ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ಆ.15: ಗುರುವಾಯನಕೆರೆ ವಿದ್ವತ್ ಪಿಯು ಕಾಲೇಜಿನಲ್ಲಿ ‘ವಿಜ್ಞಾನ – ವಿಸ್ಮಯ ಮತ್ತು ಕುತೂಹಲ’ – ವಿಮರ್ಶಾ ಕಾರ್ಯಾಗಾರ

ಗುರುವಾಯನಕೆರೆ: 78ನೇ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ವಿದ್ವತ್ ಪಿಯು ಕಾಲೇಜಿನಲ್ಲಿ ‘ವಿಜ್ಞಾನ ವಿಸ್ಮಯ ಮತ್ತು ಕುತೂಹಲ’ ಎಂಬ ಶೀರ್ಷಿಕೆಯಡಿಯಲ್ಲಿ ಆ.15 ರ ಬೆಳಗ್ಗೆ ೧೧.೩೦ಕ್ಕೆ ಕಾಲೇಜಿನ ಸಭಾಂಗಣದಲ್ಲಿ ವಿನೂತನ ಕಾರ್ಯಗಾರವನ್ನು ಹಮ್ಮಿಕೊಳ್ಳಲಾಗಿದೆ.

ಜಗತ್ತಿನ ವಿಸ್ಮಯಕ್ಕೆ ಒಳಗಣ್ಣು ತೆರೆದಿಟ್ಟು, ಅನುಭವಿಸಿ, ಅರ್ಥೈಸಿ, ವಿವೇಚನೆಗೊಳಪಡಿಸುವ ವಿಶೇಷ ಸಂವಾದ ಇದಾಗಿದ್ದು, ಯುವ ಮನಸ್ಸುಗಳ ಮೇಲೆ ವೈಜ್ಞಾನಿಕ ವಿಶ್ಲೇಷಣೆಯ ಪ್ರಭಾವ ಬೀರಿ ಊಹೆಗೆ ನಿಲುಕದ ಪ್ರಕೃತಿಯ ವಿಸ್ಮಯವನ್ನು ಅರ್ಥೈಸಿಕೊಳ್ಳುವ ಒಂದು ವಿಶೇಷ ಪ್ರಯತ್ನ ಇದಾಗಿದೆ. ಸಾಂಪ್ರದಾಯಿಕ ಪಾಠ – ಪ್ರವಚನ ಮತ್ತು ಪರೀಕ್ಷಾ ಪದ್ದತಿಗಿಂತ ವಿಭಿನ್ನವಾಗಿ ಅಲೋಚಿಸುವ ಪ್ರಯತ್ನ ಇದಾಗಿದೆ.

ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ವಿದ್ವತ್ ಪಿಯು ಕಾಲೇಜಿನ ಶೈಕ್ಷಣಿಕ ನಿರ್ದೇಶಕ ಗಂಗಾಧರ ಈ. ಮಂಡಗಳಲೆ, ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ರಾಮಚಂದ್ರ ಎಮ್.ಎಸ್. ಹಾಗೂ ರಸಾಯನಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರತಾಪ್ ದೊಡ್ಡಮನೆ ಇವರು ತಮ್ಮ ಸುದೀರ್ಘ ಶೈಕ್ಷಣಿಕ ಅನುಭವದ ಆಧಾರದ ಮೇಲೆ ವಿಜ್ಞಾನದ ವಿಸ್ಮಯವನ್ನು ವ್ಯಾಖ್ಯಾನಿಸಲಿದ್ದಾರೆ. ಈ ಅಪರೂಪದ ಕಾರ್ಯಗಾರಕ್ಕೆ ಆಸಕ್ತ ಪ್ರೌಢಶಾಲಾ ಹಾಗೂ ಪಿಯು ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಬಹುದಾಗಿದೆ ಎಂದು ಸಂಸ್ಥೆಯ ಅಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿಯವರು ತಿಳಿಸಿದ್ದಾರೆ.

ಭಾಗವಹಿಸಲು ಈ ಕೆಳಗಿನ ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ : 7618718791  9483942186

Related posts

ಹೈಕೋರ್ಟ್ ನ ಹಿರಿಯ ನ್ಯಾಯವಾದಿ ಬಾಲನ್ ಬೆಳ್ತಂಗಡಿ ನ್ಯಾಯಾಲಯಕ್ಕೆ ಭೇಟಿ

Suddi Udaya

ಉಜಿರೆ: ಪೆರ್ಲ ನಿವಾಸಿ ಕೃಷ್ಣಪ್ಪ ಪೂಜಾರಿ ನಿಧನ

Suddi Udaya

ಮಚ್ಚಿನ ಸ.ಉ.ಹಿ.ಪ್ರಾ. ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ

Suddi Udaya

ಬಿ.ವಿ.ಎಫ್. ಬೆಳ್ತಂಗಡಿ ತಾ. ಘಟಕದಿಂದ ’ಭಾರತೀಯ ಸಂವಿಧಾನ ದಿನಾಚರಣೆ’

Suddi Udaya

ಕೊಯ್ಯೂರು ಕ್ರಾಸ್ ನಿಂದ ಅರ್ಬಿ ಕಿರಿಯಾಡಿ, ಗಾಂಧಿನಗರ, ಕಾಶಿಬೆಟ್ಟು ಸಂಪರ್ಕಿಸುವ ಮಣ್ಣಿನ ರಸ್ತೆ ಸಂಪೂರ್ಣ ಕೆಸರುಮಯ: ಶೀಘ್ರವಾಗಿ ದುರಸ್ಥಿಗೊಳಿಸುವಂತೆ ಗ್ರಾಮಸ್ಥರ ಒತ್ತಾಯ

Suddi Udaya

ಶಿಶಿಲ: ಕಾರೆಗುಡ್ಡೆ ದಿ. ಪ್ರವೀಣ್ ರವರ ಮನೆಯವರಿಗೆ ದೀಪಾವಳಿ ಪ್ರಯುಕ್ತ ಬಟ್ಟೆ ಹಾಗೂ ಧನ ಸಹಾಯ

Suddi Udaya
error: Content is protected !!