April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿಸಂಘ-ಸಂಸ್ಥೆಗಳು

ಧರ್ಮಸ್ಥಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆ

ಧರ್ಮಸ್ಥಳ: ಧರ್ಮಸ್ಥಳ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 2023-24ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯು ಜು.30ರಂದು ಸಂಘದ ಸಾಧನ ಕಟ್ಟಡದ ಅಟಲ್ ಜೀ ಸಭಾ ಭವನದಲ್ಲಿ ಸಂಘದ ಅಧ್ಯಕ್ಷ ಪ್ರೀತಮ್ ಡಿ. ಇವರ ಅಧ್ಯಕ್ಷತೆಯಲ್ಲಿ ನಡೆಯಿತು.ಸಂಘವು ಆರ್ಥಿಕ ವರ್ಷದಲ್ಲಿ 55,90,51789 ಸಾಲ ನೀಡಿದ್ದು ನಿವ್ವಳ ರೂ.1,86,83,680/ ಲಾಭ ಗಳಿಸಿದೆ. ಸದಸ್ಯರಿಗೆ ಶೇ.16 ಲಾಭಾಂಶ ಘೋಷಣೆ ಮಾಡಲಾಯಿತು.

ಸಭೆಯಲ್ಲಿ ಸಹಕಾರಿ ಸಂಘದ ಬೆಳವಣಿಗೆಗೆ ಸಂಭಂಧಿಸಿದಂತೆ ಹಲವಾರು ಚರ್ಚೆಗಳು ನಡೆದವು.ಸಾವಿರಾರು ಸಂಖ್ಯೆಯಲ್ಲಿ ಸಭೆಗೆ ಸಂಘದ ಸದಸ್ಯರು ಪಾಲ್ಗೊಂಡು ಉಡುಗೊರೆಯನ್ನು ಪಡೆದರು.

ಉನ್ನತಿ ಕಟ್ಟಡ ಸಮಿತಿ ಸದಸ್ಯರಾದ ಬಿ.ಭುಜಬಲಿ,ರತ್ನವರ್ಮ ಜೈನ್ ಕೆ,ಶ್ರೀಪತಿ ಹೆಬ್ಬಾರ್ ಎಂ,ಸುಂದರ ಗೌಡ ಕೆ,ಹರೀಶ್ ರಾವ್ ಎಂ,ಶ್ರೀನಿವಾಸ್ ರಾವ್,ರಂಗನಾಥ ಎನ್.ಪಿ,ಸತೀಶ್ ಹೊಳ್ಳ ಎನ್,ಬಾಲಕೃಷ್ಣ ರಾವ್ ಇವರುಗಳನ್ನು ಕಾರ್ಯಕ್ರಮದಲ್ಲಿ ಗೌರವಿಸಲಾಯಿತು.

ಉಪಾಧ್ಯಕ್ಷ ಅಜಿತ್ ಕುಮಾರ್ ಜೈನ್, ನಿರ್ದೇಶಕರುಗಳಾದ ಶಾಂಭವಿ ರೈ, ಉಮಾನಾಥ, ಶೀನ, ಧನಲಕ್ಷ್ಮೀ ಜನಾರ್ಧನ, ಪ್ರಭಾಕರ ಗೌಡ ಬೋಲ್ಮ, ನೀಲಾಧರ ಶೆಟ್ಟಿ, ಪ್ರಸನ್ನ ಹೆಬ್ಬಾರ್, ಚಂದ್ರಶೇಖರ, ವಿಕ್ರಮ್ ಗೌಡ, ತಂಗಚ್ಚನ್, ದ. ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ವಲಯ ಮೇಲ್ವಿಚಾರಕ ಸುದರ್ಶನ್ ಕೋಟ್ಯಾನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಎನ್.ಸತೀಶ್ ಹೊಳ್ಳ ವರದಿ ಮತ್ತು ಲೆಕ್ಕ ಪತ್ರ ವಾಚಿಸಿದರು.ಹಿರಿಯ ದೈಹಿಕ ಠೇವಣಿ ಸಂಗ್ರಾಹಕ ಎ.ಎಸ್.ಲೋಕೇಶ್ ಶೆಟ್ಟಿ, ಸಿಬ್ಬಂದಿ ಉಷಾ ಕಾರ್ಯಕ್ರಮ ನಿರ್ವಹಿಸಿದರು.ಸಿಬ್ಬಂದಿಗಳು ಸಹಕರಿಸಿದರು.ಸಂಘದ ಮಾಜಿ ಅಧ್ಯಕ್ಷರುಗಳು, ಮಾಜಿ ನಿರ್ದೇಶಕರು, ಜನಪ್ರತಿನಿಧಿನಗಳು, ಸಂಘದ ಸದಸ್ಯರು ಉಪಸ್ಥಿತರಿದ್ದರು.

ಸಭೆಯಲ್ಲಿ ಸಂಘದ ವ್ಯಾಪ್ತಿಯಲ್ಲಿರುವ ಶಾಲೆಗಳಲ್ಲಿ ಶೈಕ್ಷಣಿಕ ಸಾಧನೆಗೈದ ವಿದ್ಯಾರ್ಥಿಗಳಾದ ದೇವಿಕ,ಸ್ವಸ್ತಿಕ್ ಕುಮಾರ್,ಭಾಗ್ಯ ಎಸ್, ಭಾರ್ಗವಿ, ಪ್ರಾಪ್ತಿ, ಸುಶಾನ್, ಪ್ರಾರ್ಥನಾ, ಸುಮಿತ್ ಎಸ್,ಅನ್ವಿತ ಹೆಬ್ಬಾರ್ ಎಮ್, ಸ್ನೇಹ, ಅಭಿಷೇಕ್ ವೈ.ಎಸ್ ಇವರನ್ನು ಗೌರವಿಸಲಾಯಿತು.

ಸಂಘದ 12 ಮಂದಿ ಹಿರಿಯ ಸಹಕಾರಿ ಸದಸ್ಯರಾದ ಪೂವಣಿ ಗೌಡ,ರಮೇಶ್ ರಾವ್ ಎನ್,ಲೀಲಾ,ನಾರಾಯಣ ಗೌಡ ಕೆ,ಚೋಮ ಮಲೆಕುಡಿಯ,ಉಮಾನಾಥ ಶೆಟ್ಟಿ ಎಂ,ಗೋಪಾಲಕೃಷ್ಣ ಪ್ರಭು ಹೆಚ್,ಗಣೇಶ,ಸರಸ್ವತಿ,ವಿಜಯಲಕ್ಷ್ಮಿ ಎನ್ ಕಾಮತ್,ಉಮಾನಾಥ ಪೈ.ಬಿ, ಕೃಷಿ ಸಾಧಕ ಜಾರಪ್ಪ ಗೌಡ ನಾರ್ಯ,ಶೈಕ್ಷಣಿಕ ಸಾಧಕ ಆಕರ್ಷ್ ಪಿ.ಎಸ್ ಹಾಗೂ ವೆಂಕಪ್ಪ ಗೌಡ,ಸಹಾಯಕ ಕಾರ್ಯನಿರ್ವಾಹಕ ಶ್ರೀನಿವಾಸ್ ನಾಯ್ಕ್ ಇವರನ್ನು ಸನ್ಮಾನಿಸಲಾಯಿತು.

ದೇಶದ ಆರ್ಥಿಕ ಪ್ರಗತಿಯಲ್ಲಿ ಸಹಕಾರಿ ಸಂಘಗಳ ಪಾತ್ರ ಬಹಳ ದೊಡ್ಡದು. ನಮ್ಮ ಸಂಘವು ಆರ್ಥಿಕ ವರ್ಷದಲ್ಲಿ 55,90,51789 ಸಾಲ ನೀಡಿದ್ದು, ನಿವ್ವಳವಾಗಿ ರೂ.1,86,83,680/ ಲಾಭ ಗಳಿಸಿದೆ. ಸದಸ್ಯರಿಗೆ ಶೇ.16 ಲಾಭಾಂಶ ಘೋಷಣೆ ನೀಡಲಾಗಿದೆ.ಸಂಘದ ವತಿಯಿಂದ ರೈತರಿಗೆ ಉಪಯೋಗವಾಗುವಂತ ಹಲವಾರು ಜನಪರ ಕಾರ್ಯಕ್ರಮಗಳನ್ನು ನಡೆಸಲಾಗಿದೆ ಎಂದು ಬ್ಯಾಂಕ್ ನ ಅಧ್ಯಕ್ಷ ಪ್ರೀತಮ್ ಡಿ. ತಿಳಿಸಿದರು.

Related posts

ತಾಲೂಕು ವಿಕಲಚೇತನರ ಪುನರ್ವಸತಿ ಕಾರ್ಯಕರ್ತರ ಪ್ರಗತಿ ಪರಿಶೀಲನ ಸಭೆ

Suddi Udaya

ಬೆಳ್ತಂಗಡಿ : ಹಂಸ ಎಲೆಕ್ಟ್ರಾನಿಕ್ಸ್ ಮತ್ತು ಹೋಮ್ ಅಪ್ಲೆಯನ್ಸ್ & ಫರ್ನಿಚರ್‍ಸ್‌ನಲ್ಲಿ ದೀಪಾವಳಿ ಪ್ರಯುಕ್ತ ವಿಶೇಷ ದರ ಕಡಿತ ಮಾರಾಟ

Suddi Udaya

ಬಳಂಜ:ಯುವ ಬಿಲ್ಲವ ವೇದಿಕೆ ಅಧ್ಯಕ್ಷರಾಗಿ ಶರತ್ ಅಂಚನ್ ಆಯ್ಕೆ

Suddi Udaya

ಲಾಯಿಲ ಶ್ರೀ ಮಹಮ್ಮಾಯಿ ಅಮ್ಮನವರ ದೇವಸ್ಥಾನದಲ್ಲಿ ಮಾರಿ ಪೂಜೆೋತ್ಸವ

Suddi Udaya

ರಕ್ತೇಶ್ವರಿಪದವು ಪೌಷ್ಟಿಕಾಹಾರ ಪೋಷಣ್ ಅಭಿಯಾನ

Suddi Udaya

ವಿಧಾನ ಪರಿಷತ್ ಚುನಾವಣೆ : ಮದುಮಗನಿಂದ ಕೊಕ್ಕಡ ಪಂಚಾಯತ್ ನಲ್ಲಿ ಮತ ಚಲಾವಣೆ

Suddi Udaya
error: Content is protected !!