April 11, 2025
ಅಪಘಾತಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಬೆಳ್ತಂಗಡಿ:ರಸ್ತೆ ಅಪಘಾತದಲ್ಲಿ ಗಂಭೀರ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ಪ್ರತಿಭಾನ್ವಿತ ವಿದ್ಯಾರ್ಥಿ ಸಾವು

ಬೆಳ್ತಂಗಡಿ: ಕಳೆದ ನಾಲ್ಕು ದಿವಸದ ಹಿಂದೆ ಕೊಯ್ಯೂರು ಬೆಳಾಲು ರಸ್ತೆಯಲ್ಲಿ ಪಿಕಪ್ ಮತ್ತು ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಗಂಭೀರ ಗಾಯಗೊಂಡ ಬೈಕ್ ಸವಾರ ಪ್ರತಿಭಾನ್ವಿತ ವಿದ್ಯಾರ್ಥಿ ಚಿಕಿತ್ಸೆ ಫಲಿಸದೆ ಇಂದು ನಿಧನರಾಗಿದ್ದಾರೆ.ಬೆಳಾಲು ಗ್ರಾಮದ ನಿವಾಸಿ ಉಮೇಶ್ ಗೌಡ ರವರ ಪುತ್ರ,ಗುರುವಾಯನಕೆರೆ ಖಾಸಾಗಿ‌ ಕಾಲೇಜಿನ ಪಿಯುಸಿ ವಿಜ್ಞಾನ ವಿಭಾಗದ ಪ್ರತಿಭಾನ್ವಿತ ವಿದ್ಯಾರ್ಥಿ ಜೀವ ಎಂದಿನಂತೆ ಮನೆಯಿಂದ ಬೈಕ್ ನಲ್ಲಿ ಗೆಳೆನ ಮನೆಯವರೆಗೆ ಬರುತ್ತಿರುವಾಗ ಮಲೆಬೆಟ್ಟು ನಿನ್ನಿಕಲ್ಲು ಎಂಬಲ್ಲಿ ಬೆಳಿಗ್ಗೆ ಪಿಕಪ್ ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಬೈಕ್ ಸವಾರ ಜೀವ ಅವರಿಗೆ ಗಂಭೀರ ಗಾಯಗೊಂಡಿದ್ದು ಕೂಡಲೇ ಚಿಕಿತ್ಸೆಗೆ ಮಂಗಳೂರಿನ ಖಾಸಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಂದು ಚಿಕಿತ್ಸೆಗೆ ಸ್ಪಂದಿಸದೆ ನಿಧನರಾಗಿದ್ದಾರೆ.ಇವರು ತಂದೆ ಉಮೇಶ್ ಗೌಡ,ತಾಯಿ ಕವಿತಾ ಹಾಗೂ ಸಹೋದರ ಮತ್ತು ಕುಟುಂಬ ವರ್ಗದವರನ್ನು ಅಗಲಿದ್ದಾರೆ

Related posts

ಮರೋಡಿ ಶ್ರೀ ಉಮಾಮಹೇಶ್ವರ ದೇವರಿಗೆ ಅಷ್ಟಬಂಧ ಬ್ರಹ್ಮಕಲಶಾಭಿಷೇಕ: ತೋರಣ ಮುಹೂರ್ತ

Suddi Udaya

ನಡ ಸರಕಾರಿ ಪ್ರೌಢ ಶಾಲೆಯಲ್ಲಿ ‘ಗಣಿತ ಸಂಘದ ಉದ್ಘಾಟನೆ’

Suddi Udaya

ಕೆರೆಗೆ ಜಾರಿ ಬಿದ್ದು ಗರ್ಡಾಡಿ ನಿವಾಸಿ ನವ ವಿವಾಹಿತ ಸಾವು

Suddi Udaya

ಕಳೆ0ಜ :ಆನೆ ದಾಳಿ ಅಡಿಕೆ ಗಿಡ ಮತ್ತು ಬಾಳೆ ಗಿಡ ಸಂಪೂರ್ಣ ನಾಶ

Suddi Udaya

ಕಳೆಂಜ : ಶಾಸಕ ಹರೀಶ್ ಪೂಂಜರ ಅನುದಾನದಲ್ಲಿ ಕಾಯರ್ತಡ್ಕ ಕುಲಾಡಿ ಸಂಪರ್ಕ ರಸ್ತೆಯ ಕಾಂಕ್ರಿಟೀಕರಣ ಕಾಮಗಾರಿ ಪೂರ್ಣ

Suddi Udaya

ತೆಕ್ಕಾರು ಗೋಪಾಲಕೃಷ್ಣ ದೇವಸ್ಥಾನದ ಬ್ರಹ್ಮಕಲಶೋತ್ಸವದ ಅನ್ನದಾನ ಸೇವೆಯ ಕರಪತ್ರ ಬಿಡುಗಡೆ

Suddi Udaya
error: Content is protected !!