March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿ

ವೇಣೂರು: ಕರಿಮಣೇಲು ಕಾರ್ಯಕ್ಷೇತ್ರದಲ್ಲಿ ಪೌಷ್ಟಿಕ ಆಹಾರ ಮತ್ತು ಆಟಿಡ್ ಒಂಜಿ ದಿನ ಕಾರ್ಯಕ್ರಮ

ಬೆಳ್ತಂಗಡಿ : ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವೇಣೂರು ವಲಯದ ಕರಿಮಣೇಲು ಕಾರ್ಯ ಕ್ಷೇತ್ರದಲ್ಲಿ ಪೌಷ್ಟಿಕ ಆಹಾರ ಮತ್ತು ಆಟಿಡ್ ಒಂಜಿ ದಿನ ಕಾರ್ಯಕ್ರಮ ವನ್ನು ಹಮ್ಮಿಕೊಳ್ಳಲಾಯಿತು.

ಕಾರ್ಯಕ್ರಮವನ್ನೂ ಒಕ್ಕೂಟದ ಅಧ್ಯಕ್ಷ ವಿಲಿಯಂ ವಿನ್ಸೆಂಟ್ ರೇಗೊರವರು ಉದ್ಘಾಟಿಸಿದರು.
ಬೆಳ್ತಂಗಡಿ ಕ್ಷೇತ್ರ ಶಿಕ್ಷಣ ಆರೋಗ್ಯ ಅಧಿಕಾರಿ ಆಮ್ಮಿ ಇವರು ಕೇಂದ್ರದ ಸದಸ್ಯರಿಗೆ ಪೌಷ್ಟಿಕ ಆಹಾರದ ಬಗ್ಗೆ ಹಾಗೂ ಮಹಿಳೆಯರಲ್ಲಿ ಬರುವಂತಹ ಕೆಲವೊಂದು ಸಮಸ್ಯೆ ಬಗ್ಗೆ ಮಾಹಿತಿ ನೀಡಿದರು.

ತಾಲೂಕು ಜ್ಞಾನ ವಿಕಾಸ ಸಮಣ್ವಯ ಅಧಿಕಾರಿ ಪೂರ್ಣಿಮಾ ಪೌಷ್ಟಿಕ ಆಹಾರದ ಬಗ್ಗೆ ಮಾಹಿತಿ ನೀಡಿದರು. ವಲಯ ಮೇಲ್ವಿಚಾರಕರು ಶಾಲಿನಿ ಯೋಜನೆಯ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಮಾಜಿ ಅಧ್ಯಕ್ಷರು ದೋಗು ನಾಯಕ್ ಸದಸ್ಯರಿಗೆ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು.

ಕೇಂದ್ರದ ಸದಸ್ಯರು ಅಟಿ ತಿಂಗಳಲ್ಲಿ ಸಿಗುವಂತಹ ಪೌಷ್ಟಿಕ ಆಹಾರ ಪದಾರ್ಥಗಳನ್ನು ಮಾಡಿ ತಂದಿದ್ದರು. ಆಟೋಟ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಯಿತು ಇದರಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಸಂಯೋಜಕಿ ಶುಭಲತ ಕಾರ್ಯಕ್ರಮ ನಿರೂಪಿಸಿ, ಸೇವಾ ಪ್ರತಿನಿಧಿ ಶೋಭಾ ಸ್ವಾಗತಿಸಿದರು. ಕಾರ್ಯದರ್ಶಿ ಸಚಿತ ಧನ್ಯವಾದವಿತ್ತರು.

Related posts

ಜೂ.19: ದರ್ಭೆತಡ್ಕ ಸುದೆಗಂಡಿಯಲ್ಲಿ ಕಿರು ಸೇತುವೆಯ ದುರಸ್ತಿ ಕಾರ್ಯ ನಡೆಸಲು ಗ್ರಾಮಸ್ಥರ ಸಭೆ

Suddi Udaya

ಡಾ. ಯು.ಸಿ. ಪೌಲೋಸ್‌ರವರ ಸೇವೆಗೆ “ಭಾರತದ ಜವಾಬ್ದಾರಿಯುತ ಮತ್ತು ಸಕ್ರಿಯ ನಾಗರಿಕ ಪ್ರಶಸ್ತಿ

Suddi Udaya

ಉಜಿರೆಯ ಸಭ್ಯಾ ಹೆಬ್ಬಾರ್ ಗೆ ಪಿಎಚ್ ಡಿ ಪದವಿ

Suddi Udaya

ಉಜಿರೆ ಎಸ್.ಡಿ.ಎಂ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ : ಅಂತಾರಾಷ್ಟ್ರೀಯ ವಿಚಾರ ಸಂಕಿರಣಕ್ಕೆ ಚಾಲನೆ

Suddi Udaya

ಶಿಬಾಜೆ ಗ್ರಾ.ಪಂನಲ್ಲಿ ಉದ್ಯೋಗ ಖಾತರಿ ನಡಿಗೆ ಸುಸ್ಥಿರತೆಯೆಡೆಗೆ , ಮತ್ತು ಮನೆ ಮನೆ ಜಾಥಾ ಅಭಿಯಾನದಡಿ ವಿಶೇಷ ಗ್ರಾಮ ಸಭೆ

Suddi Udaya

ಗುರುವಾಯನಕೆರೆ ಯೋಜನಾ ವ್ಯಾಪ್ತಿಯ ನಾರಾವಿ ವಲಯದ ಸಾವ್ಯಾ -ಕೊಕ್ರಾಡಿ ಕಾರ್ಯಕ್ಷೇತ್ರದಲ್ಲಿ ಪೌಷ್ಟಿಕ ಆಹಾರ ಪ್ರಾತ್ಯಕ್ಷಿಕೆ ಕಾರ್ಯಕ್ರಮ

Suddi Udaya
error: Content is protected !!