29.5 C
ಪುತ್ತೂರು, ಬೆಳ್ತಂಗಡಿ
April 4, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಯುವಶಕ್ತಿ ಫ್ರೆಂಡ್ಸ್ ನ ಮೊಸರು ಕುಡಿಕೆ ಉತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

ನಾಲ್ಕೂರು:ಯುವಶಕ್ತಿ ಫ್ರೆಂಡ್ಸ್ ನಾಲ್ಕೂರು ಇದರ ವತಿಯಿಂದ ಆ. 25 ರಂದು ನಡೆಯಲಿರುವ 2 ನೇ ವರ್ಷದ ಶ್ರೀಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಮೊಸರು ಕುಡಿಕೆ ಉತ್ಸವದ ಆಮಂತ್ರಣ ಪತ್ರಿಕೆಯನ್ನು ಬಳಂಜ‌ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿ ಗೌರವಾಧ್ಯಕ್ಷ ಹೆಚ್.ಧರ್ಣಪ್ಪ ಪೂಜಾರಿ ಬಿಡುಗಡೆಗೊಳಿಸಿ ಕಾರ್ಯಕ್ರಮವು ಯಾವುದೇ ಅಡೆ ತಡೆಗಳು ಬಾರದೆ ಸುಸೂತ್ರವಾಗಿ ನಡೆಯಲಿ ಎಂದು ಹಾರೈಸಿದರು.

ಈ ಸಂದರ್ಭದಲ್ಲಿ ಬಳಂಜ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿ ಮಾಜಿ ಅಧ್ಯಕ್ಷರುಗಳಾದ ಪ್ರವೀಣ್ ಕುಮಾರ್ ಹೆಚ್.ಎಸ್,ದಿನೇಶ್ ಅಂತರ,ಯುವ ಉದ್ಯಮಿ ಪ್ರವೀಣ್ ಪೂಜಾರಿ ಲಾಂತ್ಯಾರು, ಬ್ಯಾಂಕ್ ಉದ್ಯೋಗಿ ಜಗದೀಶ್ ಬಳ್ಳಿದಡ್ಡ,ಯುವಶಕ್ತಿ ತಂಡದ ಪದಾಧಿಕಾರಿಗಳಾದ ಸಂತೋಷ್ ಪಿ ಕೋಟ್ಯಾನ್,ಯೋಗೀಶ್ ಆರ್ ಯೈಕುರಿ,ಯತೀಶ್ ವೈ.ಎಲ್,ಕರುಣಾಕರ ಹೆಗ್ಡೆ ಬೊಕ್ಕಸ,ರಂಜಿತ್ ಪೂಜಾರಿ, ಪ್ರವೀಣ್ ಡಿ ಕೋಟ್ಯಾನ್, ಶರತ್ ಅಂಚನ್ ಉಪಸ್ಥಿತರಿದ್ದರು.

ಸಂಪತ್ ಕೋಟ್ಯಾನ್, ಚಂದ್ರಹಾಸ್ ಬಳಂಜ,ಮಹೇಶ್ ಕುಲಾಲ್, ಸುದೀರ್ ಮಜಲೋಡಿ, ಜಯಪ್ರಸಾದ್ ದರ್ಖಾಸ್ ,ಪ್ರಶಾಂತ್ ಕೋಟ್ಯಾನ್, ಜಗದೀಶ್ ಕೋಟ್ಯಾನ್, ದಿನೇಶ್ ನಿಟ್ಟಡ್ಕ, ರಕ್ಷಿತ್ ಬಗ್ಯೋಟ್ಟು, ಪ್ರಶಾಂತ್ ಮಜಲೋಡಿ, ಸುಧೀಶ್ ಪೂಜಾರಿ,
ಸಂತೋಷ್ ಕುಮಾರ್, ವಿಜಯ ಪೂಜಾರಿ, ಪ್ರಣಾಮ್ ಶೆಟ್ಟಿ, ಕಿರಣ್ ಕುಮಾರ್, ಸಾಯಿ, ಪ್ರಥಮ್ ಸಹಕರಿಸಿದರು.

ಆಗಷ್ಟ್ 25 ರಂದು ಬೆಳಿಗ್ಗೆಯಿಂದ ವಿವಿಧ ಆಟೋಟ ಸ್ಪರ್ದೆಗಳು, 1-6 ವಯಸ್ಸಿನ ಮಕ್ಕಳಿಗೆ ಬಾಲಕೃಷ್ಣ, ಮುದ್ದುಕೃಷ್ಣ ಸ್ಪರ್ದೆ,ವಾಲಿಬಾಲ್, ತ್ರೋಬಾಲ್,ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ ಎಂದು ಸಂಘಟಕರು ತಿಳಿಸಿರುತ್ತಾರೆ.

Related posts

ಪದ್ಮುಂಜ: ಆಟೋ ರಿಕ್ಷಾ ಪಲ್ಟಿ, ಗಂಭೀರ ಗಾಯಗೊಂಡ ಚಾಲಕ ಮೃತ್ಯು

Suddi Udaya

ಧರ್ಮಸ್ಥಳ: ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆ

Suddi Udaya

ಬದುಕು ಕಟ್ಟೋಣ ಬನ್ನಿ ತಂಡದ ಸಂಚಾಲಕ, ಪ್ರಸಿದ್ದ ಉದ್ಯಮಿ ಮೋಹನ್ ಕುಮಾರ್ ಅವರನ್ನು ಭೇಟಿಯಾದ ರಾಜ್ಯಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿ ಮೋಹಿತ್

Suddi Udaya

ಚಾರ್ಮಾಡಿ: ಮತ್ತೂರು ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಸಾರ್ವಜನಿಕ ಕುಂಕುಮಾರ್ಚನೆ; ದುರ್ಗ ನಮಸ್ಕಾರ ಪೂಜೆ

Suddi Udaya

ಬೆಳ್ತಂಗಡಿ ವಕೀಲರ ಸಂಘ ಹಾಗೂ ಯುವ ವಕೀಲರ ವೇದಿಕೆ ವತಿಯಿಂದ ಯುವ ವಕೀಲರಿಗೆ ಕಾನೂನು ಕಟ್ಟೆ ಕಾರ್ಯಕ್ರಮ

Suddi Udaya

ಅಳದಂಗಡಿ: ಉಚಿತ ನೇತ್ರ ಚಿಕಿತ್ಸಾ ಶಿಬಿರ

Suddi Udaya
error: Content is protected !!