ಉಜಿರೆ ವಲಯದ ಮಾಚಾರು ಕಾರ್ಯಕ್ಷೇತ್ರದ ಬದನಾಜೆಯಲ್ಲಿ ವಾಸವಾಗಿರುವ ಕೂಸಪ್ಪರವರಿಗೆ ವಾಸ್ತಲ್ಯ ಕಾರ್ಯಕ್ರಮದಡಿಯಲ್ಲಿ ತಿಂಗಳ ಮಾಶಾಸನ ನೀಡುತ್ತಿದ್ದು ಕೂಸಪ್ಪ ರವರ ಮನೆ ಮಳೆಗೆ ಮಾಡು ಕುಸಿದು ಬಿದ್ದು ಮಳೆಯ ನೀರು ಮನೆಯ ಒಳಗಡೆ ಬಿದ್ದು ಮನೆಯಲ್ಲಿ ವಾಸ ಮಾಡಲು ಸಾಧ್ಯ ವಾಗುತ್ತಿರಲಿಲ್ಲ. ಜು.2 ರಂದು ಈ ಬಗ್ಗೆ ವಿಪತ್ತು ತಂಡದ ಸದಸ್ಯರಿಗೆ ಮಾಹಿತಿ ನೀಡಿ ಸದ್ರಿ ಮನೆ ಭೇಟಿ ಮಾಡಿ ಪರಿಶೀಲನೆ ಮಾಡಿದಾಗ ಸದ್ಯದ ಪರಿಸ್ಥಿತಿಗೆ ಮಾಡು ರಿಪೇರಿ ಮಾಡಲು ಸಾಧ್ಯ ವಾಗದ ಕಾರಣ, ಯೋಜನಾಧಿಕಾರಿಯವರು ಮನೆಯ ಮೇಲ್ಗಡೆ ಟರ್ಪಲ್ ಹಾಕುವ ಬಗ್ಗೆ ಸಲಹೆ ನೀಡಿದರು.
ಈ ಬಗ್ಗೆ ಉಜಿರೆ-ಬೆಳಾಲು ಶೌರ್ಯ ವಿಪತ್ತು ನಿರ್ವಹಣಾ ಘಟಕಕ್ಕೆ ಮಾಹಿತಿ ನೀಡಿದ ಕೂಡಲೇ ತನ್ನ ಎಲ್ಲಾ ಕೆಲಸಗಳನ್ನು ಬಿಟ್ಟು ಅರ್ಧ ಗಂಟೆಯೊಳಗೆ ಎಲ್ಲಾ ಒಟ್ಟು ಸೇರಿ ಬಡ ಕುಟುಂಬದ ಮನೆಯ ಮೇಲ್ಚಾವಣಿಗೆ ಟಾರ್ಪಲ್ ಹಾಕಿ ಯಶಸ್ವಿಯಾದರು.