ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ವಾಣಿ ಕಾಲೇಜಿನಲ್ಲಿ ನಿಹಾರ್ ಎಸ್. ಆರ್‌ಗೆ ಅಭಿನಂದನೆ

ಬೆಳ್ತಂಗಡಿ: ನೀಟ್ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ 690 ಅಂಕಗಳನ್ನು ಗಳಿಸಿದ ಮತ್ತು ಸಿಇಟಿ ಪರೀಕ್ಷೆಯಲ್ಲಿ ಒಟ್ಟು ಏಳು ರ್‍ಯಾಂಕ್ ಗಳಿಸಿದ ನಿಹಾರ್ ಎಸ್.ಆರ್. ವಾಣಿ ಪದವಿ ಪೂರ್ವ ಕಾಲೇಜಿಗೆ ಭೇಟಿ ನಿಡಿದರು. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ತಾವು ನಡೆಸಿದ ತಯಾರಿಯ ಬಗ್ಗೆ ತಿಳಿಸುತ್ತಾ ವಿದ್ಯಾರ್ಥಿಗಳಿಗೆ ಸ್ಫೂರ್ತಿ ತುಂಬಿದರು.


ಪ್ರತಿಭಾನ್ವಿತ ವಿದ್ಯಾರ್ಥಿ ನಿಹಾರ್ ಎಸ್.ಆರ್. ಅವರನ್ನು ವಾಣಿ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಕುಶಾಲಪ್ಪ ಗೌಡ ಅಭಿನಂದಿಸಿದರು. ಈ ಸಂದರ್ಭದಲ್ಲಿ ಕಾಲೇಜಿನ ಆಡಳಿತ ಮಂಡಳಿಯ ಕಾರ್ಯದರ್ಶಿಗಳಾದ ಗಣೇಶ್ ಗೌಡ, ಶ್ರೀನಾಥ್ ಕೆ.ಎಂ, ಪ್ರಾಂಶುಪಾಲರು ಯದುಪತಿ ಗೌಡ, ಉಪಪ್ರಾಂಶುಪಾಲ ವಿಷ್ಣುಪ್ರಕಾಶ್ ಎಂ ಮತ್ತು ಇತರ ಉಪನ್ಯಾಸಕರು ಉಪಸ್ಥಿತರಿದ್ದರು.

Related posts

ಲಾಯಿಲ ಗ್ರಾಮೀಣ ಶ್ರೇಷ್ಠತಾ ತರಬೇತಿ ಕೇಂದ್ರದಲ್ಲಿ ದೀಪದ ಬತ್ತಿ ತಯಾರಿ ತರಬೇತಿಯ ಸಮಾರೋಪ

Suddi Udaya

ಬೆಳಗಾವಿ ಅಧಿವೇಶನ: ಕಾಡಾನೆಗಳ ನಿರಂತರ ಹಾವಳಿಯಿಂದಾಗಿ ಬೆಳೆ ನಾಶ: ಶಾಶ್ವತ ಪರಿಹಾರ ಒದಗಿಸಿ-ವಿ.ಪ.ಸದಸ್ಯ ಪ್ರತಾಪಸಿಂಹ ನಾಯಕ್ ಆಗ್ರಹ

Suddi Udaya

ಓಡಿಲ್ನಾಳ ಸ ಉ.ಪ್ರಾ .ಶಾಲೆಯಲ್ಲಿ ಸ್ಮಾರ್ಟ್ ಕ್ಲಾಸ್ ಉದ್ಘಾಟನೆ

Suddi Udaya

ಬೆಳ್ತಂಗಡಿ ಸಾರ್ವಜನಿಕ ಆಸ್ಪತ್ರೆಯ ಸಮಸ್ಯೆಗಳ ಪರಿಹಾರಕ್ಕೆ ಆರೋಗ್ಯ ಸಚಿವರಿಗೆ ಎಸ್‌ಡಿಪಿಐ ಮನವಿ

Suddi Udaya

ನಾರಾವಿ: ಮನೆಯಲ್ಲಿ ಯಾರು ಇಲ್ಲದ ವೇಳೆ ರೂ. 9.5 ಲಕ್ಷ ಮೌಲ್ಯದ ಚಿನ್ನಾಭರಣ ಕಳ್ಳತನ

Suddi Udaya

ಬಿಜೆಪಿಗರೇ, ಸರ್ಕಾರದ ವಿರುದ್ಧ ಸುಳ್ಳು ಆರೋಪ ನಿಲ್ಲಿಸಿ, ತಾಲೂಕಿಗೆ ನೀಡಿದ ಅಭಿವೃದ್ಧಿ, ಯೋಜನೆ ಗಮನಿಸಿ: ಅಭಿವೃದ್ಧಿ ಅನುದಾನಗಳ ಪಟ್ಟಿಗಳೊಂದಿಗೆ ಯುವ ಕಾಂಗ್ರೆಸ್ ಬೆಳ್ತಂಗಡಿ ವತಿಯಿಂದ ಪೋಸ್ಟರ್ ಅಭಿಯಾನ

Suddi Udaya
error: Content is protected !!