ತಾಲೂಕು ಸುದ್ದಿ

ಬೆಳ್ತಂಗಡಿ ತಾಲೂಕು ಆಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿಗೆ ಎಂಟು ಮಂದಿ ನಾಮನಿರ್ದೇಶಿತ ಸದಸ್ಯರ ನೇಮಕ

ಬೆಳ್ತಂಗಡಿ: ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಬೆಳ್ತಂಗಡಿ ತಾಲೂಕು ಆರೋಗ್ಯ ರಕ್ಷಾ ಸಮಿತಿಗೆ ಎಂಟು ಮಂದಿ ನಾಮನಿರ್ದೇಶಿತ ಸದಸ್ಯರನ್ನು ಸರ್ಕಾರ ನೇಮಕ ಮಾಡಿ ಆದೇಶಿಸಿದೆ.

ನಾಮನಿರ್ದೇಶಿತ ಸದಸ್ಯರ ವಿವರಗಳು.: ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿಯ ಸದಸ್ಯರು,ಜಿಲ್ಲಾ ಕಾಂಗ್ರೆಸ್‌ ಅಲ್ಪಸಂಖ್ಯಾತ ಘಟಕದ ಉಪಾಧ್ಯಕ್ಷರಾದ ಪಿ.ಟಿ ಸೆಬಾಸ್ಟಿಯನ್ ಅಮಿನಡ್ಕ ಕಳೆಂಜ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಘಟನ ಸಂಚಾಲಕರಾದ , ವೆಂಕಣ್ಣ ಕೊಯ್ಯುರು, ತಾಲೂಕು ಕಾಂಗ್ರೆಸ್‌ ಇಂಟಕ್ ನಗರ ಸಮಿತಿಯ ಅಧ್ಯಕ್ಷರಾದ ನವೀನ್ ಗೌಡ ಸವಣಾಲು, ಕಡಿರುದ್ಯಾವರ ಗ್ರಾಮ ಪಂಚಾಯತ್ ಮಾಜಿ ಸದಸ್ಯರಾದ ಶ್ರೀಮತಿ ವನಿತಾ ಎಮ್ ಸಾಲಿಯಾನ್, ಸುಲ್ಕೇರಿ ಗ್ರಾಮ ಪಂಚಾಯತ್ ಸದಸ್ಯರಾದ ವೀರೇಂದ್ರ ಕುಮಾ‌ರ್ ಜೈನ್‌ ರಾಜಪಾದೆ, ತಾಲೂಕು ಕೊರಗ ಸಮುದಾಯ ಸಮಿತಿಯ ಮಾಜಿ ಕಾರ್ಯದರ್ಶಿ ಸವಿತಾ ಕೊರಗ, ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಅಬ್ದುಲ್ ರಶೀದ್ ಕಕ್ಕಿಂಜೆ, ವೇಣೂರು ಕಂಬಳ ಸಮಿತಿಯ ಉಪಾಧ್ಯಕ್ಷರು ನಿಟ್ಟಡೆ ಕಾಂಗ್ರೆಸ್‌ ಗ್ರಾಮ ಸಮಿತಿಯ ಅಧ್ಯಕ್ಷರಾದ ರೋಯ್ ಸ್ಟೀವನ್ ಮೋನಿಸ್ ಇವರುಗಳನ್ನು ಸರ್ಕಾರ ನೇಮಕ ಮಾಡಿ ಆದೇಶಿಸಿದೆ.ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ ಸರ್ಕಾರಕ್ಕೆ ಇವರುಗಳ ಹೆಸರನ್ನು ಶಿಫಾರಸ್ಸು ಮಾಡಿದ್ದರು.

Related posts

ರಾಷ್ಟ್ರೀಯ ಕರಾಟೆ ಚಾಂಪಿಯನ್ ಶಿಪ್: ಕಾಯರ್ತಡ್ಕ ದಿವ್ಯಜ್ಯೋತಿ ಶಾಲಾ ವಿದ್ಯಾರ್ಥಿ ಆ್ಯಡ್ಲಿನ್ ಎಲಿಜಬೆತ್ ಜೆರಿನ್ ಕುಮಿಟೆ ವಿಭಾಗದಲ್ಲಿ ಚಿನ್ನದ ಪದಕ

Suddi Udaya

ಉಜಿರೆಯಲ್ಲಿ ಸಾರಥಿ ಮೋಟಾರ್ ಲಿಂಕ್ಸ್ -ಹೊಗೆ ತಪಾಸಣಾ ಕೇಂದ್ರ ಶುಭಾರಂಭ

Suddi Udaya

ಬೆಳ್ತಂಗಡಿ ಪಿಎಸ್‌ಐ ಧನರಾಜ್ ಟಿ.ಎಂ ಹಾಗೂ ಪುಂಜಾಲಕಟ್ಟೆ ಪಿಎಸ್‌ಐ ಓಡಿಯಪ್ಪ ವರ್ಗಾವಣೆ

Suddi Udaya

27 ನೇ ವರ್ಷದ ಭಜನಾ ಕಮ್ಮಟ: ಆಧ್ಯಾತ್ಮಿಕ ಕಮ್ಮಟಗಳು ಭಜನೆಗೆ ಮಾತ್ರವಲ್ಲ, ವ್ಯಕ್ತಿತ್ವ ನಿರ್ಮಾಣಕ್ಕೆ ಉತ್ತಮ ವೇದಿಕೆ:ಅನಿಲ್ ಕುಮಾರ್

Suddi Udaya

ಕಳೆಂಜ : ಶೌರ್ಯ ಸ್ವಯಂಸೇವಕ ಶೀನಪ್ಪ ನಾಯ್ಕ್ ರಿಗೆ ಸನ್ಮಾನ

Suddi Udaya

ಕುವೆಟ್ಟು ಗ್ರಾ.ಪಂ ಮಾಜಿ ಸದಸ್ಯ ಭಾಜಪ ದ ನಿಷ್ಠಾವಂತ ಕಾರ್ಯಕರ್ತ ನಾರಾಯಣ ಆಚಾರ್ಯ ಗುರುವಾಯನಕೆರೆ ನಿಧನ

Suddi Udaya
error: Content is protected !!