ನಡ : ಗ್ರಾಮ ಪಂಚಾಯತ್ ನ 2024-25ನೇ ಸಾಲಿನ ಪ್ರಥಮ ಸುತ್ತಿನ ಗ್ರಾಮ ಸಭೆಯು ಆ. 3ರಂದು ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ಮಂಜುಳಾ ರವರ ಅಧ್ಯಕ್ಷತೆಯಲ್ಲಿ ಅಂಬೇಡ್ಕರ್ ಸಮಾಜ ಭವನದಲ್ಲಿ ನಡೆಯಿತು.
ಮಾರ್ಗದರ್ಶಿ ಅಧಿಕಾರಿಯಾಗಿ ಬೆಳ್ತಂಗಡಿ ಸಹಕಾರ ಅಭಿವೃದ್ಧಿ ಅಧಿಕಾರಿ ಪ್ರತಿಮಾ ರವರು ಗ್ರಾಮ ಸಭೆಯನ್ನು ಮುನ್ನಡೆಸಿದರು.
ಗುತ್ತಿಗೆದಾರರು ಮೋರಿಯ ಕೆಲಸ ಸಮರ್ಪಕವಾಗಿ ಮಾಡದೆ ಕಣಿಯಲ್ಲಿ ಕಸಗಳು ತುಂಬಿ ನೀರು ರಸ್ತೆಯಲ್ಲಿ ಹೋಗುತ್ತಿದೆ. ಹಾಗೂ ರಸ್ತೆ ಬದಿಯಲ್ಲಿ ಕಸವನ್ನು ಹಾಕುವವರ ಮೇಲೆ ಕಠಿಣವಾದ ಕ್ರಮವನ್ನು ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಪಂಚಾಯತ್ ಗೆ ಆಗ್ರಹಿಸಿದರು.
ಗ್ರಾಮ ಪಂಚಾಯತ್ ಅಧ್ಯಕ್ಷೆ ಮಂಜುಳಾ ಮಾತನಾಡಿ ಗ್ರಾಮ ಸಭೆಯಲ್ಲಿ ಗ್ರಾಮಸ್ಥರು ಸರಿಯಾದ ಸಮಯಕ್ಕೆ ಭಾಗವಹಿಸಿ ಗ್ರಾಮ ಸಭೆಯನ್ನು ಯಶಸ್ವಿಯಾಗಿ ನಡೆಸಿ ಕೊಟ್ಟದ್ದಕ್ಕೆ ಅಭಿನಂದಿಸಿದರು.
ಸದಸ್ಯರಾದ ಎನ್.ಬಿ. ಹರಿಶ್ಚಂದ್ರ, ಎ ವಿಜಯ ಗೌಡ, ಸುಕೇಶ್, ಪ್ರವೀಣ್ ವಿ.ಜೆ., ಜಯ ಶೆಟ್ಟಿ, ಲಲಿತ, ಸುಶೀಲ, ಸುಮಿತ್ರ, ಶಶಿಕಲಾ, ವಿನುತಾ, ಮಮತಾ, ಚಂದ್ರಹಾಸ ಗೌಡ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಗ್ರಾಮಸ್ಥರು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಕಾರ್ಯದರ್ಶಿ ಕಿರಣ್ ಅನುಪಾಲನ ವರದಿ ವಾಚಿಸಿ, ಶ್ರೀಮತಿ ಭಾರತಿ ಜಮಾಖರ್ಚು ಮಂಡಿಸಿದರು. ಪಂ. ಅಭಿವೃದ್ಧಿ ಅಧಿಕಾರಿ ಶ್ರೀನಿವಾಸ್ ಡಿ.ಪಿ. ಸ್ವಾಗತಿಸಿದರು. ಸಿಬ್ಬಂದಿ ಶ್ರೀಮತಿ ಮೀನಾಕ್ಷಿ ನಿರೂಪಿಸಿದರು.