ಬೆಳ್ತಂಗಡಿ : ಮುಹಿಯುದ್ದೀನ್ ಜುಮಾ ಮಸೀದಿ ಮುರ – ನಾವೂರು ಇಲ್ಲಿನ ನೂರುಲ್ ಹುದಾ ಮದರಸ ವಠಾರದಲ್ಲಿ 78 ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮ ಬಹಳ ವಿಜೃಂಭಣೆಯಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಮಾಅತ್ ಕಮಿಟಿ ಅಧ್ಯಕ್ಷರಾದ ಎನ್. ಕೆ ಹಸೈನಾರ್ ವಹಿಸಿದ್ದರು. ಎಂಜೆಎಂ ಮುರ ಇಲ್ಲಿನ ಖತೀಬ್ ಬಶೀರ್ ಸಅದಿ ದುಆ ಹಾಗೂ ಸಂದೇಶ ಭಾಷಣ ಮಾಡುತ್ತಾ ಹಲವು ಮಂದಿ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಬಲಿದಾನದಿಂದ ದೇಶಕ್ಕೆ ಸ್ವಾತಂತ್ರ್ಯ ಲಭಿಸಿದ್ದು,ಅದನ್ನು ಉಳಿಸಿಕೊಳ್ಳಲು ಯಾವ ತ್ಯಾಗಕ್ಕೂ ನಾವು ಸನ್ನದ್ಧರಾಗಬೇಕಿಗಿದೆ ಎಂದರು.
ನೂರುಲ್ ಹುದಾ ಮದರಸದ ಸದರ್ ಮುಅಲ್ಲಿಮ್ ಅಬ್ದುಲ್ ಹಮೀದ್ ಝುಹರಿ, ಮುಹಿಯುದ್ದೀನ್ ಜುಮಾ ಮಸೀದಿ ಪ್ರ.ಕಾರ್ಯದರ್ಶಿ ಅಬ್ದುಲ್ ಖಾದರ್ ನಾವೂರು ಸ್ವಾತಂತ್ರ್ಯ ಹೋರಾಟಗಾರರ ಚರಿತ್ರೆಯನ್ನು ಸಭೆಯ ಮುಂದಿಟ್ಟರು.
ವೇದಿಕೆಯಲ್ಲಿ ಜಮಾಅತ್ ಉಪಾಧ್ಯಕ್ಷ ಮುಹಮ್ಮದ್ ಮುಸ್ಲಿಯಾರ್, ಕೋಶಾಧಿಕಾರಿ ಇಬ್ರಾಹಿಂ ಎನ್. ಎ, ಕಾರ್ಯದರ್ಶಿಗಳಾದ ಸುಲೈಮಾನ್ ಪಿ.ವೈ, ಸ್ವಾದಿಕ್ ನಾವೂರು, ಜಮಾಅತ್ ಕಮಿಟಿ ಸದಸ್ಯರುಗಳಾದ ಹಸನಬ್ಬ ನಿoರ್ದಿ, ಮುಹಮ್ಮದ್ ಪಿ.ಎಂ ಮುರ, ಅಬ್ದುಲ್ ರಹಿಮಾನ್ ಮುಸ್ಲಿಯಾರ್, ಇಸ್ಮಾಯಿಲ್ ಕಿರ್ನಡ್ಕ, ಪಿ.ಯು ಅಲಿಕುಂಞ ಸಖಾಫಿ, ಮದರಸ ಅಧ್ಯಾಪಕರಾದ ಹನೀಫ್ ಸಖಾಫಿ, ಸಿದ್ದೀಕ್ ಸಖಾಫಿ, ಷರೀಫ್ ಮುಸ್ಲಿಯಾರ್, ಖಾಲಿದ್ ಮದನಿ, ಎಂಜೆಎಂ ನ ಎಲ್ಲಾ ಅಂಗಸಂಸ್ಥೆಗಳ ನಾಯಕರು, ಮದರಸ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಮದರಸ ವಿದ್ಯಾರ್ಥಿಗಳಿಗೆ ನಡೆಸಿದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ಸ್ಪರ್ಧಾ ವಿಜೇತರಿಗೆ ಬೆಳ್ತಂಗಡಿ ಇಮೇಜ್ ಮೊಬೈಲ್ ಮಾಲಕರಾದ ಅಝರ್ ಎನ್. ಕೆ ಪ್ರಶಸ್ತಿ ಪ್ರಧಾನ ಮಾಡಿದರು. ಕಾರ್ಯಕ್ರಮದ ಕೊನೆಯಲ್ಲಿ ಸಿಹಿತಿಂಡಿ ವಿತರಿಸಿ ಸಂಭ್ರಮಿಸಲಾಯಿತು.