ಉಜಿರೆ: ವಿದ್ಯಾರ್ಥಿಗಳಲ್ಲಿ ಕಲಿಕೆ ಜೊತೆ ಜೊತೆಗೆ ವಿವಿಧ ಚಟುವಟಿಕೆಗಳ ಸಂಯೋಜನೆ ಮಾಡಿ ಅವರ ಕಲಿಕಾ ಹರಿವನ್ನು ವಿಸ್ತಾರಗೊಳಿಸುವ ನಿಟ್ಟಿನಲ್ಲಿ ಆಯೋಜಿಸಿದ ಕಾರ್ಯಕ್ಷೇತ್ರ ಭೇಟಿ ಕಾರ್ಯಕ್ರಮದಲ್ಲಿ ಧರ್ಮಸ್ಥಳದ ‘ಮಂಜೂಷಾ’ ವಸ್ತು ಸಂಗ್ರಹಾಲಯಕ್ಕೆ ವಿದ್ಯಾರ್ಥಿಗಳ ತಂಡದೊಂದಿಗೆ ಭೇಟಿ ನೀಡಲಾಯಿತು.
ಹಳೆಯ ಕಾಲದ ನೆನಪುಗಳ ಸಮಗ್ರ ಭಂಡಾರವೇ ಆಗಿರುವ ವಸ್ತು ಸಂಗ್ರಹಾಲಯವನ್ನು ಸಂಪೂರ್ಣವಾಗಿ ವೀಕ್ಷಿಸಿ, ಹಲವಾರು ಮಾಹಿತಿಗಳನ್ನು ಕಲೆ ಹಾಕಿದರು ಅಲ್ಲದೇ ತಮಗಿರುವ ಸಂಶಯಗಳನ್ನ ಅಲ್ಲಿನ ಸಿಬ್ಬಂದಿ ಗಳೊಂದಿಗೆ ಚರ್ಚಿಸಿ ಪರಿಹರಿಸಿಕೊಂಡರು.
ನಂತರ ಹಳೆಯ ವಿಭಿನ್ನ ವಿನೂತನ ಕಾರುಗಳ ಸಂಗ್ರಹಾಲಯಕ್ಕೆ ತೆರಳಿ ವೀಕ್ಷಣೆ ಮಾಡಿದರು.
ಕಾಲೇಜಿನ ಪ್ರಾಂಶುಪಾಲರಾದ ಸುನಿಲ್ ಪಂಡಿತ್ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.
ಕಾಲೇಜಿನ ಸಿಬ್ಬಂದಿ ವರ್ಗ ಹಾಗೂ ವಸತಿ ನಿಲಯದ ಪಾಲಕರು ಜೊತೆಗಿದ್ದು ಸಹಕರಿಸಿದರು.