ಬೆಳ್ತಂಗಡಿ: ಪುತ್ತೂರು-ಧರ್ಮಸ್ಥಳ ಮಾರ್ಗವಾಗಿ ಬೆಳಿಗ್ಗೆ ಮತ್ತು ಸಂಜೆ ನಿಯಮಿತ ಸಮಯದಲ್ಲಿ ಹೊರಡುವ ಬಸ್ ಗೆ ಜು.25 ರಂದು ಉಪ್ಪಿನಂಗಡಿ ಬಸ್ ನಿಲ್ದಾಣದಲ್ಲಿ ಐದು ನಿಮಿಷಗಳ ಕಾಲ ಮುಂಚಿತವಾಗಿ ಬಂದಿದೆ ಅನ್ನುವ ಕಾರಣಕ್ಕೆ ಉಪ್ಪಿನಂಗಡಿ-ಬೆಳ್ತಂಗಡಿಗೆ ಹೊರಡುವ ಖಾಸಗಿ ಒಡೆತನದ ವರುಣ್ ಬಸ್ ಕೆ.ಎಸ್.ಆರ್.ಟಿ.ಸಿ ಬಸ್ ಗೆ ಅಡ್ಡಲಾಗಿ ನಿಂತ ಕಾರಣಕ್ಕಾಗಿ ದಿನನಿತ್ಯ ಪ್ರಯಾಣಿಸುವ ಸರಕಾರಿ ಬಸ್ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸುವುದರ ಜೊತೆಗೆ ಅಸಂಬದ್ಧ ಪದ ಬಳಕೆ ಮಾಡಿರುವ ಬಗ್ಗೆ ವರುಣ್ ಬಸ್ ಕಂಡೆಕ್ಟರ್ ಹಾಗೂ ಏಜೆಂಟ್ ಗಳಿಗೆ ಸರಿಯಾದ ಉತ್ತರ ನೀಡಿರುವ ಬಗ್ಗೆ ಜುಲೈ 25 ರಂದು ವರದಿಯಾಗಿದೆ.
ಎಂದಿನಂತೆ ಪುತ್ತೂರು ಬಸ್ ನಿಲ್ದಾಣದಿಂದ 5.30 ಕ್ಕೆ ಹೊರಟ ಕೆ.ಎಸ್.ಆರ್.ಟಿ.ಸಿ ಬಸ್ ಉಪ್ಪಿನಂಗಡಿ ಬಸ್ ನಿಲ್ದಾಣಕ್ಕೆ 6.05 ನಿಮಿಷಕ್ಕೆ ತಲುಪಿತ್ತು, ಅದನ್ನೇ ಖ್ಯಾತೆ ತೆಗೆದು ಆ ಸಮಯದಲ್ಲಿ ಹೊರಡುವ ವರುಣ್ ಬಸ್ ಸಮಯಕ್ಕೆ ಮುಂಚಿತವಾಗಿ ಬಂದಿರುವುದರ ಕಾರಣವಾಗಿ ಸರಕಾರಿ ಬಸ್ ಗೆ ಅಡ್ಡಲಾಗಿ ನಿಂತು, ಮುಂದೆ ಚಲಾಯಿಸದಂತೆ ಇಲ್ಲ ಸಲ್ಲದ ಬೈಗುಳ ಮಾತನಾಡಿರುವುದನ್ನು ಕೇಳಿದ ಪ್ರಯಾಣಿಕರು ಅಡ್ಡಲಾಗಿರುವ ಬಸ್ ನ್ನು ತೆಗೆಯುವಂತೆ ಮನವಿ ಮಾಡಿದ್ದರು, ಅದಕ್ಕೂ ಜಗ್ಗದ ವರುಣ್ ಬಸ್ ಕಂಡೆಕ್ಟರ್ ಮತ್ತು ಏಜೆಂಟ್ ಗಳು ಏಕಾಏಕಿ ಅಸಂಬದ್ಧ ಮಾತುಗಳ್ನಾಡಿರುವ ಬಗ್ಗೆ ಬಸ್ ಪ್ರಯಾಣಿಕರು ತಾವು ಹಿರಿಯರು ಈ ರೀತಿ ಮಾತನಾಡುವುದು ಸರಿಯಲ್ಲ, ನಿಮ್ಮ ಮಾತು ಇನ್ನೊಬ್ಬರಿಗೆ ಮಾರ್ಗದರ್ಶನವಾಗಬೇಕು ಎನ್ನುವ ಮಾತುಗಳನ್ನಾಡಿದ್ದಾರೆ.
ಪ್ರತಿನಿತ್ಯ ಧರ್ಮಸ್ಥಳ-ಪುತ್ತೂರು ಮಾರ್ಗವಾಗಿ ಸರಿಯಾದ ಸರಕಾರಿ ಬಸ್ ಓಡಾಡದಂತೆ ಖಾಸಗಿಯಾಗಿ ಓಡಾಡುವ ಬೆಳ್ತಂಗಡಿ-ಉಪ್ಪಿನಂಗಡಿ ಬಸ್ ನವರೇ ಸಮಸ್ಯೆ ಮಾಡಿರಬಹುದು ಎಂದು ಜನ ಅಂದುಕೊಳ್ಳುತ್ತಿದ್ದಾರೆ.