31.1 C
ಪುತ್ತೂರು, ಬೆಳ್ತಂಗಡಿ
April 14, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ಬೆಳ್ತಂಗಡಿಯಲ್ಲಿ ಮಳೆ ಅವಾಂತರ, ವೇಣೂರಿನಲ್ಲಿ ಧರೆ ಕುಸಿತ, ಹಲವು ಕಾರುಗಳಿಗೆ ಹಾನಿ

ವೇಣೂರು: ದಕ್ಷಿಣ ಕನ್ನಡ ಜಿಲ್ಲೆಯ ಕರಾವಳಿ ಭಾಗದ ಜೊತೆಗೆ ಘಟ್ಟದ ಮೇಲಿನ ತಾಲೂಕುಗಳಲ್ಲಿಯೂ ಭಾರೀ ಪ್ರಮಾಣದಲ್ಲಿ ಮಳೆಯಾಗುತ್ತಿದ್ದು ವೇಣೂರಿನ ಪಂಚಾಯತ್ ಎದುರಿನಲ್ಲಿರುವ ಧರೆ ಜು.30ರಂದು ಮಧ್ಯಾಹ್ನ ಸುಮಾರಿಗೆ ಕುಸಿತ ಸಂಭವಿಸಿದೆ.

ವೇಣೂರಿನಲ್ಲಿ ಹೆಚ್ಚಿನವರು ಕಾರು ಬೈಕುಗಳನ್ನು ಈ ಸ್ಥಳದಲ್ಲಿಯೇ ಪಾರ್ಕಿಂಗ್ ಮಾಡುತ್ತಿದ್ದರು. ಇಂದು ಕೂಡ ಕೆಲವು ಕಾರುಗಳನ್ನು ಪಾರ್ಕಿಂಗ್ ಮಾಡಲಾಗಿತ್ತು. ಧರೆ ಕುಸಿಯುವ ಸಂದರ್ಭದಲ್ಲಿ ಕೆಲವು ವಾಹನಗಳು ಮಾತ್ರ ಇದ್ದವು.

ವಾಹನಗಳ ಮೇಲೆ ಕಲ್ಲು ಮಣ್ಣು ಬೀಳದೆ, ವಾಹನಗಳನ್ನು ದೂಡಿಕೊಂಡೇ ಧರೆ ಕುಸಿದಿದೆ ಎಂದು ಪ್ರತ್ಯಕ್ಷದರ್ಶಿ ಸುದ್ದಿ ಉದಯಕ್ಕೆ ಮಾಹಿತಿ ನೀಡಿದ್ದಾರೆ.

ಇಗಾಗಲೇ ಪಂಚಾಯತ್ ಆಡಳಿತ ವರ್ಗ ಪರಿಶೀಲನೆ ನಡೆಸಿದ್ದಾರೆ.

Related posts

ಪೆರಿಂಜೆ: ಕಾರು ಹಾಗೂ ರಿಕ್ಷಾ ನಡುವೆ ಭೀಕರ ರಸ್ತೆ ಅಪಘಾತ

Suddi Udaya

ಉಜಿರೆ : ಅತ್ತಾಜೆ ಶತಾಯುಷಿ ಬಿಫಾತಿಮಾ ನಿಧನ

Suddi Udaya

ಮುಂಡಾಜೆ: ವಿಶೇಷ ಚೇತನ ವಾರ್ಷಿಕ ದಿನಾಚರಣೆ ಅಂಗವಾಗಿ ಗ್ರಾಮೀಣ ಪುನರ್ವಸತಿ ಕಾರ್ಯ ವಿಭಾಗದ ವತಿಯಿಂದ ಸಮನ್ವಯ ಗ್ರಾಮ ಸಭೆ ಹಾಗೂ ವಿಕಲ ಚೇತನರಿಗೆ ಮಾಹಿತಿ ಕಾರ್ಯಾಗಾರ

Suddi Udaya

ಉಜಿರೆ : ರತ್ನಮಾನಸ ನಿಲಯದಲ್ಲಿ ಮಕರ ಸಂಕ್ರಾಂತಿ ಆಚರಣೆ

Suddi Udaya

ನ.10 ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ರೆಖ್ಯದಲ್ಲಿ ಮೊಳಗಲಿದೆ ಹಿಂದುತ್ವದ ಘರ್ಜನೆ

Suddi Udaya

ಮರೋಡಿ : ಕಳ್ಳಭಟ್ಟಿ ಶೆಡ್‌ಗೆ ಪೊಲೀಸ್ ದಾಳಿ: ಕಳ್ಳಭಟ್ಟಿ ಸಾರಾಯಿ ‘ ಹಾಗೂ ಇತರ ಸೊತ್ತುಗಳು ವಶ

Suddi Udaya
error: Content is protected !!
ಸುದ್ದಿ ಉದಯ ವಾಟ್ಸಪ್‌ ಗ್ರೂಪ್‌ಗೆ ಸೇರಿ