ಉಜಿರೆ: ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿ ಕಲಿಕೆಯಿಂದ ಸಾಧ್ಯ ಹಾಗಾಗಿ ಕಲಿಕೆ ಜೊತೆ- ಜೊತೆಗೆ ವ್ಯಕ್ತಿತ್ವದ ಕಟ್ಟುವಿಕೆಗೆ ಪೂರಕ ವಾತಾವರಣಕ್ಕೆ ಆವಾಗಲೇ ರಹದಾರಿಯಾಗಬೇಕು. ಸಂಸ್ಕಾರ ಮಾರ್ಗದಲ್ಲಿ ಶಿಕ್ಷಣ ಸಾಗಿದಾಗ ವಿದ್ಯಾರ್ಥಿಯ ಬದುಕು ಸಾರ್ಥಕತೆ ಪಡೆದುಕೊಳ್ಳುವುದು. ಕೇವಲ ಹಣವಿದ್ದರೆ ಸಾಲದು ಗುಣವೂ ಬಹುಮುಖ್ಯ. ಸಮಾಜ ಕಟ್ಟುವಲ್ಲಿ ಉತ್ತಮ ಯುವ ಮನಸುಗಳ ನಿರ್ಮಾಣದ ಕಾಮಗಾರಿ ಶಾಲಾ ಕಾಲೇಜುಗಳಲ್ಲಿ ಇಂತಹ ಮೌಲ್ಯದಾರಿತ ಶಿಕ್ಷಣದ ಮೂಲಕ ಸಾಧ್ಯವೆಂದು ಉಜಿರೆಯ ವಿದ್ವಾನ್ ಅಶೋಕ ಭಟ್ ಹೇಳಿದರು.
ಕಾಲೇಜಿನ ಶೈಕ್ಷಣಿಕ ವರ್ಷದ ಮೌಲ್ಯದಾರಿತ ಶಿಕ್ಷಣ ತರಗತಿಗಳ ಉದ್ಘಾಟನೆ ನೇರವೇರಿಸಿ ಮಾತಾಡಿದರು.
ಕಾಲೇಜಿನ ಪ್ರಾಂಶುಪಾಲರಾದ ಸುನಿಲ್ ಪಂಡಿತ್ ಉಪಸ್ಥಿತರಿದ್ದರು.
ಕಾಲೇಜಿನ ಗಣಿತಶಾಸ್ತ್ರ ಉಪನ್ಯಾಸಕ ಕೃಷ್ಣಪ್ರಸಾದ್ ಕೆ. ಪಿ ನಿರೂಪಿಸಿ, ವಂದಿಸಿದರು.