April 4, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂ.ಮಾ. ಶಾಲೆಯಲ್ಲಿ ಸಂಭ್ರಮದ ಸ್ವಾತಂತ್ರ್ಯ ದಿನಾಚರಣೆ

ಧರ್ಮಸ್ಥಳ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆ, ಧರ್ಮಸ್ಥಳದಲ್ಲಿ ಅತ್ಯಂತ ಸಂಭ್ರಮದಿಂದ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು.

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ನಿವೃತ್ತ ಸೈನಿಕರಾಗಿರುವ ತಂಗಚ್ಚನ್ ಇವರು ಧ್ವಜಾರೋಹಣವನ್ನು ಮಾಡಿದರು. ವಿದ್ಯಾರ್ಥಿಗಳು ರಾಷ್ಟ್ರಗೀತೆ ಧ್ವಜ ಗೀತೆ ಹಾಗೂ ವಂದೇ ಮಾತರಂ ಗೀತೆಯೊಂದಿಗೆ ಧ್ವಜಕ್ಕೆ ಗೌರವವನ್ನು ಸಲ್ಲಿಸಿದರು. ಬಳಿಕ ವಿದ್ಯಾರ್ಥಿಗಳು ಉಳುವ ಯೋಗಿಯ ನೋಡಲ್ಲಿ ಎಂಬ ಪ್ರಾರ್ಥನಾ ಗೀತೆಯೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರಾರಂಭಿಸಿದರು. ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಪರಿಮಳ ಎಂ ವಿ ಪ್ರಾಸ್ತಾವಿಕ ಮಾತನಾಡಿ ಸ್ವಾತಂತ್ರ್ಯ ದಿನಾಚರಣೆಯ ಮಹತ್ವ ವಿವರಿಸಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿರುವ ತಂಗಚ್ಚನ್ ಘರ್ ಘರ್ ಮೇ ಸ್ವಾತಂತ್ರ್ಯದ ಮಹತ್ವ, ಸ್ವಾತಂತ್ರ್ಯ ದೊರಕಿದ ತ್ಯಾಗಿಗಳ ತ್ಯಾಗ ಅದನ್ನು ಉಳಿಸಲು ಈಗಲೂ ಶ್ರಮವಹಿಸಿ ದುಡಿಯುತ್ತಿರುವ ಗಂಡೆದೆಯ ವೀರರ ಶ್ರಮ ಇತ್ಯಾದಿಗಳನ್ನು ಬಹಳ ಸುಂದರವಾಗಿ ವಿವರಿಸಿದರು. ನಂತರ ವಿದ್ಯಾರ್ಥಿಗಳು ಹಾಡು ನೃತ್ಯ ಭಾಷಣಗಳ ಮುಖಾಂತರ ದೇಶಭಕ್ತಿಯನ್ನು ಬಿಂಬಿಸುವ ಬೆಳೆಸುವ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡಿದರು.

ವಿದ್ಯಾರ್ಥಿನಿ ಕು.ಧನ್ಯ ಶ್ರೀ ನಿರೂಪಿಸಿದ ಕಾರ್ಯಕ್ರಮದಲ್ಲಿ ಕ್ಷಮಾ ಸ್ವಾಗತಿಸಿ ಕುಮಾರಿ ನಿವೇಧ್ಯ ಅತಿಥಿಗಳ ಕಿರು ಪರಿಚಯವನ್ನು ನೀಡಿ ಕು.ಅಂಜನಾ ವಂದಿಸಿದರು. ಶಾಲಾ ಶಿಕ್ಷಕ ಹಾಗೂ ಶಿಕ್ಷಕೇತರ ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಈ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.

ಸ್ವಾತಂತ್ರ್ಯ ದಿನಾಚರಣೆಯ ಈ ಸಂದರ್ಭದಲ್ಲಿ ಕೆಇ.ಬಿ ಯಲ್ಲಿ ಗಾಳಿ ಮಳೆಗೆ ಕೆಲಸ ಮಾಡುತ್ತಿರುವ ಲೈನ್ ಮ್ಯಾನ್ ಹಾಗೂ ಕಟು ರಸ್ತೆಯಲ್ಲೂ ನಿರ್ಭಯವಾಗಿ ಚಲಿಸಿ ದೊಡ್ಡ ಮುಟ್ಟಿಸುತ್ತಿರುವ ಕೆ ಎಸ್ ಆರ್ ಟಿ ಸಿ ಯ ಚಾಲಕರಿಗೆ ಸನ್ಮಾನಿಸಿ ಆ ಮೂಲಕ ಅಭಿನಂದನೆ ಸಲ್ಲಿಸಲಾಯಿತು. ತನು ಸ್ಪಂದಿಸದವರಿಗೆ ಮನ ಸ್ಪಂದಿಸುವ ಕಾರ್ಯಕ್ರಮ ತುಡಿತ ಭಾಗ ಮೂರು ಹಾಸಿಗೆ ಬಿಟ್ಟು ಮೇಲೆ ಹೇಳಲಾಗದವರ ಮನೆ ಮನೆಗೆ ಭೇಟಿ ತೆರಳಿ, ಹಣ್ಣು ಹಂಪಲು ನೀಡಿ ಕೈಲಾದ ಸಹಾಯಧನ ನೀಡಿದರು.

Related posts

ನಾಳೆ(ಅ.31) ಬೆಳ್ತಂಗಡಿಯಲ್ಲಿ ಬಿಜೆಪಿ ಯುವಮೋರ್ಚಾದಿಂದ ದೀಪಾವಳಿ ದೋಸೆ ಹಬ್ಬ: ಗೋರಕ್ಷಕ ಪುನೀತ್ ಕೆರೆಹಳ್ಳಿ ಭಾಗಿ

Suddi Udaya

ಬೆಳಾಲು ಪ್ರೌಢಶಾಲೆ ಪೋಷಕರ ಸಮಾವೇಶ

Suddi Udaya

ನಡ:ಯುವವಾಹಿನಿ ಡೆನ್ನಾನ ಡೆನ್ನನ 2024 ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ನೆಲ್ಯಾಡಿ ಸೂರ್ಯನಗರ ಶ್ರೀರಾಮ ವಿದ್ಯಾಲಯದ ವಿದ್ಯಾರ್ಥಿ ಚಿರಾಯು.ಸಿ. ಕೊಕ್ಕಡ ಕರಾಟೆಯಲ್ಲಿ ರಾಜ್ಯಕ್ಕೆ ದ್ವಿತೀಯ

Suddi Udaya

ನಾಳ: ಚಂದ್ರ ಮಂಡಲ ರಥಕ್ಕೆ ಕಲಶಾಭಿಷೇಕ ದೈವಗಳಿಗೆ ಪಲ್ಲಕಿ ಸಮರ್ಪಣೆ

Suddi Udaya

ಗುರುವಾಯನಕೆರೆ ವಿಜಯ ಕ್ರೆಡಿಟ್ ಕೋ- ಆಪರೇಟಿವ್ ಸೊಸೈಟಿಗೆ ದ‌.ಕ ಜಿಲ್ಲಾ ಕೇಂದ್ರ ಬ್ಯಾಂಕ್ ನಿಂದ ಸಾಧನಾ ಪ್ರಶಸ್ತಿ

Suddi Udaya
error: Content is protected !!