September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಜೆಸಿಐ ಕೊಕ್ಕಡ ಕಪಿಲಾ ಘಟಕದ ವತಿಯಿಂದ ಅಣಬೆ ಬೇಸಾಯ ತರಬೇತಿ ಕಾರ್ಯಾಗಾರ

ಕೊಕ್ಕಡ: ಜೆಸಿಐ ಕೊಕ್ಕಡ ಕಪಿಲಾ ಘಟಕದ ವತಿಯಿಂದ ಅಣಬೆ ಬೇಸಾಯ ತರಬೇತಿ ಕಾರ್ಯಾಗಾರವನ್ನು ಗ್ರಾಮಭ್ಯುದಯ ಕಾರ್ಯಕ್ರಮ ಅನುಷ್ಠಾನ ಸಮಿತಿಯ ವಠಾರದಲ್ಲಿ ಆಯೋಜಿಸಿಕೊಂಡಿರುತ್ತೇವೆ. ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿ ಯಾಗಿ ಜೇಸಿ ವಿದ್ಯೆಂದ್ರ ಗೌಡ ಅವರು ಸಂಪೂರ್ಣ ಮಾಹಿತಿಯನ್ನು ನೀಡಿರುತ್ತಾರೆ.


ಹವಾಮಾನವನ್ನು ಹೊಂದಿಕೊಂಡು ಬೆಳೆಯವ ಸಾಮರ್ಥ್ಯವಿದೆ. ಅಣಬೆ ಕೃಷಿ ಮಾಡಲು ವಿವಿಧ ಹಂತಗಳಿವೆ. ಮೊದಲು ಭತ್ತದ ಹುಲ್ಲನ್ನು 4ರಿಂದ 5 ಸೆಂ.ಮೀ. ಉದ್ದದ ತಂಡುಗಳಾಗಿ ಕತ್ತರಿಸಿ ಸುಮಾರು 3ರಿಂದ4 ಗಂಟೆಗಳ ಕಾಲ ನೀರಿನಲ್ಲಿ ನೆನೆಸಬೇಕು. ಹುಲ್ಲಿನಲ್ಲಿರುವ ನೀರನ್ನೆಲ್ಲಾ ಬಸಿದು ಕುದಿಯುವ ನೀರಿನಲ್ಲಿ 2 ಗಂಟೆಗಳ ಕಾಲ ನೆನೆಸಬೇಕು. ಕುದಿಯುವ ನೀರಿನಿಂದ ಹುಲ್ಲನ್ನು ತೆಗೆದು ಅದನ್ನು ಒಣಗಿಸಿ ಹೆಚ್ಚಿನ ನೀರಿನ ಅಂಶವನ್ನು ತೆಗೆಯಬೇಕು. ಒಣಗಿದ ಹುಲ್ಲನ್ನು ಪಾಲಿಥೀನ್ ಚೀಲಗಳಿಗೆ ತುಂಬಬೇಕು, ಒಂದು ಚೀಲಕ್ಕೆ ಒಂದು ಕೆ.ಜಿ.ಯಷ್ಟು ಹುಲ್ಲು ಹಾಗೂ 500 ಗ್ರಾಮ್ ಅಣಬೆ ಬೀಜವನ್ನು ಹಂತ ಹಂತವಾಗಿ ಸಮಾನಾಗಿ ಹರಡಿ ತುಂಬಬೇಕು. ಚೀಲದ ಬಾಯನ್ನು ಭದ್ರವಾಗಿ ಕಟ್ಟಬೇಕು. ನಂತರ ಚೀಲಗಳನ್ನು ತಂಪಾಗಿರುವ ಸ್ಥಳದಲ್ಲಿ 20ರಿಂದ 30 ದಿನಗಳ ಕಾಲ ಇಡಬೇಕು. ಆಗ ಅಣಬೆ ಬೀಜ ಮೊಳಕೆಯೊಡೆದು ಬೆಳೆದಿರುತ್ತದೆ. ಚೀಲಗಳಿಗೆ ಬ್ಲೇಡ್‌ನಿಂದ ರಂಧ್ರಗಳನ್ನು ಮಾಡಬೇಕು. ದಿನಕ್ಕೆ 2ರಿಂದ 3ಬಾರಿ ನೀರು ಚಿಮುಕಿಸುತ್ತಿರಬೇಕು. ಚೀಲಕ್ಕೆ ರಂಧ್ರಗಳನ್ನು ಮಾಡಿದ ಒಂದು ವಾರದ ಒಳಗೆ ಹುಲ್ಲಿನ ಪಿಂಡಿಯ ಸುತ್ತಲೂ ಅಣಬೆ ಕಾಣಸಿಗುತ್ತದೆ. ಪ್ರತಿ 3 ದಿನಕ್ಕೊಮ್ಮೆ ಅಣಬೆ ಕೊಯಿಲು ಮಾಡಬಹುದು ಎಂದು ತಿಳಿಸಿದರು.

ಕಾರ್ಯಗಾರರ ದಲ್ಲಿ ಜೆ ಸಿ ಐ ಘಟಕದ ಅಧ್ಯಕ್ಷರಾಗಿರುವ ಜೇಸಿ ಸಂತೋಷ್ ಜೈನ್, ಕಾರ್ಯದರ್ಶಿ ಜೇಸಿ ಅಕ್ಷತ್ ರೈ, ಲೇಡಿ ಜೇಸಿ ಅಧ್ಯಕ್ಷ ಜೇಸಿ ಶೋಭಾ, ಪೂರ್ವ ಅಧ್ಯಕ್ಷರಾದ ಜೇಸಿ ಜೆಎಫ್ಎಂ ಕೆ ಶ್ರೀಧರ್ ರಾವ್, ಅರಣ್ಯ ಸಮಿತಿ ಅಧ್ಯಕ್ಷರಾದ ಧನಂಜಯ ಗೌಡ ಮತ್ತು ಶಿವಪ್ರಸಾದ್ ಹಾಗೂ ಇತರರು ಕಾರ್ಯಗಾರದಲ್ಲಿ ಭಾಗವಹಿಸಿದರು.

Related posts

ಕೊಕ್ಕಡ: ಉಚಿತ ಟೈಲರಿಂಗ್ ತರಬೇತಿ ಶಿಬಿರದ ಸಮಾರೋಪ ಸಮಾರಂಭ

Suddi Udaya

ಪದ್ಮುಂಜ ಹಾಲು ಉತ್ಪಾದಕರ ಸಹಕಾರಿ ಸಂಘದಿಂದ ಸ.ಹಿ.ಪ್ರಾ. ಶಾಲೆಗೆ ಪ್ರಿಂಟಿಂಗ್ ಯಂತ್ರ ಕೊಡುಗೆ

Suddi Udaya

ಮಂಜುಶ್ರೀ ಭಜನಾ ಮಂಡಳಿ ಕುಂಡದಬೆಟ್ಟು ಇದರ ವತಿಯಿಂದ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ

Suddi Udaya

ಧರ್ಮಸ್ಥಳ ಶ್ರೀ ಧ.ಮಂ. ಆಂಗ್ಲ ಮಾಧ್ಯಮ ಶಾಲೆಯಲ್ಲಿ ಯೋಗ ಶಿಬಿರ ಉದ್ಘಾಟನೆ

Suddi Udaya

ನೆರಿಯದಲ್ಲಿ ಹತ್ತು ವರ್ಷಗಳ ಹಿಂದೆ ನಡೆದ ಕೊಲೆಯತ್ನ ಪ್ರಕರಣ: ನಾಲ್ಕು ಮಂದಿ ಆರೋಪಿಗಳಿಗೆ ಶಿಕ್ಷೆ ವಿಧಿಸಿದ ಕೋರ್ಟ್

Suddi Udaya

ಬಂಗೇರ ಬ್ರಿಗೇಡ್ ಪಡಂಗಡಿ ಪಂಚಾಯತ್ ವ್ಯಾಪ್ತಿಯ ನೂತನ ಸಮಿತಿ ರಚನೆ

Suddi Udaya
error: Content is protected !!