September 7, 2026
ಗ್ರಾಮಾಂತರ ಸುದ್ದಿ

ಶಾಲಾ ಬೇಡಿಕೆಗೆ ರಕ್ಷಿತ್ ಶಿವರಾಂ ಸ್ಪಂದನೆ: ಕಲ್ಲೇರಿ ಶಾಲೆಯಲ್ಲಿ ನೂತನ ಶೌಚಾಯ ನಿರ್ಮಾಣ

ಬೆಳ್ತಂಗಡಿ: ರಕ್ಷಿತ್ ಶಿವರಾಂ ಅವರ ಪ್ರಯತ್ನದಿಂದ ವಿಧಾನ ಪರಿಷತ್ ಸದಸ್ಯ ಹರಿಪ್ರಸಾದ್ ಅವರು ಮಂಜೂರುಗೊಳಿಸಿದ ರೂ.2 ಲಕ್ಷ ಅನುದಾನದಲ್ಲಿ ಕಲ್ಲೇರಿ ಕಿರಿಯ ಪ್ರಾಥಮಿಕ ಶಾಲೆಯ ಹಲವು ವರ್ಷಗಳ ಬೇಡಿಕೆಯಾದ ನೂತನ ಶೌಚಾಲಯವನ್ನು ನಿರ್ಮಿಸಲಾಗಿದೆ.

ಕಲ್ಲೇರಿ ಕಿರಿಯ ಪ್ರಾಥಮಿಕ ಶಾಲೆಯ ಅಧ್ಯಾಪಕ ವೃಂದ, ಅಭಿವೃದ್ದಿ ಸಮಿತಿ ಕೊನೆಗೆ ಕಳೆದ ವರ್ಷ ಶಾಲಾ ವಾರ್ಷಿಕ ದಿನದಂದು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ರಕ್ಷಿತ್ ಶಿವರಾಂರವರಿಗೆ ಶಾಲಾ ಮುಖ್ಯೋಪಾಧ್ಯಾಯರು, ಸಮಿತಿ ಹಾಗೂ ಊರವರು ಸೇರಿಕೊಂಡು ತಮ್ಮ ಶಾಲಾ ಮಕ್ಕಳಿಗೆ ಶೌಚಾಲಯ ಇಲ್ಲದೆ ಎದುರಿಸುತ್ತಿರುವ ಸಮಸ್ಯೆಯನ್ನು ಮನವಿ ಪತ್ರದ ಮೂಲಕ ತಿಳಿಸಿದ್ದರು.
ಕೂಡಲೇ ರಕ್ಷಿತ್ ಶಿವರಾಂ ಅವರು ವಿಧಾನ ಪರಿಷತ್ ಸದಸ್ಯರಾದ ಹರಿಪ್ರಸಾದ್ ಅವರ ಗಮನಕ್ಕೆ ತಂದಾಗ, ಇದಕ್ಕೆ ಸ್ಪಂದಿಸಿ, ತಮ್ಮ ವಿಧಾನ ಪರಿಷತ್ ನಿಧಿಯಿಂದ ಸುಮಾರು ರೂ. 2ಲಕ್ಷ ಅನುದಾನ ಮಂಜೂರುಗೊಳಿಸಿದ್ದು, ಈಗಾಗಲೇ ಕಟ್ಟಡ ಸಂಪೂರ್ಣಗೊಂಡು ಶಾಲೆಯ ಬೇಡಿಕೆ ಈಡೇರಿದೆ. ಶಾಲೆಯ ಬೇಡಿಕೆ ಈಡೇರಿಸಿದ ರಕ್ಷಿತ್ ಶಿವರಾಂ ಅವರಿಗೆ ಊರವರು ಕೃತಜ್ಞತೆ ಸಲ್ಲಿಸಿದ್ದಾರೆ.

Related posts

ಸೌತಡ್ಕ ಮಹಾಗಣಪತಿ ದೇವಸ್ಥಾನ: ವ್ಯವಸ್ಥಾಪನಾ ಸಮಿತಿಯ 9 ಸದಸ್ಯ ಸ್ಥಾನಕ್ಕೆ 28 ಮಂದಿ ಅರ್ಜಿ

Suddi Udaya

ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಹೊಸ ತಿರುವು: ಪ್ರಕರಣದ ತನಿಖೆಯ ವರದಿ ಸಲ್ಲಿಸುವಂತೆ ಸಿಬಿಐಗೆ ಸುಪ್ರೀಂ ಕೋರ್ಟ್ ಸೂಚನೆ

Suddi Udaya

ಆನೆದಾಳಿಯಿಂದ ಮೃತಪಟ್ಟ ಬಾಲಕೃಷ್ಣ ಗೌಡರ ಮನೆಗೆ ಶಾಸಕ ಹರೀಶ್ ಪೂಂಜ ಭೇಟಿ ಕುಟುಂಬಸ್ಥರಿಗೆ ಸಾಂತ್ವನ – ಪರಿಹಾರ ಧನದ ಚೆಕ್ ಹಸ್ತಾಂತರ

Suddi Udaya

ಕೊಯ್ಯೂರು: ಹಲವಾರು ಬಿಜೆಪಿ ಕಾರ್ಯಕರ್ತರು ಕಾಂಗ್ರೇಸ್ ಸೇರ್ಪಡೆ

Suddi Udaya

ಭೂಸೇನೆಯಲ್ಲಿ 21 ವರ್ಷಗಳ ಕಾಲ ಸೇವೆ ಸಲ್ಲಿಸುತ್ತಿರುವ ಲಾಯಿಲ ನಿವಾಸಿ ಗಣೇಶ್ ಬಿ.ಎಲ್ ಮೇ.2 ರಂದು ಸೇವಾ ನಿವೃತ್ತಿ

Suddi Udaya

ಬದ್ಯಾರ್: ರಸ್ತೆಯಲ್ಲಿ ಬಾಯಿ ತೆರದ ಗುಂಡಿ: ಅಪಾಯದ ಸೂಚನೆ

Suddi Udaya
error: Content is protected !!