24.2 C
ಪುತ್ತೂರು, ಬೆಳ್ತಂಗಡಿ
April 12, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಆ. 10 : ಧರ್ಮಸ್ಥಳದಲ್ಲಿ ರಾಜ್ಯ ಮಟ್ಟದ ಅಂಚೆ-ಕುಂಚ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣೆ:

ಉಜಿರೆ: ಧರ್ಮಸ್ಥಳದ ಶಾಂತಿವನಟ್ರಸ್ಟ್ ಆಶ್ರಯದಲ್ಲಿ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆಯಡಿಯಲ್ಲಿ ಆಯೋಜಿಸಿದ ಇಪ್ಪತ್ತೊಂದನೆ ವರ್ಷದ ರಾಜ್ಯಮಟ್ಟದ ಅಂಚೆ-ಕುಂಚ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣಾ ಸಮಾರಂಭ ಆ. 10 ರಂದು ಧರ್ಮಸ್ಥಳದಲ್ಲಿ ಮಹೋತ್ಸವ ಸಭಾಭವನದಲ್ಲಿ ಪೂರ್ವಾಹ್ನ ಗಂಟೆ 10.30 ರಿಂದ ನಡೆಯಲಿದೆ ಎಂದು ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆಯ ನಿರ್ದೇಶಕ ಶಶಿಕಾಂತ್ ಜೈನ್ ತಿಳಿಸಿದ್ದಾರೆ.


ಚಲನಚಿತ್ರ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಬಹುಮಾನ ವಿತರಿಸುವರು.
ಶಾಂತಿವನ ಟ್ರಸ್ಟ್ ವತಿಯಿಂದ ಪ್ರಕಟಿಸಲಾದ “ಜ್ಞಾನದರ್ಶಿನಿ” ಮತ್ತು “ಜ್ಞಾನವರ್ಷಿನಿ” ಎಂಬ ಮೂವತ್ತನೆ ವರ್ಷದ ನೈತಿಕ ಮೌಲ್ಯಾಧಾರಿತ ಪುಸ್ತಕಗಳನ್ನು ಹಾವೇರಿಯ ಹುಕ್ಕೇರಿ ಮಠದ ನಿರಂಜನ ಪ್ರಣವ ಸ್ವರೂಪಿ ಸದಾಶಿವ ಮಹಾಸ್ವಾಮೀಜಿ ಲೋಕಾರ್ಪಣೆ ಮಾಡುವರು.


ದಕ್ಷಿಣಕನ್ನಡ ಜಿಲ್ಲಾ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪನಿರ್ದೇಶಕ ವೆಂಕಟೇಶ ಸುಬ್ರಾಯ ಪಟಗಾರ ಶುಭಾಶಂಸನೆ ಮಾಡುವರು.
ಧಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಅಧ್ಯಕ್ಷತೆ ವಹಿಸುವರು.
ಮಂಗಳೂರಿನ ಸನಾತನ ನಾಟ್ಯಾಲಯದ ಕಲಾವಿದರಿಂದ ಗಾಯನ ಮತ್ತು ನೃತ್ಯ ಹಾಗೂ ದಾವಣಗೆರೆಯ ಖ್ಯಾತ ಕಲಾವಿದ ಶಾಂತಯ್ಯ ಪರಡಿಮಠ ಅವರಿಂದ ಕುಂಚಕಲಾ ಪ್ರದರ್ಶನ ನಡೆಯಲಿದೆ.

Related posts

ಅಕ್ರಮವಾಗಿ ಚಿಕ್ಕಮಗಳೂರಿನಿಂದ ಸಾಲೆತ್ತೂರಿಗೆ ಗೋವುಗಳ ಸಾಗಾಟ: ವಾಹನ ಹಾಗೂ ಚಾಲಕರನ್ನು ವಶಕ್ಕೆ ಪಡೆದ ಬೆಳ್ತಂಗಡಿ ಪೊಲೀಸರು

Suddi Udaya

ಕಾಜೂರು ದರ್ಗಾ ಹಾಗೂ ರಹ್ಮಾನಿಯಾ ಮಸ್ಜಿದ್ ನಲ್ಲಿ ಈದ್ ಆಚರಣೆ

Suddi Udaya

ಬೆಳ್ತಂಗಡಿ: ಭುಡ್ಣಾರು ಶಕುಂತಲಾ ಶೆಟ್ಟಿ ನಿಧನ

Suddi Udaya

ಚಾತುರ್ಮಾಸ್ಯ ವ್ರತಾಚರಣೆ ಕೈಗೊಂಡಿರುವ ಕನ್ಯಾಡಿ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿಯವರಿಂದ ಆಶೀರ್ವದ ಪಡೆದ ಆರ್ ಎಸ್ ಎಸ್ ಮುಖಂಡ ಡಾ.ಪ್ರಭಾಕರ ಭಟ್ ಕಲ್ಲಡ್ಕ

Suddi Udaya

ಉಜಿರೆ ಎಸ್.ಡಿ.ಎಮ್ ಆಂ.ಮಾ. (ಸಿ.ಬಿ.ಎಸ್.ಇ) ಶಾಲೆಯಲ್ಲಿ ಹಿಂದಿ ದಿನಾಚರಣೆ

Suddi Udaya

ಮುಳಿಯ – ಹೊಸ ಲೋಗೋ- ಅನಾವರಣ : ಮುಳಿಯ ಜುವೆಲ್ಸ್ – ಇನ್ನು ಮುಂದೆ ಮುಳಿಯ ಗೋಲ್ಡ್ ಅಂಡ್ ಡೈಮಂಡ್ಸ್

Suddi Udaya
error: Content is protected !!