ಉಜಿರೆ: ಒಕ್ಕೂಟದ ಪದಾಧಿಕಾರಿಗಳು ಮತ್ತು ಸೇವಾಪ್ರತಿನಿಧಿಯವರು ಸಂಘದ ಸದಸ್ಯರಾಗಿರುವ ಹೆಚ್ಚಿನ ಸದಸ್ಯರು ಪ್ರಗತಿನಿಧಿಯನ್ನು ಪಡೆದುಕೊಂಡು ಪದ್ಮಿನಿಯೋಗ ಮಾಡಿ ಅಭಿವೃದ್ಧಿಯನ್ನು ಆಗುತ್ತಿರುವ ಮಾಹಿತಿಯನ್ನು ಪಡೆಯಲು ಹಾಗು ಅವರಿಗೆ ಇನ್ನಷ್ಟು ಯೋಜನೆಯ ಸೇವೆಗಳನ್ನು ನೀಡುವ ಉದ್ದೇಶದಿಂದ ಮನೆ ಭೇಟಿಯನ್ನು ಮಾಡುವ ಸಂದರ್ಭದಲ್ಲಿ, ಐಸಮ್ಮ ರವರಿಗೆ ವೀಲ್ ಚಯರ್ ಅಗತ್ಯತೆಯನ್ನು ಇದೆ ಎನ್ನುವಂತಹ ವಿಷಯವನ್ನು ಮನೆ ಭೇಟಿ ಮಾಡಿದ ಸಂದರ್ಭ ಒಕ್ಕೂಟದ ಪದಾಧಿಕಾರಿಗಳು ಹಾಗೂ ಸೇವಾಪ್ರತಿನಿಧಿಯವರು ಪೂಜ್ಯ ಖಾವಂದರಿಗೆ ವಿಶೇಷವಾದ ಮನವಿಯನ್ನು ನೀಡಿದ್ದು ಈ ಮನವಿಗೆ ಪೂಜ್ಯರು ಸಮ್ಮತಿಸಿ ಉಚಿತವಾಗಿ ವೀಲ್ ಚೇರ್ ಒದಗಿಸಿದ್ದಾರೆ.
ಬೆಳ್ತಂಗಡಿ ತಾಲೂಕಿನ ಲಾಯಿಲ ವಲಯದ ಲಾಯಿಲ ಗಾಂಧಿನಗರ ಎಂಬಲ್ಲಿನ ಐಸಮ್ಮರವರಿಗೆ ನಡೆದಾಡಲು ಶಕ್ತಿ ಇಲ್ಲದಿರುವ ಇವರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್(ರಿ) ಬೆಳ್ತಂಗಡಿ ತಾಲೂಕಿನ ವತಿಯಿಂದ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಪೂಜ್ಯ ಡಾ. ಡಿ ವೀರೇಂದ್ರ ಹೆಗ್ಗಡೆಯವರು ಉಚಿತವಾಗಿ ನೀಡಿರುವ ವೀಲ್ ಚಯರ್ ನ್ನು ತಾಲ್ಲೂಕು ಯೋಜನಾಧಿಕಾರಿ ಸುರೇಂದ್ರರವರು ವಿತರಿಸಿದರು.
ಈ ಸಂದರ್ಭದಲ್ಲಿ ಒಕ್ಕೂಟದ ಮಾಜಿ ಅಧ್ಯಕ್ಷರಾದ ಶ್ರೀಮತಿ ವನಿತಾ, ಲಾಯಿಲ ಸಿ ಒಕ್ಕೂಟದ ಕಾರ್ಯದರ್ಶಿಯಾದ ಕೈರುಣಿಸ,
ವಲಯ ಮೇಲ್ವಿಚಾರಕರಾದ ಸುಶಾಂತ್ ,ಸೇವಾಪ್ರತಿನಿಧಿಯಾದ ದಿವ್ಯ ಉಪಸ್ಥಿತರಿದ್ದರು…