ತಿಪತ್ತಿಕೆಯನ್ನು ಬಿಡುಗಡೆಗೊಳಿಸಲಾಯಿತು.

ಯೋಜನಾಧಿಕಾರಿ ಡಾ.ಪ್ರಸನ್ನಕುಮಾರ ಐತಾಳ್ ಗೌರವಿಸಿದರು. ಸಹ ಯೋಜನಾಧಿಕಾರಿ ಪದ್ಮಶ್ರೀ ರಕ್ಷಿತ್ , ನಾಯಕರಾದ ಆದಿತ್ಯ ಹಾಗೂ ಪ್ರಾಪ್ತಿ ಉಪಸ್ಥಿತರಿದ್ದರು.

ಶಶಾಂಕ್ ಸ್ವಾಗತಿಸಿ , ಅಪರ್ಣಾ ವಂದಿಸಿದರು. ಹರ್ಷಿತಾ ನಿರೂಪಿಸಿದರು.

Related posts

ತಾಲೂಕಿನ ವಿವಿಧ ರಸ್ತೆ ಅಭಿವೃದ್ಧಿಗೆ ರೂ.2.00 ಕೋಟಿ ಅನುದಾನ ಬಿಡುಗಡೆ: ಶಾಸಕ ಹರೀಶ್ ಪೂಂಜ

Suddi Udaya

ಉರುವಾಲು ಶ್ರೀ ಭಾರತೀ ವಿದ್ಯಾ ಸಂಸ್ಥೆ ಗೆ ಎಲ್.ಐ.ಸಿ ಯಿಂದ ಕೊಡುಗೆ

Suddi Udaya

ಮುಂಡಾಜೆ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಸಹಾಯಧನ ನೀಡಿದ ಮಂಜೂರಾತಿ ಪತ್ರ ವಿತರಣೆ

Suddi Udaya

ಪಡ್ಡಂದಡ್ಕ: ಬೆಂಗಳೂರಿಗೆ ತೆರಳುತ್ತಿದ್ದ ಖಾಸಗಿ ಬಸ್ ಪಲ್ಟಿ: ಹಲವು ಪ್ರಯಾಣಿಕರಿಗೆ ಗಾಯ

Suddi Udaya

ಉಜಿರೆ: ರುಡ್ ಸೆಟ್‌ನಲ್ಲಿ ವಿದ್ಯುತ್ ಉಪಕರಣ ಹಾಗೂ ದ್ವಿಚಕ್ರ ವಾಹನ ರಿಪೇರಿ ತರಬೇತಿ ಸಮಾರೋಪ

Suddi Udaya

ಶ್ರೀ ಧ.ಮಂ. ಆಂ.ಮಾ. ಶಾಲೆಯಲ್ಲಿ ಗಾಂಧಿ ಜಯಂತಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರೀ ಜಯಂತಿ ಆಚರಣೆ

Suddi Udaya
error: Content is protected !!