24.4 C
ಪುತ್ತೂರು, ಬೆಳ್ತಂಗಡಿ
April 4, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಲಾಯಿಲ: ಕುಂಟಿನಿ ಮುಹಿಯ್ಯುದ್ಧೀನ್ ಅರಬಿಕ್ ಮದರಸ ನೂತನ ಕಟ್ಟಡ ಉದ್ಘಾಟನೆ

ಲಾಯಿಲ: ಮುಹಿಯ್ಯುದ್ಧೀನ್ ಅರಬಿಕ್ ಮದರಸ ಕುಂಟಿನಿ ಇದರ ನೂತನ ಮದರಸ ಕಟ್ಟಡ ಉದ್ಘಾಟನಾ ಸಮಾರಂಭ ಆ. 16ರಂದು ಜುಮಾ ನಮಾಝಿನ ನಂತರ ನಡೆಯಿತು.

ಉದ್ಘಾಟನೆಯನ್ನು ಕಾಜೂರು ತಂಙಳಾದ ಅಸ್ಸಯ್ಯಿದ್ ಝೈನುಲ್ ಆಬಿದೀನ್ ನೆರವೇರಿಸಿ ದುವಾ ಆಶೀರ್ವಚನ ನೀಡಿದರು.

ಈ ಸಂದರ್ಭದಲ್ಲಿ ಕಟ್ಟಡ ಕಾಮಗಾರಿಗಾಗಿ ಹಗಲಿರುಳು ಶ್ರಮಿಸಿದ ಅಲ್-ಬುಖಾರಿ ಜುಮಾ ಮಸೀದಿಯ ಅಧ್ಯಕ್ಷರಾದ ಇಸ್ಮಾಯಿಲ್ ಸನಾ ಇವರನ್ನು ಪ್ರೀತಿಪೂರ್ವಕವಾಗಿ ಸನ್ಮಾನಿಸಲಾಯಿತು. ಅದೇ ರೀತಿ ಕಟ್ಟಡ ಕಾಮಗಾರಿಯನ್ನು ಕೇವಲ ಐದು ತಿಂಗಳಲ್ಲಿ ಪೂರ್ತಿಗೊಳಿಸಿಕೊಟ್ಟ ಕಾಂಟ್ರಾಕ್ಟರಾದ ರಿಯಾಝ್ ಪಾದೆ ಇವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭ ವೇದಿಕೆಯಲ್ಲಿ ಕೇಂದ್ರ ಜುಮಾ ಮಸೀದಿ ಅಧ್ಯಕ್ಷರಾದ ಬಿ.ಎಂ. ಅಬ್ದುಲ್ ಹಮೀದ್ ಹಾಜಿ, ಕಾರ್ಯದರ್ಶಿ ಮಹಮ್ಮದ್ ಕೆ.ಎಸ್.ಆರ್.ಟಿ.ಸಿ., ಖತೀಬರಾದ ಮಹಮ್ಮದ್ ಶರೀಫ್ ಸಖಾಫಿ, ಅಧ್ಯಾಪಕರಾದ ಸೈಫುದ್ಧೀನ್ ಹಾಸಿಮಿ, ಎಲ್ಲಾ ಕರಿಯದ ಅಧ್ಯಕ್ಷರು, ಕಾರ್ಯದರ್ಶಿಗಳು ಹಾಗೂ ಜಮಾಅತ್ ಬಾಂಧವರು ಉಪಸ್ಥಿತರಿದ್ದರು. ಸದರ್ ಉಸ್ತಾದರಾದ ಉಮರುಲ್ ಫಾರೂಕ್ ಸಅದಿ ಸ್ವಾಗತ ನೆರವೇರಿಸಿ ಧನ್ಯವಾದವಿತ್ತರು.

Related posts

ರಾಷ್ಟೋತ್ಥಾನ ಪರಿಷತ್ತಿನ ಮಾಸಪತ್ರಿಕೆ ಉತ್ಥಾನ ಬಿಡುಗಡೆ

Suddi Udaya

ಬಜಿರೆ ಹೊಸಪಟ್ಣ ಪೇರಂದಡ್ಕ ನಿವಾಸಿ ಸುಂದರಿ ನಿಧನ

Suddi Udaya

ಬೆಳ್ತಂಗಡಿ 45ನೇ ವರ್ಷದ ಸಾರ್ವಜನಿಕ ಶ್ರೀ ಶಾರದೋತ್ಸವಕ್ಕೆ ಚಾಲನೆ

Suddi Udaya

ಪೆರಾಲ್ದರಕಟ್ಟೆ ಎಸ್.ಕೆ.ಎಸ್.ಎಸ್.ಎಫ್ ಶಾಖೆಯ ಪದಾಧಿಕಾರಿಗಳ ಆಯ್ಕೆ

Suddi Udaya

ನೇಲ್ಯಡ್ಕ ಸರ್ಕಾರಿ ಪ್ರೌಢಶಾಲೆಗೆ ಮಂಗಳೂರಿನ ಎಂಸಿಸಿ ಬ್ಯಾಂಕ್ ನಿಂದ ಕ್ರೀಡಾ ಉಪಕರಣಗಳ ಕೊಡುಗೆ

Suddi Udaya

ದಿ. ವೀರಪ್ಪ ನಲ್ಕೆ ಪುಣ್ಯ ಸ್ಮರಣಾರ್ಥ ವಿದ್ಯಾರ್ಥಿಗಳಿಗೆ ಪುಸ್ತಕ, ಪೆನ್ನು ವಿತರಣೆ

Suddi Udaya
error: Content is protected !!