32.1 C
ಪುತ್ತೂರು, ಬೆಳ್ತಂಗಡಿ
September 8, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಉದ್ಯೋಗದ ಪ್ರಥಮ ವೇತನ ಬಾರ್ಯ ಶ್ರೀ ಮಹಾವಿಷ್ಣು ಕ್ಷೇತ್ರಕ್ಕೆ ಸಮರ್ಪಣೆ

ಬಾರ್ಯ ಗ್ರಾಮದ ಸುಭಾಷಿನಿ ಮತ್ತು ರೋಹಿನಾಥ್ ಇವರ ಪುತ್ರಿಯಾದ ಕು. ದಿಶಾ ಬಾರ್ಯ ಇವರು ವಾಮಂಜೂರು ಸೇಂಟ್ ಜೋಸೆಫ್ ಇಂಜಿನಿಯರಿಂಗ್ ಕಾಲೇಜ್ ನಲ್ಲಿ ಅಸಿಸ್ಟೆಂಟ್ ಪ್ರೊಫೆಸರ್ ಆಗಿ ನೇಮಕಗೊಂಡಿರುತ್ತಾರೆ. ಬಾರ್ಯ ಶ್ರೀ ಮಹಾ ವಿಷ್ಣು ದೇವಸ್ಥಾನದ ಸನ್ನಿಧಿಯಲ್ಲಿ ಮಾಡಿಕೊಂಡ ಸಂಕಲ್ಪದಂತೆ ಉದ್ಯೋಗ ಸಿದ್ಧಿಸಿದ ಕಾರಣ ಪ್ರಥಮ ವೇತನದ ರೂ 50,000 ಬಾರ್ಯ ಶ್ರೀ ಮಹಾವಿಷ್ಣು ದೇವಸ್ಥಾನದ ಮುಂದಿನ ಅಭಿವೃದ್ಧಿ ಕಾರ್ಯಗಳಿಗೆ ಸಮರ್ಪಿಸಿದರು.

ಬಾರ್ಯ ಕ್ಷೇತ್ರದಲ್ಲಿ ಭಕ್ತಾದಿಗಳು ಸಲ್ಲಿಸುವಂತಹ ಪ್ರಾರ್ಥನೆಗಳಿಗೆ ಅನುಗ್ರಹ ಪ್ರಾಪ್ತಿಯಾಗುತ್ತದೆ ಎನ್ನುವುದಕ್ಕೆ ಇದೊಂದು ಸಾಕ್ಷಿಯಾಗಿದೆ. ಮದುವೆ ಭಾಗ್ಯ ಸಂತಾನ ಫಲ, ಉದ್ಯೋಗ, ವಿದ್ಯಾಭ್ಯಾಸ ಮೊದಲಾದ ವಿಷಯಗಳಲ್ಲಿ ದೇವರ ಸನ್ನಿಧಿಯಲ್ಲಿ ಮಾಡಿದ ಪ್ರಾರ್ಥನೆ ಸಿದ್ಧಿಸುತ್ತಾ ಬಂದಿರುವುದಕ್ಕೆ ಹಲವು ದೃಷ್ಟಾಂತಗಳಿವೆಯೆಂದು ಕ್ಷೇತ್ರದ ಆಡಳಿತ ಸೇವಾ ಟ್ರಸ್ಟಿನ ಅಧ್ಯಕ್ಷ ಭಾಸ್ಕರ ಬಾರ್ಯ ತಿಳಿಸಿ ಶ್ರೀದೇವರ ಪ್ರಸಾದ ನೀಡಿ ಕೃತಜ್ಞತೆ ಸಲ್ಲಿಸಿದ್ದಾರೆ.

Related posts

ಪತಂಜಲಿ ಯೋಗ ಕೇಂದ್ರ: ಪರಶುರಾಮ ಜಯಂತಿ ಮತ್ತು ಮಹಾಭಾರತ ರಸಪ್ರಶ್ನೆ

Suddi Udaya

ಬೆಳ್ತಂಗಡಿ ಚಿತ್ರಾಕೂಟ ನಾಗಬನದಲ್ಲಿ ನಾಗದೇವರಿಗೆ ಕ್ಷೀರಾಭಿಷೇಕ, ತಂಬಿಲ ಸೇವೆ

Suddi Udaya

ಶ್ರೀ ಕ್ಷೇತ್ರ ಧರ್ಮಸ್ಥಳ ಲಕ್ಷದೀಪೋತ್ಸವ: ಸವ೯ಧಮ೯ ಸಮ್ಮೇಳನದ 93ನೇ ಅಧಿವೇಶನ ಉದ್ಘಾಟನೆ

Suddi Udaya

ಕಳೆಂಜ ಲೋಲಾಕ್ಷರ ಮನೆಯನ್ನು ಅರಣ್ಯ ಇಲಾಖೆಯವರು ಕೆಡವಿದ ಪ್ರಕರಣ: ಬೆಂಗಳೂರು ಜನಪ್ರತಿನಿಧಿಗಳ ಕೋರ್ಟ್ ನಲ್ಲಿ ಹರೀಶ್ ಪೂಂಜ, ಪ್ರತಾಪಸಿಂಹ ನಾಯಕ್ ವಿರುದ್ಧ ದೋಷರೋಪ ಪಟ್ಟಿಸಲ್ಲಿಕೆ

Suddi Udaya

ಕೊಕ್ಕಡ ಪರಿಸರದಲ್ಲಿ ಭೀಕರ ಬಿರುಗಾಳಿ ಮಳೆ: ಮರ ಉರುಳಿ ಬಿದ್ದರೂ ಹಾನಿಯಾಗದ ದೈವದ ಗುಡಿ: ದೈವಗಳ ಕಾನಿ೯ಕ ಭಕ್ತರ‌ ಅನಿಸಿಕೆ

Suddi Udaya

ಕಿರಾತ ಮೂರ್ತಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಶ್ರೀ ರಾಮ ನಗರ ಮೈರಲ್ಕೆ ಓಡಿಲ್ನಾಳ ವರ್ಷಾವಧಿ ಜಾತ್ರೋತ್ಸವ

Suddi Udaya
error: Content is protected !!